ಜಿಯೋ ನೀಡುತ್ತಿರುವ ಕಡಿಮೆ ಬೆಲೆಯ 3 ರೀಚಾರ್ಜ್ ಪ್ಲಾನ್‌ಗಳು

By Mahmad Rafik  |  First Published Sep 17, 2024, 9:32 PM IST

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಮೂರು ಆಕರ್ಷಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದೆ. ಈ ಯೋಜನೆಗಳು 28 ದಿನಗಳಿಂದ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅನ್‌ಲಿಮಿಟೆಡ್ ಕರೆಗಳು, ದೈನಂದಿನ ಡೇಟಾ ಮತ್ತು SMS ಪ್ರಯೋಜನಗಳನ್ನು ಒಳಗೊಂಡಿವೆ.


ಮುಂಬೈ: ದೇಶದ ದಿಗ್ಗಜ ಮತ್ತು ಪ್ರಸಿದ್ದ ಖಾಸಗಿ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಬೆಲೆ ಏರಿಕೆ ಮಾಡಿಕೊಂಡ ಬಳಿಕ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಹಾಗಾಗಿ ಬಳಕೆದಾರರನ್ನು ಉಳಿಸಿಕೊಳ್ಳಲು ಮುಂದಾಗಿರುವ ಹೊಸ ಹೊಸ ಆಫರ್‌ಗಳನ್ನು ಪರಿಚಯಿಸುತ್ತಿದೆ. ಆದರೂ ಈ ಬೆಲೆಗಳು ಮೊದಲಿಗಿಂತ ಅಧಿಕವಾಗಿರುವ ಕಾರಣ, ನೆಟ್ಟಿಗರು ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಜಿಯೋ ತನ್ನ ಬಳಕೆದಾರರಿಗೆ ನೀಡುತ್ತಿರುವ ಮೂರು ಕಡಿಮೆ ಬೆಲೆಯ ಪ್ಲಾನ್‌ಗಳ ಮಾಹಿತಿ ಇಲ್ಲಿದೆ. ಪ್ರಿಪೇಯ್ಡ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ತರಲಾಗಿದೆ. ಆ ಮೂರು ಪ್ಲಾನ್‌ಗಳು ಏನು ಎಂಬುದನ್ನು ನೋಡೋಣ ಬನ್ನಿ.

1.ವ್ಯಾಲಿಡಿಟಿ 28 ದಿನ
ಈ ಯೋಜನೆಯು 28 ದಿನ ವ್ಯಾಲಿಡಿಟಿಯನ್ನು ಹೊಂದಿದೆ. ಇದು 300 ರೂಪಾಯಿಗೂ ಕಡಿಮೆ ಬೆಲೆಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ಕಾಲ್, 100 ಎಸ್‌ಎಂಎಸ್ ಜೊತೆ ಹೆಚ್ಚುವರಿಯಾಗಿ ಹಲವು ಬೆನೆಫಿಟ್‌ಗಳು ಸಿಗುತ್ತವೆ. 249 ರೂಪಾಯಿ ರೀಚಾರ್ಜ್ ಮಾಡಿಕೊಂಡ್ರೆ ಪ್ರತಿದಿನ 1 ಜಿಬಿ ಡೇಟಾ, 100 ಎಸ್‌ಎಂಎಸ್ ಸಿಗುತ್ತದೆ.

Latest Videos

undefined

BSNL Plan ನೋಡಿ Portಗೆ ಮುಂದಾದ Jio-Airtel ಗ್ರಾಹಕರು: 45 ದಿನದವರೆಗೆ ಪ್ರತಿದಿನ ಸಿಗುತ್ತೆ 2GB ಡೇಟಾ!

2.ಮತ್ತೊಂದು 28 ದಿನ ವ್ಯಾಲಿಡಿಟಿಯ ಯೋಜನೆ 
ಜಿಯೋ 28 ದಿನದ ಮತ್ತೊಂದು ಯೋಜನೆ ನೀಡುತ್ತಿದೆ. ಇದರ ಬೆಲೆ 299 ರೂಪಾಯಿ  ಆಗಿದೆ. 249 ರೂಪಾಯಿಗೆ ಹೋಲಿಸಿದ್ರೆ ಈ ಯೋಜನೆ ಕೆಲ ಹೆಚ್ಚು ಬೆನೆಫಿಟ್‌ಗಳನ್ನು ಹೊಂದಿದೆ. ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ 1.5 ಜಿಬಿ ಡೇಟಾ, 100 ಎಸ್‌ಎಂಎಸ್, ಅನ್‌ಲಿಮಿಟೆಡ್ ಕಾಲ್   ಸೌಲಭ್ಯ ಸಿಗುತ್ತದೆ. ಡೇಟಾ ಲಿಮಿಟ್ ಅಂತ್ಯವಾಗುತ್ತಿದ್ದಂತೆ ನೆಟ್ ಸ್ಪೀಡ್  64kbps ಆಗುತ್ತದೆ.

3.84 ದಿನ ವ್ಯಾಲಿಡಿಟಿಯ ಪ್ಲಾನ್
ನೀವು ದೀರ್ಘದಿನದ ವ್ಯಾಲಿಡಿಟಿಯ ಪ್ಲಾನ್ ನೋಡುತ್ತಿದ್ದರೆ ಇದು ನಿಮಗೆ ಒಳ್ಳೆಯ ಆಯ್ಕೆಯಾಗಲಿದೆ. 799 ರೂಪಾಯಿ ರಿಚಾರ್ಜ್ ಮಾಡಿಕೊಂಡರೆ 84 ದಿನ ವ್ಯಾಲಿಡಿಟಿ ಹೊಂದಿರುತ್ತದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 1.5 ಜಿಬಿ  ಡೇಟಾ,  100 ಎಸ್‌ಎಂಎಸ್ ಹಾಗೂ ಅನ್‌ಲಿಮಿಟೆಡ್ ಕಾಲ್ ಸೌಲಭ್ಯ ಹೊಂದಿರುತ್ತದೆ. ಜಿಯೋ ಬಳಕೆದಾರರು ಯಾವುದೇ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೆ ಜಿಯೋ ಟಿವಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾಗಳ ಸಬ್‌ಸ್ಕ್ರಿಪ್ಷನ್ ಸಹ ಉಚಿತವಾಗಿ ಸಿಗಲಿದೆ.

ಜಿಯೋದಿಂದ ಹೆಚ್ಚು ವ್ಯಾಲಿಡಿಟಿಯ ಕಡಿಮೆ ಬೆಲೆಯ ಪ್ಲಾನ್; ದಿನಕ್ಕೆ 10 ರೂಪಾಯಿ ಹಣ ಖರ್ಚಾಗಲ್ಲ!

click me!