Jan 31, 2022, 10:07 AM IST
ನವದೆಹಲಿ (ಜ. 31): ಸಂಸತ್ತಿನ ಬಜೆಟ್ ಅಧಿವೇಶನಕ್ಕೆ (Budget Session) ಸೋಮವಾರ ಚಾಲನೆ ಸಿಗಲಿದೆ. ಮೊದಲ ದಿನವಾದ ಜ.31ರಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ಅವರು ಭಾಷಣ ಮಾಡಲಿದ್ದಾರೆ. ಇವತ್ತೇ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಫೆ.1ರಂದು ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2022-23ನೇ ಸಾಲಿನ ಬಜೆಟ್ ಅಧಿವೇಶನ ಮಂಡನೆ ಮಾಡಲಿದ್ದಾರೆ.
ಇದನ್ನೂಓದಿ: Budget 2022:ಬಜೆಟ್ ಅಧಿವೇಶನದ ಮೊದಲೆರಡು ದಿನ ಶೂನ್ಯ, ಪ್ರಶ್ನೋತ್ತರ ಅವಧಿ ಇಲ್ಲ
ಹೀಗಾಗಿ ಈ ಎರಡೂ ದಿನಗಳ ಕಾಲ ಪ್ರಶ್ನೋತ್ತರ ಮತ್ತು ಶೂನ್ಯ ಅವಧಿ ಇರುವುದಿಲ್ಲ. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿ ಅವರು ಫೆ.7ರಂದು ಉತ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸಂಸತ್ತಿನ ಬಜೆಟ್ ಅಧಿವೇಶನದ (Session) ಮೊದಲ ಎರಡು ದಿನ ಶೂನ್ಯ ಅವಧಿ (Zero Hour) ಹಾಗೂ ಪ್ರಶ್ನೋತ್ತರ ವೇಳೆ (Question Hour)ಇರೋದಿಲ್ಲ ಎಂದು ಸಂಸತ್ತಿನ (Parliament) ಬುಲೆಟಿನಲ್ಲಿ (Bulletin) ಮಾಹಿತಿ ನೀಡಲಾಗಿದೆ