ತೆಲಂಗಾಣದಲ್ಲಿ ಸಿನಿರಂಗ VS ಸಿಎಂ ಕದನ: ನೋ ಕಾಂಪ್ರಮೈಸ್ ಅಂತ ಆರ್ಭಟಿಸಿದ ರೇವಂತ್ ರೆಡ್ಡಿ!

Dec 27, 2024, 12:21 PM IST

ಬೆಂಗಳೂರು(ಡಿ.27):  ನಾ ಮಾಟೇ ಶಾಸನಂ.. ಇದು ಬರೀ ತೆಲುಗು ಸಿನಿಮಾದ ಡೈಲಾಗ್ ಆಗಿ ಉಳಿದಿಲ್ಲ.. ತೆಲಂಗಾಣದ ಮುಖ್ಯಮಂತ್ರಿಯ ಆವೇಶದ ಸಂದೇಶವಾಗಿ ಬದಲಾಗಿದೆ.. ಯಾಕಂದ್ರೆ, ತೆಲಂಗಾಣದಲ್ಲೀಗ ಒಂದು ಯುದ್ಧ ನಡೀತಿದೆ. 

ಆ ಯುದ್ಧ ನಡೀತಿರೋದು ಸಿನಿರಂಗದ ದೊಡ್ಡವರು ಹಾಗೂ ಅಲ್ಲಿ ಮುಖ್ಯಮಂತ್ರಿ ನಡುವೆ.ಪುಷ್ಪ ಸಿನಿಮಾದ ಬೆನಿಫಿಟ್ ಶೋ ವೇಳೆ ನಡೆದ ಘಟನೆಗೆ ಸಿಎಂ ರೇವಂತ್ ರೆಡ್ಡಿ ಸಿಡಿದೆದ್ದಿದ್ದಾರೆ. ಅವರ ಎದುರು, ಇಡೀ ತೆಲಗು  ಸಿನಿರಂಗವೇ ಮಂಡಿಯೂರಿದ ಹಾಗೆ ಭಾಸವಾಗ್ತಾ ಇದೆ. ಟಾಲಿವುಡ್ ಪತರಗುಟ್ಟುತ್ತಿದೆ. ನಾನು ಲಾ & ಆರ್ಡರ್ ಜೊತೆ ಕಾಂಪ್ರಮೈಸ್ ಆಗಲ್ಲ ಅಂತ ರೇವಂಗ್ ರೆಡ್ಡಿ ಅಬ್ಬರಿಸಿದ್ದಾರೆ. ಇದು ಯಾರ ಪಾಲಿಗೆ ವಾರ್ನಿಂಗ್?  ಸಿಎಂ ರಣಾರ್ಭಟಕ್ಕೆ ಸಿನಿಪ್ರಮುಖರ ಕಂಗೆಟ್ಟು ಕೂತಿರೋದ್ಯಾಕೆ? ಟಾಲಿವುಡ್ ಥಂಡಾ ಹೊಡೆದಿದ್ಯಾಕೆ? ಈ ಎಲ್ಲಾ ಕೌತುಕಗಳಿಗೂ ಉತ್ತರವೇ ಇವತ್ತಿನ ಸುವರ್ಣ ಫೋಕಸ್, ನಾ ಮಾಟೇ ಶಾಸನಂ..

ಕನ್ನಡ ಚಿತ್ರರಂಗದಲ್ಲಿ 2024ರಲ್ಲಿ ಏನಾಯ್ತು? ಈ ಕೈಗನ್ನಡಿ ನೋಡಿ ಎಲ್ಲಾನೂ ತಿಳ್ಕೊಳ್ಳಿ!

