ಶೇಕ್ಸ್‌ಪಿಯರ್ ನಾಟಕಗಳಲ್ಲಿ ಮತ್ತೆ ಮತ್ತೆ ಭಾರತ

By Suvarna News  |  First Published Apr 27, 2020, 4:38 PM IST

ಶೇಕ್ಸ್‌ಪಿಯರ್ ಹೆಸರನ್ನು ಭಾರತೀಯರೆಲ್ಲರೂ ಕೇಳಿರುತ್ತಾರೆ. ಆದರೆ, ಭಾರತದ ಹೆಸರನ್ನು ಶೇಕ್ಸ್‌ಪಿಯರ್ ಕೇಳಿದ್ದರೇ? ಅವರ ನಾಟಕಗಳಲ್ಲಿ ಭಾರತದ ಹೆಸರು ಬರುತ್ತದೆಯೇ?  


ಶೇಕ್ಸ್‌ಪಿಯರ್ ಹೆಸರನ್ನು ಕೇಳದ ಭಾರತೀಯರು ಬಹುಷಃ ವಿರಳ. ಅವನ ಅನುವಾದಿತ ನಾಟಕಗಳನ್ನು ನೋಡಿಯೋ, ನಾಟಕಗಳನ್ನು ಪಠ್ಯದ ರೂಪದಲ್ಲಿ ಓದಿಯೋ, ಶೇಕ್ಸ್‌ಪಿಯರ್ ಹಾಗೂ ಅವರ ಕೃತಿಗಳ ಕುರಿತ ಪುಸ್ತಕಗಳನ್ನು ಓದಿಯೋ ನಾವೆಲ್ಲ ಬೆಳೆದಿರುತ್ತೇವೆ. ಶೇಕ್ಸ್‌ಪಿಯರ್ ಕುರಿತು ಯಾರಾದರೂ ಮಾತನಾಡಿದರೆ ಅವರು ಬುದ್ಧಿವಂತರೇ ಎಂದು ಅಚಾನಕ್ಕಾಗಿ ತೀರ್ಮಾನಿಸಿಬಿಡುತ್ತೇವೆ. ಹೌದು, ವಿಲಿಯಂ ಶೇಕ್ಸ್‌ಪಿಯರ್ ಒಬ್ಬ ಅಸಾಧಾರಣ ಆಂಗ್ಲ ಬರಹಗಾರ. ಜಗತ್ತಿನ ಶ್ರೇಷ್ಠ ನಾಟಕಕಾರ. ತಮ್ಮ ಕೃತಿಗಳ ಮೂಲಕ ಶಾಶ್ವತವಾಗಿರುವ ಶೇಕ್ಸ್‌ಪಿಯರ್ ಭಾರತದ ಬಗ್ಗೆ ತಮ್ಮ ಕೆಲ ನಾಟಕಗಳಲ್ಲಿ ಕೊಂಚ ಬರೆದಿದ್ದಾರೆಂಬುದು ಆಶ್ಚರ್ಯದ ಜೊತೆ ಸಂತೋಷವನ್ನೂ ಮೂಡಿಸುತ್ತದೆ. ಕೆಲವೊಮ್ಮೆ ಕೇವಲ ಭಾರತದ ಹೆಸರು ಕೇಳಿಬಂದಿದ್ದಷ್ಟೇ ಇರಬಹುದು- ಆದರೆ ಅದೂ ಕೂಡಾ ಭಾರತೀಯರಿಗೆ ಸಂತಸ ಉಂಟುಮಾಡುತ್ತದೆ.  

ಶೇಕ್ಸ್‌ಪಿಯರ್ ಬರೆಯುತ್ತಿದ್ದ ಹೊತ್ತಿನಲ್ಲಿ ಭಾರತವನ್ನು ಚಕ್ರವರ್ತಿ ಅಕ್ಬರ್ ಆಳುತ್ತಿದ್ದು, ಆ ಸಮಯದಲ್ಲಿ ಯೂರೋಪಿಯನ್ನರು ಭಾರತವನ್ನು ಶ್ರೀಮಂತ ಹಾಗೂ ಸಮೃದ್ಧ ದೇಶ ಎಂಬಂತೆ ನೋಡುತ್ತಿದ್ದರು. ಹಾಗಾಗಿ, ಶೇಕ್ಸ್‌ಪಿಯರ್ ಕೂಡಾ ಇದೇ ನೋಟದಲ್ಲಿ ಭಾರತದ ಕುರಿತು ಬರೆದಿದ್ದಾರೆ. ಹಾಗೆ, ಯಾವ ನಾಟಕಗಳು ಭಾರತದ ಹೆಸರನ್ನು ಒಳಗೊಂಡಿವೆ ಎಂಬ ಕುರಿತು ನೋಡೋಣ. 

