ಸಂಶೋಧನೆ ವೇಳೆ ಪುರಾತತ್ವ ಇಲಾಖೆಗೆ ಅನೇಕ ಕುತೂಹಲಕಾರಿ ಸಂಗತಿಗಳು ಸಿಗುತ್ವೆ. ಎಷ್ಟೋ ವರ್ಷ ಹಿಂದಿನ ವಸ್ತುಗಳು ಆಸಕ್ತಿ ಹುಟ್ಟಿಸುತ್ತವೆ. ಕೆಲ ಪ್ರದೇಶಗಳು ಪ್ರಕೃತಿ ವಿಕೋಪ ಅಥವಾ ಬೇರೆ ಯಾವುದೋ ಕಾರಣಕ್ಕೆ ನದಿಯಲ್ಲಿ ಮುಚ್ಚಿಹೋಗಿದ್ದಿದೆ. ಅದ್ರಲ್ಲಿ ಈ ನಗರವೂ ಸೇರಿದೆ.
ಪ್ರಕೃತಿ ವಿಕೋಪದಿಂದ ಹಾಗೂ ಕೆಲವು ಮುಂದುವರೆದ ತಂತ್ರಜ್ಞಾನದಿಂದ ಒಮ್ಮೊಮ್ಮೆ ಪುರಾತನ ಕಟ್ಟಡಗಳು, ಶಾಸನಗಳು, ಮಾಹಿತಿಗಳು ನೆಲಸಮವಾಗುತ್ತವೆ. ಕೆಲವೊಮ್ಮೆ ಅದರ ಅವಶೇಷಗಳು ದೊರಕುತ್ತವೆ, ಕೆಲವೊಮ್ಮೆ ಅವು ಭೂಗತವಾಗೇ ಉಳಿದುಬಿಡುತ್ತವೆ. ಇಂದು ನಾವು ನೆಲಸಮವಾದ ಅಂತಹುದೇ ಒಂದು ಪ್ರದೇಶದ ಬಗ್ಗೆ ಹೇಳಲಿದ್ದೇವೆ.
ಅಂತಾರಾಷ್ಟ್ರೀಯ ಪುರಾತತ್ವ ಇಲಾಖೆಯ ತಂಡವೊಂದು ಇರಾಕ್ (Iraq) ನ ಕುರ್ದಿಸ್ತಾನದಲ್ಲಿ 3400 ವರ್ಷಗಳ ಹಿಂದಿನ ನಗರವನ್ನು ಕಂಡು ಹಿಡಿದಿದೆ. ಸಾವಿರಗಟ್ಟಲೆ ವರ್ಷದ ಹಿಂದಿನ ಈ ನಗರ ಟೈಗ್ರಿಸ್ (Tigris) ನದಿಯ ಕೆಳಗೆ ಇರುವುದು ಪತ್ತೆಯಾಗಿದೆ. ಈ ಸ್ಥಳದಲ್ಲಿ ಮೊದಲು ಜನರು ವಾಸವಾಗಿರುತ್ತಿದ್ದರು ಎನ್ನುವುದಕ್ಕೆ ಅನೇಕ ಸಾಕ್ಷಿಗಳು ದೊರಕಿದೆ. ಟೈಗ್ರಿಸ್ ನದಿ ಪುರಾತನ ಮೆಸೊಪಟ್ಯಾಮಿಯಾದ ಎರಡು ಪ್ರಮುಖ ನದಿಗಳಲ್ಲಿ ಒಂದು.
ಬಂಡೀಪುರದಲ್ಲಿ ಮೈನವಿರೇಳಿಸುವ ವನ್ಯಜೀವಿ ಕಲರವ: ಪ್ರವಾಸಿಗರಿಗೆ ರೋಮಾಂಚನ..!
