Coronavirus Karnataka
Mar 23, 2020, 8:51 PM IST
ಬೆಂಗಳೂರು(ಮಾ.23): ಕರ್ನಾಟಕದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಸಿಗುತ್ತಿಲ್ಲ, ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಅನ್ನೋ ಆರೋಪಗಳು ಕೇಳುತ್ತಲೇ ಇದೆ. ಇದೀಗ ಮುಖ್ಯಮಂತ್ರಿ ಬಿಎಸ್ ಯಡಿರೂಪ್ಪನವರಿಗೇ ಮಾಸ್ಕ್ ಸಿಗದ ಘಟನೆ ನಡೆದಿದೆ. ವಿಧಾನಸೌದಕ್ಕೆ ಪ್ರವೇಶಿಸುವಾಗಿ ಮಾಸ್ಕ್ ಧರಿಸಲು ಮುಖ್ಯಮಂತ್ರಿಗೆ ಮಾಸ್ಕ್ ಸಿಗಲಿಲ್ಲ ಎಂದರೆ ಇನ್ನು ಸಾಮಾನ್ಯರ ಗತಿ ಏನು ಅನ್ನೋ ಪ್ರಶ್ನೆ ಎದುರಾಗಿದೆ.