Coronavirus Karnataka
Mar 29, 2020, 3:46 PM IST
ಹಾಸನ(ಮಾ.29): ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮಂಚನಹಳ್ಳಿಯಲ್ಲಿ ನಿನ್ನೆ(ಶನಿವಾರ) ತಡರಾತ್ರಿ ನಡೆದಿದೆ. ಮೃತ 52 ವರ್ಷದ ವ್ಯಕ್ತಿ ಮೂರು ದಿನದ ಹಿಂದಷ್ಟೇ ಮುಂಬೈನಿಂದ ಬಂದಿದ್ದರು.
ಕೊರೋನಾ ಎಫೆಕ್ಟ್: ಮದ್ಯ ಸಿಗದಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ
ಆರೋಗ್ಯಾಧಿಕಾರಿಗಳು 14 ದಿನ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಿದ್ದರು. ನಿನ್ನೆ ರಾತ್ರಿ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊರೋನಾ ಆತಂಕಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.