ಟೈಗ್ರಿಸ್ ನದಿಗೆ ಮೋಸುಲ್ ಆಣೆಕಟ್ಟನ್ನು ಕಟ್ಟಲಾಗಿತ್ತು. ಹೆಚ್ಚು ನೀರಿರುವ ಕಾರಣ ಅಲ್ಲಿನ ಪ್ರಾಚೀನ ಕುರುಹುಗಳ ಬಗ್ಗೆ ಪತ್ತೆ ಮಾಡಲಾಗಲಿಲ್ಲ. ನಂತರ ಭೀಕರ ಬರಗಾಲದಿಂದ ಟೈಗ್ರಿಸ್ ನದಿ ನೀರು ಅತ್ಯಂತ ಕೆಳಮಟ್ಟಕ್ಕೆ ಹೋಯಿತು. ಈ ಆಣೆಕಟ್ಟಿನ ನೀರು ಕಡಿಮೆಯಾದ ನಂತರ ಪುರಾತತ್ವ ಇಲಾಖೆಯವರು ನಡೆಸಿದ ಸಂಶೋಧನೆ (Research)ಯಿಂದ 1275 – 1475 ನೇ ಇಸವಿಯಲ್ಲಿ ಈ ನಗರದಲ್ಲಿ ಮಿಟ್ಟಾನಿ ಸಾಮ್ರಾಜ್ಯ ನೆಲೆಯಾಗಿತ್ತು ಎನ್ನುವುದು ತಿಳಿದುಬಂದಿದೆ.
ನೀರಿನಾಳದಲ್ಲಿ ಜೀವಂತವಾಗಿವೆ ಎಷ್ಟೋ ಅವಶೇಷಗಳು : ಟೈಗ್ರಿಸ್ ನದಿಯಲ್ಲಿ ಮಣ್ಣಿನ ಇಟ್ಟಿಗೆ, ಗೋಡೆಗಳು, ಗೋಪುರಗಳು, ಬಹು ಅಂತಸ್ತಿನ ಕಟ್ಟಡಗಳು ಮತ್ತು ಅನೇಕ ರೀತಿಯ ವಿನ್ಯಾಸ ಹಾಗೂ ರಚನೆಗಳು ಮುಂತಾದ ಪುರಾತನ ಅವಶೇಷಗಳು ಕಂಡುಬಂದಿವೆ. ಇಲ್ಲಿ ಮಣ್ಣಿನ 10 ಕ್ಯೂನಿಫಾರ್ಮ್ ಮಾತ್ರೆಗಳು ಕೂಡ ಪತ್ತೆಯಾಗಿವೆ. ಕ್ಯೂನಿಫಾರ್ಮ್ ಎನ್ನುವುದು ಪ್ರಾಚೀನ ಕಾಲದ ಬರವಣಿಗೆಯ ಶೈಲಿಯಾಗಿದೆ. ಅದನ್ನು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ಅದನ್ನು ಅನುವಾದಕ್ಕಾಗಿ ಕಳುಹಿಸಲಾಗಿದೆ. ಇದರ ಹೊರತಾಗಿ ಸೆರಾಮಿಕ್ ಜಾರ್, ಮಣ್ಣಿನ ಟ್ಯಾಬ್ಲೆಟ್ ಮುಂತಾದವನ್ನು ಕೂಡ ಹೊರತೆಗೆಯಲಾಗಿದೆ. 1980 ರ ಆಸು ಪಾಸಿನಲ್ಲಿ ಟೈಗ್ರಿಸ್ ನದಿಗೆ ಆಣೆಕಟ್ಟು ಕಟ್ಟಲಾಗಿತ್ತು. ಅಂದಿನಿಂದಲೂ ಈ ನಗರ ನೀರಿನಲ್ಲಿ ಮುಳುಗಿದೆ. ಅಷ್ಟು ಸಮಯ ನೀರಿನಲ್ಲಿ ಮುಳುಗಿದ್ದರೂ ಮಿಟ್ಟಾಣಿ ಸಾಮ್ರಾಜ್ಯದ ಮಣ್ಣಿನ ಗೋಡೆಗಳು ಇನ್ನೂ ಸುರಕ್ಷಿತವಾಗಿರುವುದು ಆಶ್ಚರ್ಯಕರವಾಗಿದೆ. ಇತಿಹಾಸಕಾರರು ಮಿಟ್ಟಾಣಿ ಸಾಮ್ರಾಜ್ಯದ ಪ್ರಮುಖ ಸ್ಥಳವಾಗಿದ್ದ ಜಖಿಕು ನಗರ ಇದಾಗಿರಬಹುದೆಂದು ಹೇಳಿದ್ದಾರೆ.
ಈ ರೆಸ್ಟೋರೆಂಟಲ್ಲಿ ತಿನ್ನಬೇಕು ಅಂದ್ರೆ ಬರೋಬ್ಬರಿ 4 ವರ್ಷ ಕಾಯಬೇಕು !
2018 ರಲ್ಲಿ ನಡೆದಿತ್ತು ಮೊದಲ ಶೋಧನೆ : ಜರ್ಮನ್ ಮತ್ತು ಕುರ್ದಿ ಪುರಾತತ್ವ ಇಲಾಖೆಯವರು 2018 ರಲ್ಲೇ ಮಿಟ್ಟಾಣಿ ಸಾಮ್ರಾಜ್ಯದ ಜಖಿಕು ನಗರದ ಮೇಲೆ ಸಂಶೋಧನೆ ನಡೆಸಿದ್ದರು. ಆದರೆ ಸಂಶೋಧನೆ ಪೂರ್ಣಗೊಳ್ಳುವ ಮೊದಲೇ ಈ ನಗರ ನೀರಿನಲ್ಲಿ ಮುಳುಗಡೆಯಾಯ್ತು. ಈಗ ವಿಪರೀತ ಬರಗಾಲದ ಕಾರಣ ಟೈಗ್ರಿಸ್ ನದಿಯ ನೀರು ಕೆಲವು ಕಡೆ ಬತ್ತಿಹೋಗಿದೆ. ನೀರು ಬತ್ತಿಹೋದ ಕಾರಣ ಜಖಿಕು ನಗರದ ಬಗ್ಗೆ ಇನ್ನಷ್ಟು ಶೊಧನೆಗಳು ನಡೆಯುತ್ತಿವೆ.
ಆಣೆಕಟ್ಟಿನಿಂದ ಜಲಸಮಾಧಿಯಾಯ್ತು ಈ ನಗರ : ಜಖಿಕು ನಗರ ಟೈಗ್ರಿಸದ ನದಿಯ ದಡದಲ್ಲಿತ್ತು. 1981 – 1984ರ ಮಧ್ಯದಲ್ಲಿ ಟೈಗ್ರಿಸ್ ನದಿಗೆ ಡ್ಯಾಮ್ ನಿರ್ಮಾಣ ಮಾಡಲಾಯ್ತು. ಡ್ಯಾಮ್ ನಿರ್ಮಾಣದ ಕಾರಣ ಜಲಾಶಯದ ನೀರಿನ ಮಟ್ಟ ಏರುತ್ತ ಹೋಯಿತು. ಇದರ ಪರಿಣಾಮವಾಗಿ ಮಿಟ್ಟಾಣಿ ಸಾಮ್ರಾಜ್ಯದ ಜಖಿಕು ನಗರ ಮುಳುಗಡೆಯಾಗಿತ್ತು. 1350 ರಲ್ಲಿ ಭೂಕಂಪದ ಕಾರಣದಿಂದಲೂ ಈ ನಗರ ನೆಲಸಮವಾಗಿತ್ತು. ಪುರಾತತ್ವ ಇಲಾಖೆಯವರು ಸಂಶೋಧನೆ ನಡೆಸುವ ಸಮಯದಲ್ಲಿ ನದಿಯ ಜಲಮಟ್ಟ ಹೆಚ್ಚುತ್ತಿರುವ ಕಾರಣ ಕೆಲವು ಸ್ಥಳಗಳನ್ನು ಪ್ಲಾಸ್ಟಿಕ್ ಶೀಟ್ ಗಳಿಂದ ರಕ್ಷಣೆ ಮಾಡಲಾಗಿದೆ. ಪುರಾತತ್ವ ಇಲಾಖೆಯ ಸಂಶೋಧನಾಕಾರರು ಈ ನಗರದ ಕುರಿತು ಇನ್ನಷ್ಟು ಶೋಧನೆಯನ್ನು ನಡೆಸಲಿದ್ದಾರೆ.