Nov 13, 2023, 2:56 PM IST
ಸೂಪರ್ ಸ್ಟಾರ್ ರಜನಿಕಾಂತ್. ವಯಸ್ಸು 72. ಇನ್ನೇನು ಬೆಳ್ಳಿತೆರೆ ಮೇಲೆ ರಜನಿಕಾಂತ್ ವೈಭವ ಕಣ್ಮರೆಯಾಗ್ತಿದೆ ಬಿಡಿ ಅಂತ ಹೇಳಿದವೇ ಹೆಚ್ಚು. ಆದ್ರೆ ಅವರಿಗೆಲ್ಲಾ ಸರಿಯಾಗೆ ಉತ್ತರ ಕೊಟ್ಟಿದ್ದು ಜೈಲರ್ ಸಿನಿಮಾ. ಜೈಲರ್ ಮೂವಿ ಬರೋ ಮೊದಲು ರಜನಿಕಾಂತ್(Rajinikanth) ನಟಿಸಿದ್ದ ಅಣ್ಣಾತೆ ದೊಡ್ಡ ಹಿಟ್ ಆಗ್ಲಿಲ್ಲ. ದರ್ಬಾರ್ ಸಿನಿಮಾ ಬಾಕ್ಸಾಫೀಸ್ನಲ್ಲಿ ನಿರೀಕ್ಷಿಸಿದಷ್ಟು ದರ್ಬಾರ್ ಮಾಡ್ಲಿಲ್ಲ. ಪೇಟ ಸಿನಿಮಾವಂತೂ ಸಿನಿಮಾ ವಿತರಣೆ ಮಾಡಿದವರಿಗೆ ಲಾಭ ತಂದುಕೊಡ್ಲಿಲ್ಲ. ಆದ್ರೆ ಜೈಲರ್ (Jailer) ಸಿನಿಮಾ 650 ಕೋಟಿ ಗಳಿಸಿ ಸೂಪರ್ ಹಿಟ್ ಆಯ್ತು. ಅದಕ್ಕೆ ಕಾರಣ ಜೈಲರ್ನಲ್ಲಿ ರಜನಿಕಾಂತ್ ಬಳಸಿದ್ದ ಈ ಫಾರ್ಮುಲಾ. ರಜನಿಕಾಂತ್ ಒಂದ್ ಟೈಂಣಲ್ಲಿ ಬೆಳ್ಳಿತೆರೆ ಮೇಲೆ ಒಂಟಿಯಾಗಿ ಹೋರಾಡಿ ಹಿಟ್ ಸಿನಿಮಾಗಳನ್ನ ಕೊಡುತ್ತಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಸೂಪರ್ ಸ್ಟಾರ್ಸ್ ಸಿನಿಮಾಗಳಲ್ಲಿ ಪರ ಭಾಷೆಯ ಸ್ಟಾರ್ಗಳು ವಿಜೃಂಬಿಸುತ್ತಾರೆ. ಜೈಲರ್‌ನಲ್ಲಿ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಮಾಲಿವುಟ್‌ನ ಮೋಹನ್ ಲಾಲ್ ಎಂಟ್ರಿ ಕೊಟ್ಟು ಜೈಲರ್ ಬಲ ತುಂಬಿದ್ರು. ಇದ್ರಿಂದ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ಈಗ ಬಿಗ್ ಹಿಟ್ ಸಿನಿಮಾಗಳಿಗಾಗಿ ರಜನಿಕಾಂತ್ ಅದೇ ಫಾರ್ಮುಲಾವನ್ನ ಕಂಟಿನ್ಯೂ ಮಾಡಿದ್ದಾರೆ. ರಜನಿಕಾಂತ್ ಸಿನಿಮಾ ಸಕ್ಸಸ್ ಫಾರ್ಮುಲಾ ಪ್ರತಿ ಸಿನಿಮಾದಲ್ಲೂ ಪರ ಭಾಷಾ ಸ್ಟಾರ್ ಹೀರೋಗಳು ಕಾಣಿಸಿಕೊಳ್ಳೋದು. ರಜನಿಕಾಂತ್ರ ತಲೈವರ್ 170 ಸಿನಿಮಾದಲ್ಲೂ ದೊಡ್ಡ ಸ್ಟಾರ್ಗಳ ದಂಡಿದೆ. ಹಿಂದಿಯಿಂದ ಬಿಗ್ ಬಿ ಅಮಿತಾ ಬಚ್ಚನ್ ನಟಿಸುತ್ತಿದ್ದಾರೆ. ಮಲೆಯಾಳಂ ಸ್ಟಾರ್ ಫಹಾದ್ ಫಾಸಿಲ್, ತೆಲುಗು ನಟ ರಾಣಾ ದಗ್ಗುಭಾಟಿ, ಅರ್ಜುನ್ ಸರ್ಜಾ ನಟಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಹುಟ್ಟು ಹಬ್ಬದಂದು ಭೈರಾದೇವಿ ಟೀಸರ್ ರಿಲೀಸ್..! ಲುಕ್ ನೋಡಿ ಫ್ಯಾನ್ಸ್ ಶಾಕ್..!