ವಿಮಾನಕ್ಕೆ ನಿವೃತ್ತಿ ಸಿಕ್ಕ ಮೇಲೆ ಅವೇನಾಗುತ್ತವೆ?

By Suvarna News  |  First Published Feb 26, 2020, 4:25 PM IST

ನಾವು ಮನುಷ್ಯರಿಗೆ ಒಂದು ವಯಸ್ಸಾದ ಮೇಲೆ ನಿವೃತ್ತಿ ಇರುವಂತೆ ವಿಮಾನಗಳಿಗೆ ಕೂಡಾ ನಿವೃತ್ತಿ ಇದೆ. ಆದರೆ, ನಿವೃತ್ತಿಯಾದ ನಂತರ ಈ ವಿಮಾನಗಳ ಪಾಡೇನು? ಅವು ಎಲ್ಲಿ ಹೋಗುತ್ತವೆ?


ಏನು, ವಿಮಾನಗಳು ಕೂಡಾ ನಿವೃತ್ತಿಯಾಗುತ್ತವಾ ಎಂದ್ರಾ? ಖಂಡಿತಾ ಆಗುತ್ತವೆ. ವಯಸ್ಸಾಗುವುದು ಪ್ರಕೃತಿ ನಿಯಮವಲ್ಲವೇ? ಒಂದಷ್ಟು ವರ್ಷಗಳ ಕಾಲ ಹಾರಾಡಿದ ಬಳಿಕ ವಿಮಾನ ಹಳತಾಗುತ್ತದೆ. ದೂರ ಪ್ರಯಾಣಕ್ಕೆ ಯೋಗ್ಯವಾಗಿರುವುದಿಲ್ಲ. ಅಂಥವನ್ನು ಇಟ್ಟುಕೊಂಡು ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಹಾಗಿದ್ದರೆ ನಿವೃತ್ತಿಯಾದ ವಿಮಾನಗಳನ್ನು ಏನು ಮಾಡಲಾಗುತ್ತದೆ? ಇಲ್ಲಿದೆ ನೋಡಿ ಉತ್ತರ...

ಹಾರಾಡುವ ಆಸೆ ಮನುಷ್ಯನ ಜೀನ್ಸ್‌ನಲ್ಲೇ ಇರುತ್ತದೆ. 1903ರಲ್ಲಿ ರೈಟ್ ಸಹೋದರರು ವಿಮಾನ ಕಂಡುಹಿಡಿದಾಗಿನಿಂದ ತಿರುಗಾಟದ ಗತಿಯೇ ಬದಲಾಗಿದೆ. ಜಗತ್ತು ಕಿರಿದಾಗಿಸಿದ ಕೀರ್ತಿಯಲ್ಲಿ ವಿಮಾನಗಳಿಗೂ ಪಾಲು ಹೋಗಬೇಕು. ಸಮುದ್ರ, ಬೆಟ್ಟಗುಡ್ಡಗಳು, ದೂರ ಯಾವುದನ್ನೂ ಲೆಕ್ಕಕ್ಕೇ ತೆಗೆದುಕೊಳ್ಳದೆ, ಕೆಲವೇ ಗಂಟೆಗಳಲ್ಲಿ ಬಹುದೂರ ಕೊಂಡೊಯ್ಯಬಲ್ಲ ತಾಕತ್ತು ಇವುಗಳದ್ದು. ಈಗೀಗಂತೂ ವಿಮಾನ ಪ್ರಯಾಣ ದರವೂ ಇಳಿದಿದ್ದು, ಶ್ರೀ ಸಾಮಾನ್ಯನೂ ಸಣ್ಣಪುಟ್ಟ ಪ್ರಯಾಣಗಳಿಗೂ ವಿಮಾನವನ್ನೇ ಅವಲಂಬಿಸಲಾರಂಭಿಸಿದ್ದಾನೆ. ಅದೆಲ್ಲ ಬಿಡಿ, ಇಂಥ ಈ ಬೃಹತ್ ಆಕಾಶಮಿತ್ರನಿಗೂ ವಯಸ್ಸಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ?

