Coronavirus Karnataka
Mar 29, 2020, 9:44 PM IST
ಚಿಕ್ಕಬಳ್ಳಾಪುರ, (ಮಾ.29): ಕಿಲ್ಲರ್ ಕೊರೋನಾ ವೈರಸ್ ತಂದಿಟ್ಟ ಅನಾಹುತ ಅಷ್ಟಿಷ್ಟಲ್ಲ. ಜನರ ಕೆಲಸ, ದುಡಿಮೆ ಕಿತ್ತುಕೊಂಡು ಕೈಯಲ್ಲಿ ಹಣ ಇಲ್ಲದಂತೆ ಮಾಡಿಬಿಟ್ಟಿದೆ. ಇದರಿಂದ ಆರ್‌ಬಿಐ, ಸಾಲಗಳ EMIಗಳನ್ನು ಜೂನ್ ವರಗೆ ವಿನಾಯಿತಿ ನೀಡಿದೆ.
ಕೊರೋನಾ ಭೀತಿಯ ನಡುವೆ ವಿದ್ಯುತ್ ಗ್ರಾಹಕರಿಗೆ ರಿಲೀಫ್..!
ಅಷ್ಟೇ ಅಲ್ಲದೇ ಜನರು ಕಷ್ಟಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಇದೀಗ ಸಂಘ-ಸಂಸ್ಥೆಗಳು ಮೈಕ್ರೋ ಫೈನಾನ್ಸ್‌ಗಳು ಜನರ ಬಳಿ ಸಾಲಕ್ಕೆ ಒತ್ತಾಯಿಸುವಂತಿಲ್ಲ ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.