ಚೀನಾ ಕೊರೋನಾಗೆ ಬ್ರೇಕ್ ಹಾಕಿದ್ದು ಹಾಗಿಗಲ್ಲ, ಅದರ ಹಿಂದಿದೆ ಈ ಟೆಕ್‌ ಅಸ್ತ್ರ!

By Suvarna NewsFirst Published Mar 26, 2020, 8:56 PM IST
Highlights

ತಂತ್ರಜ್ಞಾನದಲ್ಲಿ ಚೀನಾ ಮುಂದುವರಿದ ದೇಶ. ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಚೀನಾ ತಂತ್ರಜ್ಞಾನದ ಮೊರೆ ಹೋಗಿದೆ. ಅದು ಹೇಗೆ ಅಂತೀರಾ? ಈ ಸ್ಟೋರಿ ಓದಿ... 
 

ಕೊರೋನಾ ಕಿರಿಕ್ ಜಾಸ್ತಿಯಾಗಿದೆ, ವಿಶ್ವದೆಲ್ಲಡೆ ಸಾವಿರಾರು ಮಂದಿಯ ಪ್ರಾಣ ಕಿತ್ತಿದೆ. ಲಕ್ಷಾಂತರ ಮಂದಿಗೆ ಸೋಂಕು ಹಿಡಿಸಿ ಕೇಕೆ ಹಾಕುತ್ತಿದೆ. ಬಹಳ ವೇಗವಾಗಿ ಈ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿದೆ. ಇದರ ನಿಯಂತ್ರಣವೇ ಕಷ್ಟ ಸಾಧ್ಯ ಎಂಬಂತೆ ಆಗಿದೆ. ಚೀನಾದ ವುಹಾನ್ ಮೂಲಕ ಹುಟ್ಟಿಕೊಂಡ ಸೋಂಕು ಸಾಂಕ್ರಾಮಿಕವಾಗಿ ಹರಡದಂತೆ ಟೆಕ್ ಅಸ್ತ್ರ ಪ್ರಯೋಗಕ್ಕೆ ಚೀನಾ ಮುಂದಾಗಿದೆ. ಈಗಾಲೇ ಕಾರ್ಯಾಚರಣೆಯನ್ನೂ ಶುರುಮಾಡಿದೆ. ಹಾಗಾದರೆ ಏನೆಲ್ಲ ಮಾಡಿದೆ? ಮಾಡುತ್ತಿದೆ? ತಂತ್ರಜ್ಞಾನಗಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದೆ? ಆದರೆ, ನಮ್ಮ ದೇಶದಲ್ಲಿ ಇದು ಸಾಧ್ಯವೇ ಎಂಬುದು ಮುಂದಿನ ಪ್ರಶ್ನೆಯಾಗಿದೆ. 

ಈಗ ಕೊರೋನಾ ವೈರಸ್ ಬಗ್ಗೆ ನೋಡುವ ಮೊದಲು ಚೀನಾದಲ್ಲೇ 2002ರಲ್ಲಿ ಹುಟ್ಟಿಕೊಂಡ ಸಾರ್ಸ್ (ಎಸ್ಎಆರ್ ಎಸ್) ಅಂದರೆ ತೀವ್ರ ಉಸಿರಾಟದ ಸಮಸ್ಯೆಯ ಸೋಂಕು ಕಾಣಿಸಿಕೊಂಡಿತ್ತು. ಈ ವೈರಾಣುವನ್ನು ಡಿಕೋಡ್ ಮಾಡಲು ಅದೆಷ್ಟೋ ಸಂಶೋಧಕರ ತಂಡ ಹಗಲು-ರಾತ್ರಿಯೆನ್ನದೆ ಪರಿಶ್ರಮಪಟ್ಟಿದ್ದವು. 