Tap to resize

Latest Videos

undefined

ಸೆಕೆಂಡ್ ಹನಿಮೂನಿಗೆ ಬೆಸ್ಟ್ ಪ್ಲೇಸಸ್

ವಿಮಾನದ ಆಯಸ್ಸೆಷ್ಟು?
ವಿಮಾನಗಳ ಆಯಸ್ಸನ್ನು ಅವುಗಳ ಹುಟ್ಟಿನ ವರ್ಷದ ಮೇಲೆ ಅಳೆಯುವುದಿಲ್ಲ. ಬದಲಿಗೆ, ಅವು ಎಷ್ಟು ಬಾರಿ ಹಾರಾಟ ನಡೆಸಿವೆ ಎಂಬುದರ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯ ಪ್ರಯಾಣಿಕ ವಿಮಾನವೊಂದರ ಸರಾಸರಿ ಆಯಸ್ಸನ್ನು ಅದರ ತಯಾರಕ ಸಂಸ್ಥೆ ನಿರ್ಧರಿಸುತ್ತದೆ. ಅವುಗಳನ್ನು ತಯಾರಿಸಿ ಮಾರಾಟ ಮಾಡುವಾಗಲೇ ಈ ವಿಮಾನ ಇಷ್ಟು ಬಾರಿ ಟೇಕಾಫ್ ಹಾಗೂ ಲ್ಯಾಂಡಿಂಗ್‌ಗೆ ಯೋಗ್ಯ ಎಂದು ಸಂಸ್ಥೆ ತಿಳಿಸುತ್ತದೆ. ಮನೆ ಹಳತಾದಂತೆಲ್ಲ ಅದರ ಬಾಗಿಲು, ಗೋಡೆ, ಕಬೋರ್ಡ್ ಇತ್ಯಾದಿಗಳು ಪದೇ ಪದೆ ರಿಪೇರಿಗೆ ಬರುವುದಿಲ್ಲವೇ? ವಿಮಾನವೂ ಹಾಗೆ ಆದಾಗ ರಿಸ್ಕ್ ತೆಗೆದುಕೊಳ್ಳಲಾಗುವುದಿಲ್ಲ ಅಲ್ಲವೇ? ಸಾಮಾನ್ಯವಾಗಿ ಹೀಗೆ ಪ್ರಯಾಣಿಕ ವಿಮಾನವೊಂದರ ಆಯಸ್ಸು ಸರಾಸರಿ 18 ವರ್ಷಗಳು ಎಂದು ಪರಿಗಣಿಸಬಹುದು. 

ಹಾರಾಟ ನಿಲ್ಲಿಸಿದ ವಿಮಾನ ಏನಾಗುತ್ತದೆ?
ವಯಸ್ಸಾಗಿ ಹಾರಾಟ ನಿಲ್ಲಿಸಿದ ವಿಮಾನವನ್ನು ಸ್ಟೋರೇಜ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಮತ್ತೊಂದು ವಿಮಾನ ಇದನ್ನು ರಿಪೇರಿ ಮಾಡುತ್ತದೆ ಅಥವಾ ಈ ವಿಮಾನದ ಅಂಗಾಂಗಗಳನ್ನು ಬಿಚ್ಚಿ ರಿಸೈಕಲ್ ಮಾಡಲಾಗುತ್ತದೆ. ವಿಮಾನ ಹಾರಾಟದ ಮೌಲ್ಯಕ್ಕಿಂತ ಅದರ ಬಿಡಿಭಾಗಗಳ ಮೌಲ್ಯ ಹೆಚ್ಚಿದೆ ಎಂಬುದಾದಲ್ಲಿ ಇಡೀ ವಿಮಾನವನ್ನು ಬಿಡಿಭಾಗಗಳಾಗಿ ಕಳಚಲು ನಿರ್ಧರಿಸಲಾಗುತ್ತದೆ. ವಿಮಾನದ  ಇಂಜಿನ್‌ಗಳೇ ಎಲ್ಲಕ್ಕಿಂತ ಹೆಚ್ಚು ದುಬಾರಿಯದಾಗಿದ್ದು, ವಿಮಾನದ ಮೌಲ್ಯದ ಶೇ.80ರಿಂದ 90ರಷ್ಟು ಮೊತ್ತ ಇವುಗಳಿಗಾಗಿಯೇ ಆಗಿರುತ್ತದೆ. ಆದರೂ, ತೀರಾ ವಯಸ್ಸಾದ ವಿಮಾನದ ಇತರೆ ಬಿಡಿಭಾಗಗಳು ಕೂಡಾ ಬಹಳ ದುಬಾರಿ ಮೊತ್ತಕ್ಕೆ ಮಾರಾಟವಾಗಬಲ್ಲಷ್ಟು ಯೋಗ್ಯವಾಗಿರುತ್ತವೆ. 

