ಒಂದು ರೈಲು ನಿರ್ಮಾಣಕ್ಕೆ ಆಗುವ ವೆಚ್ಚ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ!

By Santosh Naik  |  First Published Aug 28, 2024, 7:24 PM IST

What is the cost of train to Build in India ಭಾರತೀಯ ರೈಲ್ವೇಯು ವಿವಿಧ ರೀತಿಯ ರೈಲುಗಳನ್ನು ನಿರ್ವಹಿಸುತ್ತದೆ, ಪ್ರತಿಯೊಂದೂ ತನ್ನದೇ ಆದ ನಿರ್ಮಾಣ ವೆಚ್ಚವನ್ನು ಹೊಂದಿದೆ. ಜನರಲ್ ಕೋಚ್‌ನಿಂದ ಹಿಡಿದು ವಂದೇ ಭಾರತ್ ಎಕ್ಸ್‌ಪ್ರೆಸ್‌ವರೆಗೆ, ಈ ಲೇಖನವು ವಿವಿಧ ರೀತಿಯ ರೈಲುಗಳನ್ನು ನಿರ್ಮಿಸಲು ಎಷ್ಟು ವೆಚ್ಚವಾಗುತ್ತದೆ ಎಂಬುದರ ಕುರಿತು ಮಾಹಿತಿ ನೀಡುತ್ತದೆ.


ಭಾರತೀಯ ರೈಲ್ವೆ ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವಾಗಿದೆ. ರೈಲುಗಳು ದೇಶದ ಪ್ರತಿಯೊಂದು ನಗರ ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತವೆ. ರೈಲ್ವೆಯಿಂದಾಗಿ, ಭಾರತದ ಸಂಪರ್ಕವು ಪ್ರತಿ ಹಳ್ಳಿಗೂ ತಲುಪಿದೆ. ಇಂದು ಭಾರತದಲ್ಲಿ ಸುಮಾರು 15 ಸಾವಿರಕ್ಕಿಂತ ಅಧಿಕ ರೈಲುಗಳು ಓಡುತ್ತಿವೆ. ರೈಲ್ವೇ ಇಲ್ಲದಿದ್ದರೆ ಭಾರತದ ಅಭಿವೃದ್ಧಿಗೆ ಚಕ್ರವೂ ಸಿಗುತ್ತಿರಲಿಲ್ಲ. ಇಂದು ದೇಶಾದ್ಯಂತ ಸುಮಾರು 15 ಸಾವಿರಕ್ಕೂ ಅಧಿಕ ರೈಲುಗಳು ಸಂಚರಿಸುತ್ತಿವೆ. ನೀವು ಒಮ್ಮೆಯಾದರೂ ರೈಲಿನಲ್ಲಿ ಪ್ರಯಾಣ ಮಾಡಿಯೇ ಇರುತ್ತೀರಿ. ಆದರೆ ರೈಲು ನಿರ್ಮಾಣ ಮಾಡಲು ಎಷ್ಟು ವೆಚ್ಚವಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಬಹುಶಃ ಇದರ ಬಗ್ಗೆ ನೀವು ಎಂದಿಗೂ ಯೋಚಿಸದೇ ಇರಬಹುದು. ಹಾಗೇನಾದರೂ ಯೋಚಿಸಿದರೆ ಅದಕ್ಕೆ ಉತ್ತರ ಸಿಗದೇ ಇದ್ದಿರಬಹುದು. ಹಾಗಾದರೆ ರೈಲು ತಯಾರಿಸಲು ಭಾರತೀಯ ರೈಲ್ವೇ ಎಷ್ಟು ಖರ್ಚು ಮಾಡುತ್ತದೆ ಎಂಬುದನ್ನು ನಾವು ಇಂದು ನಿಮಗೆ ಹೇಳಲಿದ್ದೇವೆ. ರೈಲು ಪ್ರಯಾಣ ಮಾಡುವ ಟ್ರ್ಯಾಕ್‌ ಒಂದೇ ಆದರೂ, ಅದರ ಮೇಲೆ ಓಡುವ ರೈಲಿನ ಬೆಲೆ ಒಂದೇ ಇರೋದಿಲ್ಲ ಅನ್ನೋದನ್ನ ಮೊದಲಿಗೆ ತಿಳಿಸುತ್ತೇವೆ.