ನಮ್ಮಲ್ಲಿ ಸಿನಿಮಾ ಅಂದ್ರೆ ಒಂದು ಸೆಲೆಬ್ರೇಷನ್. ನೆಚ್ಚಿನ ಸಿನಿಮಾ ಹೀರೋಗಳ ಸಿನಿಮಾ ರಿಲೀಸ್ ಆದ್ರೆ, ಹಾಲಿನಭಿಷೇಕ ಮಾಡ್ತಾರೆ. ಹಬ್ಬದ ಹಾಗೆ ಆಚರಣೆ ಮಾಡ್ತಾರೆ. ಆದ್ರೆ ನಮ್ಮ ಪಕ್ಕದಲ್ಲೇ ಇರೋ ಆಂಧ್ರ ಮತ್ತು ತೆಲಂಗಾಣ, ಈ ತೆಲುಗು ನಾಡಿನಲ್ಲಿ ಸಿನಿಮಾ ಅನ್ನೋದು, ಅದೇ ಒಂದು ರಿಲಿಜಿಯಸ್ ಇದ್ದ ಹಾಗೆ. ಸಿನಿಮಾ ಹೀರೋಗಳು ಅಂದ್ರೆ ಅವರನ್ನ ದೇವರ ಹಾಗೆ ಆರಾಧಿಸೋ ಮಂದಿ ಹೆಚ್ಚು. ಅವರಿಗಿರೋ ಸಿನಿಮಾ ಕ್ರೇಜ್ ಅಂಥದ್ದು.. ಆದ್ರೆ ಈಗ, ತೆರೆ ಮೇಲೆ ಹೀರೋಗಳ ರೀತಿ ಮೆರೀತಿದ್ದವರು, ಅಲ್ಲಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಎದುರು ಮಂಡಿಯೂರೋ ಸನ್ನಿವೇಶ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಏನು? ಪುಷ್ಪ ಸಿನಿಮಾದ ಪರವಾಗಿ, ಸಿನಿರಂಗದ ಸುಪ್ರಸಿದ್ಧರು ತಲೆ ತಗ್ಗಿಸಿದ್ದು ಯಾಕೆ? ಅದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ.

ಏನು ಆ ಉತ್ತರ? ಸಿನಿಮಾದವರೇನೋ, ಮೀಟಿಂಗ್ ಬಳಿಕ ದಿಲ್ ಖುಷ್ ಆದವರ ಹಾಗೆ ಮಾತಾಡಿದ್ರು. ಆದ್ರೆ ವಾಸ್ತವ ಅದೇ ಥರ ಇದ್ಯಾ? ಪಟ್ಟುಬಿಡದ ರೇವಂತ್ ರೆಡ್ಡಿ, ಅಲ್ಲು ಅರ್ಜುನ್ ವಿಚಾರದಲ್ಲಿ ಹೇಳಿದ್ದೇನು? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕೋಣ. 

ತೃಪ್ತಿ ದಿಮ್ರಿ ವರ್ಕೌಟ್ ವಿಡಿಯೋ ವೈರಲ್, ಮಾದಕ ಮೈಮಾಟದ ಗುಟ್ಟು ರಟ್ಟು!

ತೆಲಂಗಾಣದ ಸಿಎಂ ರೇವಂತ್ ರೆಡ್ಡಿ, ಸಿನಿರಂಗದವರಿಗೆ ನಡುಕ ಹುಟ್ಟಿಸಿದ್ದಾರೆ. ಸಿಎಂ ಬೇಡಿಕೆಗಳಿಗೆ ಕಿವುಡಾಗಿದ್ದವರು, ಈಗ ಅವರು ಮಾತನ್ನ ಶಾಸನದ ಹಾಗೆ ಪಾಲಿಸೋದಕ್ಕೆ ಸನ್ನದ್ಧರಾಗಿಬಿಟ್ಟಿದ್ದಾರೆ. ಅಂದ ಹಾಗೆ, ಈ ಮೀಟಿಂಗ್ ಬಳಿಕ, ಅಲ್ಲು ಅರ್ಜುನ್ ವಿಚಾರದಲ್ಲಿ ಯಾವ ನಿರ್ಣಯಕ್ಕೆ ಬಂದಿದಾರೆ ಸಿಎಂ? ಅದರ ರಿಪೋರ್ಟ್ ಇಲ್ಲಿದೆ ನೋಡಿ. 

ಏನು ಆ ಕಾರಣ? ಸಭೆಯಲ್ಲಿ ಮುಖ್ಯವಾಗಿ ಇರ್ಬೇಕಾಗಿದ್ದ ಚಿರಂಜೀವಿ ಅಲ್ಯಾಕೆ ಕಾಣಿಸಿಕೊಳ್ಲಿಲ್ಲ.. ಅಷ್ಟಕ್ಕೂ ಸಿನಿಮಾದಲ್ಲಿ ಚರಿತ್ರೆ ಸೃಷ್ಟಿಸಿ, ರಾಜಕೀಯದಲ್ಲಿ ಇತಿಹಾಸ ಬರೆಯೋ ಕನಸು ಕಾಣ್ತಾ ಇರೋ ಚಿರಂಜೀವಿ, ರೇವಂತ್ ರೆಡ್ಡಿ ಅವರ ಬಗ್ಗೆ ಏನ್ ಹೇಳ್ತಾರೆ.?. ಸಿನಿಮಾ ರಂಗದ ಘಟಾನುಘಟಿಗಳೆಲ್ಲಾ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಮಾತುಕತೆ ನಡೆಸಿದಾರೆ.