ಜೋಯಿಡಾದ ಗಣೇಶನ ಗುಡಿಯಲ್ಲಿ ಸಾಹಸ ಕ್ರೀಡೆಗಳ ಝಲಕ್‌!...

ವಿಮಾನವೊಂದನ್ನು ಸೇವೆಯಿಂದ ನಿವೃತ್ತಿಗೊಳಿಸಲು ಹಲವು ಕಾರಣಗಳಿವೆ. 
ಕೆಲವೊಮ್ಮೆ ವಿಮಾನಗಳನ್ನು ಲೀಸ್‌ಗೆ ತೆಗೆದುಕೊಳ್ಳಲಾಗಿರುತ್ತದೆ. ಲೀಸ್ ಅವಧಿ ಮುಗಿದ ಕಾರಣ ಅವನ್ನು ಸ್ಟೋರೇಜ್‌ನಲ್ಲಿ ನಿಲ್ಲಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಆಪರೇಟರ್ ವಿಮಾನದ ಗಾತ್ರವನ್ನು ಅಪ್‌ಗ್ರೇಡ್ ಮಾಡುವ ಉದ್ದೇಶದಿಂದ ಅವನ್ನು ಸೇವೆಯಿಂದ ವಜಾಗೊಳಿಸಿ ಸ್ಟೋರೇಜ್ ಪ್ರೋಗ್ರಾಂನಲ್ಲಿಡಲಾಗುತ್ತದೆ. ಈ ಪ್ರೋಗ್ರಾಂ ವಿಮಾನಗಳು ಹಾರಾಟದ ಕಂಡಿಶನ್ನಲ್ಲಿರುವಂತೆ ನೋಡಿಕೊಳ್ಳುತ್ತವೆ. ಏರ್‌ಕ್ರಾಫ್ಟ್ ವ್ಯವಸ್ಥೆಯನ್ನು ರೆಗುಲರ್ ಆಗಿ ಇಂಜಿನ್ ಆನ್ ಮಾಡಿ ಬಳಕೆಯನ್ನು ಚೆಕ್ ಮಾಡಲಾಗುತ್ತದೆ. ಅವು ಗುಜರಿಗೆ ಬೀಳದಂತೆ ನೋಡಿಕೊಳ್ಳಲಾಗುತ್ತದೆ. ಇವುಗಳಲ್ಲಿ ಕೆಲ ವಿಮಾನಗಳನ್ನು ಮಾರಾಟ ಮಾಡಬಹುದು ಮತ್ತು ಹೊಸ ಆಪರೇಟರ್ ಅವನ್ನು ಮತ್ತೆ ಹಾರಿಸಬಹುದು. ಮತ್ತುಳಿದ ವಿಮಾನಗಳ ಬಳಕೆಯೋಗ್ಯ ಭಾಗಗಳನ್ನು ತೆಗೆದು ಉಳಿದವನ್ನು ರಿಸೈಕಲ್‌ಗೆ ಹಾಕಲಾಗುತ್ತದೆ. ಹೀಗೆ ನಿವೃತ್ತಿಯಾದ ವಿಮಾನಗಳನ್ನು ಸ್ಟೋರ್ ಮಾಡುವ ಸ್ಥಳಕ್ಕೆ ಏರೋಪ್ಲೇನ್ ಬೋನ್‌ಯಾರ್ಡ್ ಎಂದು ಕರೆಯಲಾಗುತ್ತದೆ. 

