ಲಾಕ್‌ಡೌನ್ ತೆರವುಗೊಳಿಸುವುದು ಅಸಾಧ್ಯ: ಸರ್ವಪಕ್ಷ ಸಭೆಯಲ್ಲಿ ಮೋದಿ ಸುಳಿವು!

ಕೊರೋನಾ ಅಟ್ಟಹಾಸ, ದೇಶದಾದ್ಯಂತ ಲಾಕ್‌ಡೌನ್| ಲಾಕ್‌ಡೌನ್ ಹೇರಿದ್ದರೂ ಇಳಿದಿಲ್ಲ ಕೊರೋನಾ ಸೋಂಕಿತರ ಸಂಖ್ಯೆ| ಈ ಬಗ್ಗೆ ಚರ್ಚೆ ನಡೆಸಲು ಸರ್ವಪಪಕ್ಷ ಸಭೆ ಕರೆದಿದದ್ದ ಪ್ರಧಾನಿ ಮೋದಿ| ಸಭೆಯಲ್ಲಿ ಲಾಕ್‌ಡೌನ್ ತೆರವು ಮಾಡಲು ಅಸಾಧ್ಯ ಎಂಬ ಸುಳಿವು

Not Possible To Lift Lockdown On April 14th PM Modi hints at all party meeting

ನವದೆಹಲಿ(ಏ.08): ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಹೇರಲಾಗಿದೆ. ಹೀಗಿದ್ದರೂ ಕೊರೋನಾ ಅಟ್ಟಹಾಸ ಮಾತ್ರ ಕುಗ್ಗಿಲ್ಲ. ಬದಲಾಗಿ ಈವರೆಗೂ ಕೊರೋನಾ ಪೀಡಿತರ ಸಂಖ್ಯೆ ಐದು ಸಾವಿರ ದಾಟಿದ್ದು, ಸಾವಿನ ಸಂಖ್ಯೆಯೂ ಹೆಚ್ಚಿದೆ. ಹೀಗಿರುವಾಗ ಕಳೆದೆರಡು ವಾರದಿಂದ ಮನೆಯಲ್ಲೇ ಕೈದಿಗಳಂತಿರುವ ಜನರ ಮನಸ್ಸಿನಲ್ಲಿ ಏಪ್ರಿಲ್ 14ರಂದು ಲಾಕ್‌ಡೌನ್ ತೆರವಾಗುತ್ತಾ? ಅಥವಾ ಮುಂfದುವರೆಯುತ್ತಾ ಎಂಬ ಪ್ರಶ್ನೆ ಸಹಜವಾಗೇ ಮನೆ ಮಾಡಿದೆ. ಸದ್ಯ ಇಂದು ಪಿಎಂ ಮೋದಿ ನೇತೃತ್ವದಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಈ ಸಂಬಂಧ ಸುಳಿವು ಲಭ್ಯವಾಗಿದೆ.

ವಾಹನವಿಲ್ಲ, ಕುಟುಂಬಸ್ಥರು ಬರುತ್ತಿಲ್ಲ: ಹಿಂದೂ ಮಹಿಳೆಯ ಶವ ಹೊತ್ತೊಯ್ದ ಮುಸ್ಲಿಂ ಯುವಕರು!

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸರ್ವ ಪಕ್ಷಗಳ ಸಭೆ ನಡೆಸಿದ್ದು, ಈ ವೇಳೆ ಲಾಖ್‌ಡೌನ್ ಏಪ್ರಿಲ್ 14ರಂದು ತೆರವುಗೊಳಿಸುವುದು ಅಸಾಧ್ಯ ಎಂಬ ಸುಳಿವು ನೀಡಿದ್ದಾರೆ. ಲಾಕ್​ಡೌನ್​ ಮಾಡಿದ್ದರೂ ಕೊರೋನಾ ಸೋಂಕು ಹತೋಟಿಗೆ ​ ಬಾರದ ಹಿನ್ನೆಲೆಯಲ್ಲಿ ಲಾಕ್​ಡೌನ್ ಮುಂದುವರೆಸುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸೋಂಕಿತರ ಸಂಖ್ಸಯೆ ಐದು ಸಾವಿರ ಗಡಿ ದಾಟಿದ್ದ್ಯದು, ಹೀಗಿರುವಾಗ ಇಂತಹ ಪರಿಸ್ಥಿತಿಯಲ್ಲಿ ಲಾಕ್​ಡೌನ್​ ಮುಂದುವರೆಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

"

Latest Videos
Follow Us:
Download App:
  • android
  • ios