ಇದನ್ನೂ ನೋಡಿ | ಕೊರೋನಾ ತಡೆಯಲು ರೆಡಿಯಾಗಿದೆ ಕಂಡು ಕೇಳರಿಯದ ಟೆಕ್ನಿಕ್

ವರ್ಷ ಬಳಿಕ ಅಂತೂ ಸಮಸ್ಯೆಯ ಮೂಲವನ್ನು ಕಂಡುಹಿಡಿದಿದ್ದರು. ಈಗ ತಂತ್ರಜ್ಞಾನವೂ ಅಷ್ಟೇ ವೇಗವಾಗಿ ಬೆಳೆದಿದ್ದರಿಂದ ಕೇವಲ ಒಂದೇ ತಿಂಗಳಲ್ಲಿ ಕೊರೋನಾ ವೈರಾಣುವಿನ ಜಿನೋಮ್ ಅನ್ನು ಕಂಡುಹಿಡಿಯಲಾಗಿದೆ. ಈಗ ಅದರ ವೈರಾಣು ನಿರ್ಮೂಲನೆಗೆ ಮದ್ದನ್ನು ಕಂಡುಹಿಡಿಯುವ ಹಾದಿಯಲ್ಲಿ ಸಮರೋಪಾದಿಯಲ್ಲಿ ಸಾಗಿದೆ. ಇದಕ್ಕೆ ತಂತ್ರಜ್ಞಾನಗಳ ಮೊರೆಯನ್ನೂ ಹೋಗಿದೆ. ಅಲ್ಲೀಗ ಏನೆಲ್ಲ ಮಾಡಲಾಗುತ್ತಿದೆ ಎಂಬುದನ್ನು ಈಗ ಗಮನಿಸೋಣ.

ಕಲರ್ ಕೋಡಿಂಗ್:
ಒಬ್ಬೊಬ್ಬರಿಗೇ ಕೊರೋನಾ ಸೋಂಕು ತಗುಲಿದೆಯೇ ಎಂಬುದನ್ನು ಪರೀಕ್ಷಿಸಲು ತಜ್ಞರಿಂದಲೂ ಅಸಾಧ್ಯವಾದ ಮಾತು. ಕಾರಣ, ಸಮಯ ಹಾಗೂ ಸ್ಥಳದ ಅಭಾವ ಹೆಚ್ಚುತ್ತಲೇ ಸಾಗುವುದಲ್ಲದೆ, ಎಲ್ಲರೂ ಒಂದೇ ಕಡೆ ಸೇರುವುದು ಮತ್ತಷ್ಟು ಅಪಾಯಕಾರಿ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನದ ದೈತ್ಯ ಅಲಿಬಾಬಾ ಮತ್ತು ಟೆನ್ಸೆಂಟ್ ಮೊರೆ ಹೋಗಿರುವ ಚೀನಾ ಸರ್ಕಾರ, ಈ ಎರಡು ಸಂಸ್ಥೆಗಳ ಸಹಯೋಗದಲ್ಲಿ ಕಲರ್ ಕೋಡೆಡ್ ಹೆಲ್ತ್ ರೇಟಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸಿದೆ. 

ಇದು ದಿನವೊಂದಕ್ಕೆ ಲಕ್ಷಗಟ್ಟಲೇ ಮಂದಿಯನ್ನು ಟ್ರ್ಯಾಕ್ ಮಾಡಿ ಅವರ ಆರೋಗ್ಯ ಮಟ್ಟವನ್ನು ಅಳೆಯುತ್ತದೆ. ಅಲಿಬಾಬಾ ಸಹಯೋಗದೊಂದಿಗೆ ಮೊದಲು ಹ್ಯಾಂಗ್ಜೌನಲ್ಲಿ ಅಭಿವೃದ್ಧಿಪಡಿಸಲಾಗಿರುವ ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಅನ್ನು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಲಾಯಿತು. 

