ಕೊರೋನಾ ಹಾವಳಿ| ಒಂದಾದ ಬಳಿಕ ಮತ್ತೊಂದರಂತೆ ಹರಡುತ್ತಿವೆ ಸುಳ್ಳು ಸುದ್ದಿ| ವದಂತಿ ತಡೆಯಲು ಮುಂದಾದ ವಾಟ್ಸಾಪ್
ನವದೆಹಲಿ(ಏ.08): ಕೊರೋನಾ ವೈರಸ್ ಕುರಿತಂತೆ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್ ಅಂತಹ ಸುದ್ದಿಗಳ ಪ್ರಸರಣಕ್ಕೆ ಬ್ರೇಕ್ ಹಾಕಿದೆ.
ಲಾಕ್‌ಡೌನ್ ತೆರವುಗೊಳಿಸುವುದು ಅಸಾಧ್ಯ: ಸರ್ವಪಕ್ಷ ಸಭೆಯಲ್ಲಿ ಮೋದಿ ಸುಳಿವು!
undefined
ಪದೇಪದೇ ಕಳಿಸಲಾಗುವ (ಫಾರ್ವರ್ಡೆಡ್) ಸಂದೇಶಗಳನ್ನು ಯಾವುದೇ ವ್ಯಕ್ತಿ ಒಮ್ಮೆಲೆ ಒಬ್ಬರಿಗೆ ಮಾತ್ರ ರವಾನಿಸುವ ಫೀಚರ್ ಅನ್ನು ಸೇರ್ಪಡೆಗೊಳಿಸಿದೆ. ಐದು ಅಥವಾ ಅದಕ್ಕಿಂತ ಬಾರಿ ಈಗಾಗಲೇ ಫಾರ್ವರ್ಡ್ ಆಗಿರುವ ಸಂದೇಶಗಳಿಗೆ ಇದು ಅನ್ವಯವಾಗಲಿದೆ.
ಫಾರ್ವರ್ಡ್ ಸಂದೇಶಗಳನ್ನು ಪತ್ತೆ ಹಚ್ಚಲು ‘ಫಾರ್ವರ್ಡ್’ ಲೇಬಲ್ ಅನ್ನು ವಾಟ್ಸ್‌ಆ್ಯಪ್ ಪರಿಚಯಿಸಿತ್ತು. ಅಂತಹ ಸಂದೇಶಗಳನ್ನು ಒಮ್ಮೆಲೆ 5 ಮಂದಿಗಷ್ಟೇ ಕಳಿಸುವ ವ್ಯವಸ್ಥೆ ರೂಪಿಸಿತ್ತು.