ಏರೋಪ್ಲೇನ್ ಬೋನ್‌ಯಾರ್ಡ್
ಏರೋಪ್ಲೇನ್ ಬೋನ್‌ಯಾರ್ಡ್ ಎಷ್ಟು ದೊಡ್ಡದಾಗಿರುತ್ತವೆ ಎಂದರೆ ಒಂದೇ  ಬಾರಿಗೆ ಸಾವಿರಾರು ವಿಮಾನಗಳನ್ನು ಅಲ್ಲಿ ನಿಲ್ಲಿಸಬಹುದು. ಸಾಮಾನ್ಯವಾಗಿ ಒಣಹವೆ ಇರುವ ಪ್ರದೇಶದಲ್ಲಿ ಬೋನ್‌ಯಾರ್ಡ್ ನಿರ್ಮಾಣವಾಗಿರುತ್ತದೆ. ಇದಕ್ಕೆ ಕಾರಣವೆಂದರೆ ಈ ಹವೆಯು ವಿಮಾನದ ಮೆಟಲ್‌ ಭಾಗಗಳು ತುಕ್ಕು ಹಿಡಿಯದಂತೆ ನೋಡಿಕೊಳ್ಳುತ್ತವೆ. ಇಲ್ಲಿ ಕೆಲವು ವಿಮಾನಗಳು ಕೆಲವೇ ತಿಂಗಳಲ್ಲಿ ಹೊಸ ಆಪರೇಟರ್ ಸಿಕ್ಕಿ ಹೊರ ದಾಟಿದರೆ ಮತ್ತೆ ಕೆಲವು ವರ್ಷಾನುಗಟ್ಟಲೆ ನಿಂತಲ್ಲೇ ನಿಂತಿರುತ್ತವೆ. 

ಆನ್‍ಲೈನ್‍ನಲ್ಲಿ ಮದುವೆ ಟಿಕೆಟ್ ಸೇಲ್ ಮಾಡಿ, ವಿದೇಶಿ ಅತಿಥಿಗಳನ್ನು ವಿವಾಹಕ್ಕೆ ಆಹ್ವಾನಿಸಿ...

ಭಾರತದಲ್ಲಿಲ್ಲ ಬೋನ್‌ಯಾರ್ಡ್
ಆದರೆ, ಭಾರತದಲ್ಲಿ ಸಾಮಾನ್ಯವಾಗಿ ನಿವೃತ್ತಿಯಾದ ವಿಮಾನಗಳನ್ನು ಏರ್‌ಫೋರ್ಸ್ ತರಬೇತಿ ಸಂಸ್ಥೆಗಳಿಗೆ ವಿಮಾನದ ತಾಂತ್ರಿಕ ವಿಷಯಗಳ ಕಲಿಕಾ ಉದ್ದೇಶಕ್ಕಾಗಿ ನೀಡಲಾಗುತ್ತದೆ, ಮತ್ತೆ ಕೆಲವನ್ನು ವಿಮಾನನಿಲ್ಧಾಣದ ಮೂಲೆಯಲ್ಲಿ ನಿಲ್ಲಿಸಲಾಗುತ್ತದೆ. ಅವುಗಳ ಸ್ಟೀಲ್ ಭಾಗಗಳನ್ನು ಕಳಚಿ, ಕರಗಿಸಿ ಮರುಬಳಕೆಗೆ ಅವಕಾಶ ಕಲ್ಪಿಸಲಾಗುತ್ತದೆ. 

click me!