Asianet Suvarna News Asianet Suvarna News

ಕಾಫಿನಾಡು ಚಂದುಗೆ ತವರಿನಲ್ಲೆ ಧಮಕಿ: ಏನಂತೆ?

ಕಾಫಿನಾಡು ಚಂದು ಅವರಿಗೆ ಕಾಫಿನಾಡಿಲ್ಲೇ ಜನರು ಧಮಿಕಿ ಹಾಕಿದ್ದಾರೆ. ಹಾಡು ಹೇಳಿಲ್ಲ ಎಂದು ಜನರು ತರಾಟೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

First Published Aug 23, 2022, 1:51 PM IST | Last Updated Aug 23, 2022, 1:51 PM IST

ಸೋಶಿಯಲ್​ ಮೀಡಿಯಾ ಸ್ಟಾರ್ ಕಾಫಿ ನಾಡು ಚಂದು ಅಂದರೆ ಎಲ್ಲರಿಗೂ ಗೊತ್ತು. ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಕಾಫಿನಾಡು ಚಂದು ನಾನು ಶಿವಣ್ಣ, ಪುನೀತಣ್ಣ ಅಭಿಮಾನಿ.. ಎನ್ನುತ್ತಲೇ ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ. ಕಾಫಿನಾಡು ಚಂದು ಹೇಳುವ ಇನ್​ಸ್ಟಂಟ್​ ಹಾಡುಗಳು ಸಖತ್​ ವೈರಲ್​ ಆಗುತ್ತಿವೆ.  ಚಂದು ಹುಟ್ಟುಹಬ್ಬದ ಶುಭಾಶಯ ಕೋರುವ ಶೈಲಿ ಟ್ರೆಂಡ್​​ ಆಗಿದೆ. ಅನೇಕರು ಚಂದು ಬಳಿ ವಿಶ್ ಮಾಡಿಸಿಕೊಳ್ಳಲು ಕಾಯುತ್ತಿರುತ್ತಾರೆ. ಅವರ ಬಳಿ ಹಾಡು ಹೇಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬೀಳುತ್ತಾರೆ. ಅಂದಹಾಗೆ ಚಂದು ಆಟೋ ಓಡಿಸಿ ಜೀವನ ನಡೆಸುತ್ತಿದ್ದಾರೆ. ಜನ ಆಟೋ ಒಡಿಸಲು ಬಿಡದೆ ಹಾಡು ಹೇಳುವಂತೆ ಪೀಡಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಕಾಫಿನಾಡಿಲ್ಲೇ ಚಂದುಗೆ ಜನರು ಧಮಿಕಿ ಹಾಕಿದ್ದಾರೆ. ಹಾಡು ಹೇಳಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಚಂದು ಆಟೋ ಓಡಿಸಬೇಕು ಈಗ ಹಾಡಲ್ಲ 4 ಗಂಟೆ ಮೇಲೆ ಎನ್ನುತ್ತಾ ಅಲ್ಲಿಂದ ಹೊರಟರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   
 

Video Top Stories