May 29, 2024, 6:03 PM IST
ರೇವ್ಪಾರ್ಟಿಯಲ್ಲಿ (Rave Party) ತಗ್ಲಾಕೊಂಡ ನಟಿ ಹೇಮಾಗೆ (Actress Hem) 2 ನೇ ನೋಟಿಸ್ ನೀಡಲಾಗಿದೆ. ಈ ಮೂಲಕ ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾಗೆ ಸಿಸಿಬಿ ಸೂಚನೆ ನೀಡಿದೆ. ನಟಿ ಹೇಮಾ ಮಾತ್ರವಲ್ಲದೆ ಇತರೆ ಏಳು ಮಂದಿಗೆ ಎರಡನೇ ನೋಟಿಸ್ ನೀಡಲಾಗಿದೆ. ಈ ನೋಟಿಸ್ನಲ್ಲಿ(Notice) ಜೂನ್ 1 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಕಳೆದ ಶನಿವಾರ ವಿಚಾರಣೆಗೆ ಬರುವಂತೆ ಸಿಸಿಬಿ ಸೂಚಿಸಿತ್ತು. ಆದರೆ, ಅನಾರೋಗ್ಯದ ನೆಪವೊಡ್ಡಿ ವಿಚಾರಣೆಗೆ ನಟಿ ಹೇಮಾ ಗೈರಾಗಿದ್ದರು. ನಂತರದಲ್ಲಿ ವಿಚಾರಣೆಗೆ ಒಂದು ವಾರ ಸಮಯಾವಕಾಶ ಬೇಕು ಎಂದು ಕೇಳಿದ್ದರು. ಇದರ ಬೆನ್ನಲ್ಲೇ ಈಗ 2 ನೇ ನೋಟೀಸ್ ನೀಡಿ ವಿಚಾರಣೆ ಬರುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ವೀಕ್ಷಿಸಿ: ಇಡೀ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷರ ಫರ್ಮಾನು..ಏನಿದರ ಗುಟ್ಟು..? ಏನಿದು ಬಂಡೆ ಮಾಡಿದ ಶಪಥ..?