Tap to resize

Latest Videos

undefined

ಶಹಜಹಾನ್ ಇಲ್ಲದಿದ್ದರೆ ಇಲ್ಲವಾಗುತ್ತಿತ್ತ ತಾಜ್ ತದ್ರೂಪಿ

ಕಿಂಗ್ ಹೆನ್ರಿ  VI(1591)
ಈ ನಾಟಕವನ್ನು ಇಂಗ್ಲೆಂಡ್‌ನ ದೊರೆ ಹೆನ್ರಿ VI ಆಳುತ್ತಿದ್ದ ಸಂದರ್ಭವನ್ನಿಟ್ಟುಕೊಂಡು ರಚಿಸಲಾಗಿದೆ. ಇಂಗ್ಲೆಂಡ್‌ ತನ್ನ ಫ್ರೆಂಚ್ ಟೆರಿಟರೀಸ್  ಕಳೆದುಕೊಂಡು ರೋಸಸ್ ಯುದ್ಧಕ್ಕಿಳಿದ ಸಂದರ್ಭ. ನಾಟಕದ ಮೂರನೇ ಭಾಗದ ಮೊದಲನೇ ಸೀನ್‌ನಲ್ಲಿ ಭಾರತದ ಹೆಸರು ಕೇಳಿಬರುತ್ತದೆ. 

ಹೇಗಿದ್ದೀರಿ? ರಾತ್ರಿ ನಿದ್ದೆ ಚೆನ್ನಾಗಿ ಆಯ್ತೇ! ಇಲ್ಲವಾದರೆ ನಿದ್ದೆ ...

'ನನ್ನ ಕಿರೀಟ ನನ್ನ ಎದೆಯಲ್ಲಿದೆಯೇ ಹೊರತು ತಲೆಯಲ್ಲಿಲ್ಲ. ಅದು ವಜ್ರ ಹಾಗೂ ಭಾರತದ ಮುತ್ತು ಹವಳಗಳಿಂದ ಅಲಂಕೃತವಾಗಿಲ್ಲ. ಕಣ್ಣಿಗೆ ಕೂಡಾ ಕಾಣುವುದಿಲ್ಲ. ನನ್ನ ಕಿರೀಟದ ಹೆಸರು ತೃಪ್ತಿ, ಸಾಮಾನ್ಯವಾಗಿ ಯಾವ ರಾಜ ಕೂಡಾ ಎಂಜಾಯ್ ಮಾಡಲಾರದಂಥದ್ದು' ಎನ್ನುತ್ತಾನೆ ರಾಜ ಹೆನ್ರಿ. 

ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್(1595)
ಈ ಹಾಸ್ಯ ಪ್ರಧಾನ ನಾಟಕವು ಥೀಸಸ್ ಹಾಗೂ ಹಿಪ್ಪೋಲೀಟಾ ಎಂಬ ಪಾತ್ರಗಳ ವಿವಾಹದ ಸುತ್ತ ಹೆಣೆಯಲ್ಪಟ್ಟಿದೆ. ಈ ನಾಟಕದಲ್ಲಿ ಭಾರತದ ಹೆಸರು ನಾಲ್ಕು ಬಾರಿ ಕೇಳಿಬರುತ್ತದೆ. ಒಮ್ಮೆ ಶೇಕ್ಸ್‌ಪಿಯರ್ ಭಾರತವನ್ನು ಭಾರತವನ್ನು ಬಂಗಾರ ಹಾಗೂ ಸಮೃದ್ಧಿಯ ನಾಡು ಎಂದು ವಿವರಿಸಿದರೆ, ಇನ್ನೊಮ್ಮೆ ಟೈಟಾನಿಯ ಎಂಬಾಕೆ ಭಾರತೀಯ ಹುಡುಗನೊಬ್ಬನೊಡನೆ ಸಮಯ ಕಳೆಯುವ ಬಗ್ಗೆ ಹೇಳಲಾಗಿದೆ. ಆದರೆ, ಹುಡುಗನಿಗೆ ನಾಟಕದಲ್ಲಿ ಮಾತಿಲ್ಲ. ವೇದಿಕೆ ಮೇಲೂ ಬರುವುದಿಲ್ಲ. 

