Jan 13, 2022, 2:53 PM IST
ನಟಿ ದಿಶಾ ಪಟಾನಿ (Disha Patani) ಅವರು ಬಾಲಿವುಡ್ನಲ್ಲಿ (Bollywood) ಸಖತ್ ಬೇಡಿಕೆ ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಈ ನಟಿ ಆಗಾಗ ತನ್ನ ಬಿಕಿನಿ ಫೋಟೋಗಳೊಂದಿಗೆ ಇಂಟರ್ನೆಟ್‌ನಲ್ಲಿ ಬಿಸಿ ಏರಿಸಿದ್ದಾರೆ. ಪ್ರತಿ ದಿನ ಜಿಮ್ನಲ್ಲಿ ವರ್ಕೌಟ್ ಮಾಡುವ ಅವರು ಬಳುಕುವ ಬಳ್ಳಿಯಂತೆ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿದ್ದು, ಆಗಾಗ ಫೋಟೋಶೂಟ್ ಮಾಡಿಸುವ ಮೂಲಕ ಮಿಂಚುತ್ತಾರೆ. ಇದೀಗ ದಿಶಾ ಪಟಾನಿ ಅಪ್ಲೋಡ್ ಮಾಡಿರುವ ಒಂದು ಫೋಟೋ ಸಿಕ್ಕಾಪಟ್ಟೆ ಹಾಟ್ ಆಗಿದ್ದು, ವೈರಲ್ ಆಗಿದೆ.
Disha Patani Dance; ದಿಶಾ ಪಟಾಣಿ ಡ್ಯಾನ್ಸ್ ವಿಡಿಯೋ ವೈರಲ್, ಸಪೂರ ಸೊಂಟದ ಮೋಡಿ!
ಕಡಲ ಕಿನಾರೆಯಲ್ಲಿ ದಿಶಾ ಪಟಾನಿ ಬಿಕಿನಿ ಧರಿಸಿ ಕಾಲ ಕಳೆದಿದ್ದು, ಈ ವೇಳೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಈಗ ಸಖತ್ ವೈರಲ್ ಆಗಿದೆ. ಇನ್ನು ದಿಶಾ ಬಿಕಿನಿ ಧರಿಸಿರುವ ಪೋಟೋ ಇಟ್ಟುಕೊಂಡು ಬಗೆಬಗೆಯಲ್ಲಿ ಮೀಮ್ಸ್ (Memes) ತಯಾರು ಮಾಡಿದ್ದಾರೆ. ಫೋಟೋಶಾಪ್ (Photoshop) ಮೂಲಕ ದಿಶಾ ಪಟಾನಿಗೆ ಬಟ್ಟೆ ತೊಡಿಸುವ ಪ್ರಯತ್ನ ಮಾಡಲಾಗಿದ್ದು, ನೆಟ್ಟಿಗರು ತಮ್ಮ ಕಸುಬುದಾರಿಕೆ ತೋರುತ್ತಿದ್ದಾರೆ. ದಿಶಾ ಪಟಾನಿಯ ಅತಿಯಾದ ಹಾಟ್ ಅವತಾರಕ್ಕೆ ನೆಟ್ಟಿಗರು ಸೀರೆ, ಬುರ್ಕಾ, ಸ್ಕರ್ಟ್, ಗೌನ್ ತೊಡಿಸಿ ಅನೇಕ ಬಗೆಯಲ್ಲಿ ಮೀಮ್ಸ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment