Indian Railways: ಮಹಿಳೆಯರಿಗಿನ್ನು ರೈಲಿನಲ್ಲಿ ಸೀಟು ಮೀಸಲು

By Suvarna News  |  First Published Nov 7, 2022, 12:17 PM IST

ಮಹಿಳೆಯರ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇದುವರೆಗೆ ರೈಲಿನಲ್ಲಿ ಹಾಗೂ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಅಂತ ಒಂದು ಬೋಗಿಯನ್ನೇ ಮೀಸಲಿಡಲಾಗಿತ್ತು. ಮಹಿಳೆಯರಿಗೆ ಮೀಸಲಿರುವ ವಿಶೇಷ ಬೋಗಿಯಲ್ಲದೇ ಈಗ ಎಲ್ಲಾ ಕಂಪಾರ್ಟ್‌ಮೆಂಟ್‌ಗಳಲ್ಲಿ ಇಷ್ಟು ಸೀಟು ಮಹಿಳೆಯರಿಗೆ ಎಂದು ರೈಲ್ವೆ ಮೀಸಲಿರಿಸಿದೆ. 


ನವದೆಹಲಿ: ಇದುವರೆಗೆ ಬಸ್‌ಗಳಲ್ಲಿ ಇಷ್ಟು ಸೀಟು ಮಹಿಳೆಯರಿಗೆ ಎಂದು ಮೀಸಲಿತ್ತು. ಆದರೆ ಇನ್ನು ಮುಂದೆ ರೈಲಿನಲ್ಲಿಯೂ ಮಹಿಳೆಯರಿಗೆ ಅಂತ ಇಷ್ಟು ಸೀಟು ಮೀಸಲಾಗಿರಲಿವೆ. ಮಹಿಳೆಯರ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇದುವರೆಗೆ ರೈಲಿನಲ್ಲಿ ಹಾಗೂ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಅಂತ ಒಂದು ಬೋಗಿಯನ್ನೇ ಮೀಸಲಿಡಲಾಗಿತ್ತು. ಮಹಿಳೆಯರಿಗೆ ಮೀಸಲಿರುವ ವಿಶೇಷ ಬೋಗಿಯಲ್ಲದೇ ಈಗ ಎಲ್ಲಾ ಕಂಪಾರ್ಟ್‌ಮೆಂಟ್‌ಗಳಲ್ಲಿ ಇಷ್ಟು ಸೀಟು ಮಹಿಳೆಯರಿಗೆ ಎಂದು ರೈಲ್ವೆ ಮೀಸಲಿರಿಸಿದೆ. 

ದೂರ ಪ್ರಯಾಣದ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಕೆಲವು ಸೀಟುಗಳನ್ನು ಕಾಯ್ದಿರಿಸುವ ಅವಕಾಶ ನೀಡಿದೆ. ದೂರ ತೆರಳುವ ರೈಲುಗಳಲ್ಲಿ(Train) ಮಹಿಳೆಯರ ಕ್ಷೇಮ ಸುರಕ್ಷತೆಯ ಸಲುವಾಗಿ ಯೋಜನೆಯೊಂದನ್ನು ಸಿದ್ಧಪಡಿಸಿದ್ದು, ಮಹಿಳೆಯರಿಗಾಗಿ ಮೀಸಲು ಬರ್ತ್‌ಗಳನ್ನು ಕಾಯ್ದಿರಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwin vaishnav) ಹೇಳಿದ್ದಾರೆ. 

Tap to resize

Latest Videos

ಕೂಡ್ಲಿಗಿಗೂ ಬರಲಿದೆ ರೈಲು ಮಾರ್ಗ; 5 ದಶಕಗಳ ಬೇಡಿಕೆ ಈಡೇರಿಕೆಗೆ ಕಾಲ ಸನ್ನಿಹಿತ

ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಕೋಚ್‌ನಲ್ಲಿ ಆರು ಸೀಟುಗಳನ್ನು ಮೀಸಲಿಡಲಿದೆ. ಹಾಗೆಯೇ ಗರೀಬ್ ರಥ್, ರಾಜಧಾನಿ ದುರಂತೋ ಸೇರಿದಂತೆ ಹಲವು ಹವಾನಿಯಂತ್ರಿತ ರೈಲುಗಳ ಮೂರನೇ ಎಸಿಕೋಚ್‌ನಲ್ಲಿಯೂ ಆರು ಬರ್ತ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ಮೀಸಲಿಡಲಾಗಿದೆ. ಇದರ ಜೊತೆ 45 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಾಯದ ಮಹಿಳೆಯರಿಗೂ ಸೀಟು ಮೀಸಲಿಡಲಾಗಿದೆ. ಮಹಿಳೆಯರು ಗರ್ಭಿಣಿಯರು, ವಯಸ್ಸಾದ ಮಹಿಳೆಯರಿಗಾಗಿ ಪ್ರತಿ ಸ್ಲೀಪರ್ ಕೋಚ್‌ನ ಆರರಿಂದ ಏಳು ಕೆಳಭಾಗದ ಸೀಟುಗಳು ಎಸಿ 3 ಟೈರ್ ಬೋಗಿಯಲ್ಲಿ ನಾಲ್ಕರಿಂದ ಐದು ಕೆಳಭಾಗದ ಸೀಟುಗಳು ಹಾಗೆಯೇ ಎಸಿ2 ಟೈರ್ ಬೋಗಿಗಳಲ್ಲಿ 3 ರಿಂದ 4 ಲೋವರ್ ಬರ್ತ್‌ಗಳನ್ನು ಮೀಸಲಿಡಲಾಗಿದೆ. ರೈಲಿನಲ್ಲಿರುವ ಬೋಗಿಗಳ ಸಂಖ್ಯೆ ಆಧರಿಸಿ ಈ ಸೀಟು ಮೀಸಲು ಜಾರಿಯಲ್ಲಿರುತ್ತದೆ. 

ಕೇವಲ 18 ತಿಂಗಳಲ್ಲಿ ದೇಶಕ್ಕೆ ಸ್ವದೇಶಿ ಹೈಟೆಕ್‌ ರೈಲು ಕೊಟ್ಟ ಸುಧಾನ್ಷು ಮಣಿ

ಇದಲ್ಲದೇ ರೈಲ್ವೆ ರಕ್ಷಣಾ ಪಡೆ ಮತ್ತು ಜಿಆರ್‌ಪಿ ಹಾಗೂ ಜಿಲ್ಲಾ ಪೊಲೀಸರು ಮಹಿಳೆಯ ಪ್ರಯಾಣಿಕರಿಗೆ ರಕ್ಷಣೆ ನೀಡಲಿದ್ದಾರೆ. 

click me!