ಟ್ರಾಯ್ಲಸ್ ಆ್ಯಂಡ್ ಕ್ರೆಸ್ಸಿಡ(1602)
ಟ್ರಾಯ್ಲಸ್ ಹಾಗೂ ಕ್ರೆಸ್ಸಿಡ ಎಂಬ ಪ್ರೇಮಿಗಳ ದುರಂತ ಕತೆ ಇದಾಗಿದೆ. ಇದರ ಮೊದಲ ಅಧ್ಯಾಯದ ಮೊದಲ ಸೀನ್‌ನಲ್ಲಿ ಟ್ರಾಯ್ಲಸ್ ಕ್ರೆಸ್ಸಿಡಳನ್ನು ಹೀಗೆ ಬಣ್ಣಿಸುತ್ತಾನೆ, ' ಅವಳ ಹಾಸಿಗೆ ಭಾರತದಲ್ಲಿದೆ, ಅಲ್ಲಿ ಆಕೆ ಒಂದು ಮುತ್ತಿನಂತೆ ಮಲಗಿರುತ್ತಾಳೆ.'
ಇದೇ ನಾಟಕದ ಎರಡನೇ ಸೀನ್‌ನಲ್ಲಿ ಪಾಂಡರಸ್ ಎಂಬಾತ ಬರಿಗಾಲಿನಲ್ಲಿ ಭಾರತಕ್ಕೆ ಹೊರಡಲು ಅನುವಾದ ಬಗ್ಗೆ ಹೇಳಲಾಗಿದೆ. 

ದಿ ಮರ್ಚೆಂಟ್ ಆಫ್ ವೆನಿಸ್(1596)
ಈ ಜನಪ್ರಿಯ ನಾಟಕದಲ್ಲಿ ಆ ಸಂದರ್ಭದಲ್ಲಿ ವ್ಯಾಪಾರ ವಹಿವಾಟಿನ ಕೇಂದ್ರವೆನಿಸಿಕೊಂಡಿದ್ದ ಭಾರತ ಒಂದಕ್ಕೂ ಹೆಚ್ಚು ಬಾರಿ ಕಾಣಿಸಿಕೊಂಡಿದೆ. ಒಮ್ಮೆ ಮೂರನೇ ಆ್ಯಕ್ಟ್‌ನ ಎರಡನೇ ಸೀನ್‌ನಲ್ಲಿ ಭಾರತದ ಹೆಸರು ಕೇಳಿಬಂದರೆ ಮತ್ತೊಮ್ಮೆಯೂ ಅದೇ ಸೀನ್‌ನಲ್ಲಿ 'ಆಭರಣವು  ಭಾರತದ ಸೌಂದರ್ಯವನ್ನು ಹೊತ್ತಿತ್ತು' ಎಂಬಂತೆ ಹೇಳಲಾಗಿದೆ. 

ಲೈಂಗಿಕ ಕ್ರಿಯೆಯಿಂದ ಕೊರೋನಾ ವೈರಸ್ ಹರಡದು!

ಆಲ್ ಈಸ್ ವೆಲ್ ದಟ್ ಎಂಡ್ಸ್ ವೆಲ್(1598)
ಬಡ ಹುಡುಗಿ ಹೆಲೆನ ಕಡು ಶ್ರೀಮಂತ ಬೆರ್ಟ್ರಾಮ್  ಜೊತೆ ಪ್ರೀತಿಯಲ್ಲಿದ್ದ ಕತೆ ಇದಾಗಿದೆ. ಇಲ್ಲಿ ಆಕೆ ತಮ್ಮಿಬ್ಬರ ನಡುವಿನ ಈ ಅಂತಸ್ತಿನ ವ್ಯತ್ಯಾಸ, ತನಗಾತ ಕೈಗೆ ಸಿಗದವನು ಎಂಬುದನ್ನು ವಿವರಿಸುವ ಸಂದರ್ಭದಲ್ಲಿ ಭಾರತದಲ್ಲಿ ಸೂರ್ಯನನ್ನು ಪೂಜಿಸುವ ಕುರಿತು ಹೇಳುತ್ತಾಳೆ. 

'ಭಾರತದಲ್ಲಿ ಸೂರ್ಯನನ್ನು ಪೂಜಿಸುವಂತೆ, ಸೂರ್ಯ ತನ್ನ ಪೂಜಿಸುವವರತ್ತ ನೋಡುತ್ತಾನೆ, ಆದರೆ ಸೂರ್ಯನಿಗೆ ಅವರು ಅಪರಿಚಿತವೇ' ಎಂಬಂತೆ ಆಕೆ ಹೇಳುತ್ತಾಳೆ. 

click me!