ರೈಲಿನಲ್ಲಿ ಹಲವು ರೀತಿಯ ಕೋಚ್‌ಗಳು ಇರುವುದನ್ನು ನೀವು ನೋಡಿರಬಹುದು. ಜನರಲ್ ಕೋಚ್, ಸ್ಲೀಪರ್ ಕೋಚ್ ಮತ್ತು ಎಸಿ ಕೋಚ್. ಈಗ ಮೊದಲಿಗೆ ಈ ಕೋಚ್‌ಗಳನ್ನು ತಯಾರಿಸಲು ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಜನರಲ್‌ ಕೋಚ್‌ ಅಥವಾ ಡಿ ದರ್ಜೆಯ ಕೋಚ್‌ಅನ್ನು ತಯಾರಿಸಲು ರೈಲ್ವೇಸ್‌ಗೆ 1 ಕೋಟಿ ರೂಪಾಯಿ ಖರ್ಚಾಗುತ್ತದೆ. ಇನ್ನು ಸ್ಲೀಪರ್‌ ಬೋಗಿ ತಯಾರು ಮಾಡಲು 1.5 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಅದೇ ರೀತಿ ಎಸಿ ಕೋಚ್‌ ತಯಾರು ಮಾಡಲು 2 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಇದು ಕೋಚ್‌ಗಳ ವಿಚಾರವಾಯಿತು. ಇನ್ನು ರೈಲಿನ ಒಂದು ಇಂಜಿನ್‌ ತಯಾರಿಸಲು 18-20 ಕೋಟಿ ರೂಪಾಯಿ ಬೇಕಾಗುತ್ತದೆ. ಇದರಿಂದಾಗಿ 24 ಬೋಗಿಗಳ ಒಂದು ಸಾಮಾನ್ಯ ರೈಲನ್ನು ನಿರ್ಮಾಣ ಮಾಡಲು ಭಾರತೀಯ ರೈಲ್ವೇ 60 ರಿಂದ 70 ಕೋಟಿಖರ್ಚು ಮಾಡುತ್ತದೆ.

Tap to resize

Latest Videos

ದೇಶದಲ್ಲಿರುವ ನಾಲ್ಕು ವಿಭಿನ್ನ ರೀತಿಯ ರೈಲುಗಳ (ಎಂಜಿನ್ ಸೇರಿದಂತೆ) ಬೆಲೆ ಇಲ್ಲಿದೆ. ಸಾಮಾನ್ಯ ರೈಲನ್ನು ತಯಾರಿಸಲು ರೈಲ್ವೆಗಳು ಒಟ್ಟು ಎಷ್ಟು ಖರ್ಚು ಮಾಡುತ್ತವೆ ಎಂಬುದರ ಕುರಿತು ಇದು ನಿಮಗೆ ಇದು ಮಾಹಿತಿ ನೀಡುತ್ತದೆ. 20 ಕೋಚ್‌ಗಳ ಸಾಮಾನ್ಯ ಮೆಮು ಟ್ರೇನ್‌ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಖರ್ಚಾಗಲಿದೆ. 25 ಕೋಚ್‌ಗಳ ಐಸಿಎಫ್‌ ಟೈಪ್‌ನ ಮೇಲ್‌ ಎಕ್ಸ್‌ಪ್ರೆಸ್‌ ನಿರ್ಮಾಣಕ್ಕೆ 40.3 ಕೋಟಿ ರೂಪಾಯಿ ಖರ್ಚಾಗಲಿದೆ. ಇನ್ನು 21 ಬೋಗಿಯ ಎಲ್‌ಎಚ್‌ಬಿ ಟೈಪ್‌ನ ರಾಜಧಾನಿ ಎಕ್ಸ್‌ಪ್ರೆಸ್‌ ನಿರ್ಮಾಣಕ್ಕೆ 61.5 ಕೋಟಿ ರೂಪಾಯಿ ಖರ್ಚಾಗುತ್ತದೆ. 19 ಕೋಚ್‌ಗಳ ಎಲ್‌ಎಚ್‌ಬಿ ಟೈಪ್‌ನ ಶತಾಬ್ದಿ ಎಕ್ಸ್‌ಪ್ರೆಸ್‌ ನಿರ್ಮಾಣಕ್ಕೆ 60 ಕೋಟಿ ರೂಪಾಯಿ ವೆಚ್ಚವಾಗುತ್ತದೆ.

ಇದೊಂದು ಟಿಕೆಟ್‌ ಇದ್ರೆ ಸಾಕು.. 56 ದಿನಗಳ ಕಾಲ ರೈಲಿನಲ್ಲಿ ಇಡೀ ಭಾರತವನ್ನು ಸುತ್ತಬಹುದು..ಇದನ್ನು ಬುಕ್‌ ಮಾಡೋದು ಹೇಗೆ?

60-70 ಕೋಟಿ ರೂಪಾಯಿ ಅನ್ನೋದು ಭಾರತೀಯ ರೈಲ್ವೇಯ ಸಾಮಾನ್ಯ ರೈಲಿನ ಕಥೆ ಆಯಿತು. ಆದರೆ, ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ವಂದೇ ಭಾರತ್‌ ನಿರ್ಮಾಣಕ್ಕೆ ಆಗುವ ಖರ್ಷು ಎಷ್ಟು ಅನ್ನೋದನ್ನ ನೋಡೋದಾದರೆ, ಈ ರೈಲುಗಳಿಗೆ ಪ್ರಸ್ತುತ 110 ರಿಂದ 120 ಕೋಟಿ ವೆಚ್ಚವಾಗುತ್ತಿದೆ.

ಟಿಕೆಟ್‌ ಖರೀದಿ ಮಾಡೋ ಮುನ್ನ ಎಚ್ಚರ, ಇವು ಭಾರತದ ಅತ್ಯಂತ ಕೊಳಕು ಟ್ರೇನ್‌ಗಳು!

click me!