ಇದರಲ್ಲಿ 3 ಬಣ್ಣಗಳ ಸೂಚಕಗಳಿವೆ. ಜನರ ಪ್ರಯಾಣ ಹಾಗೂ ವೈದ್ಯಕೀಯ ಹಿನ್ನೆಲೆಗಳನ್ನು ಆ್ಯಪ್ ನಲ್ಲಿ ಅಡಕವಾಗಿರುವ ಹಸಿರು, ಹಳದಿ ಮತ್ತು ಕೆಂಪು ಬಣ್ಣಗಳು ತೋರ್ಪಡುತ್ತವೆ. ಟೆನ್ಸೆಂಟ್ ಅಭಿವೃದ್ಧಿಪಡಿಸಿರುವ ಇದೇ ರೀತಿಯ ಅಪ್ಲಿಕೇಶನ್ ಅನ್ನು ಶೆನ್ಜೆನ್ ನಲ್ಲಿ ಅಳವಡಿಸಲಾಗಿದೆ. 

ಇಲ್ಲಿ ಜನತೆ ಮಾಡಬೇಕಾದ್ದಾನೆಂದರೆ ಅವರು ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅಲಿಬಾಬಾ ಅಲಿ ಪೇ ಸೇವೆಗಳ ಮೂಲಕ ಲಾಗಿ ಆಗಬೇಕಿದೆ. ಅಲ್ಲಿ ಹಸಿರು ಬಣ್ಣದ ಕೋಡ್ ಲಭ್ಯವಾದರೆ ಮಾತ್ರ ಅಂಥವರು ಸಾರ್ವಜನಿಕ ಸ್ಥಳಗಳಾದ ಮೆಟ್ರೋ ಸ್ಟೇಷನ್, ಕಚೇರಿಗಳಲ್ಲಿ ಪ್ರವೇಶ ಪಡೆಯಬಹುದು. ಅದೂ ಈ ಹಸಿರು ಕ್ಯುಆರ್ ಕೋಡ್ ಅನ್ನು ತೋರಿಸಬೇಕಾಗುತ್ತದೆ. ಜತೆಗೆ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಈ ಕೋಡ್ ಹಾಗೂ ದೇಹದ ಉಷ್ಣತೆಯನ್ನು ಪರಿಶೀಲಿಸಲಾಗುತ್ತಿದೆ. ಈ ಸೌಲಭ್ಯ ಈಗಾಗಲೇ ಅಲ್ಲಿನ 200ಕ್ಕೂ ಹೆಚ್ಚು ನಗರಗಳಲ್ಲಿ ಬಳಲಸಲಾಗುತ್ತಿದ್ದು, ಶೀಘ್ರದಲ್ಲಿ ದೇಶದೆಲ್ಲೆಡೆ ವಿಸ್ತರಿಸುವ ಚಿಂತನೆ ಇದೆ. 

ಇದನ್ನೂ ನೋಡಿ | ಶೇ.56ರಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಆರಂಭ

ರೋಬೋಟಿಕ್ಸ್:
ಈಗ ಎಲ್ಲವೂ ರೋಬೋಮಯವಾಗುತ್ತಿದೆ. ಚೀನಾದ ಕೆಲವು ಆಸ್ಪತ್ರೆ, ಹೋಟೆಲ್ ಗಳಲ್ಲಿ ರೋಬೋಗಳು ಕಾರ್ಯನಿರ್ವಹಿಸುತ್ತಿವೆ. ಇವು ಅಡುಗೆ ತಯಾರಿಸುವುದರಿಂದ ಹಿಡಿದು, ಅದರ ವಿತರಣೆ ಸೇರಿ ಇನ್ನಿತರ ಕಾರ್ಯವನ್ನು ನೋಡಿಕೊಳ್ಳುತ್ತಿದೆ. ಜತೆಗೆ ಸೋಂಕು ಹರಡದಂತೆ ಸ್ವಚ್ಛತೆಗೂ ಆದ್ಯತೆ ಕೊಡುತ್ತಿದೆ. ಮತ್ತೊಂದೆಡೆ ಸಿಂಗಾಪುರದಿಂದ ಹ್ಯಾಂಗ್ಜೌಗೆ ವಿಮಾನ ಪ್ರಯಾಣ ವೇಳೆಯೂ ಚಿಕ್ಕರೋಬೋವೊಂದು ಕಾರ್ಯನಿರ್ವಹಿಸುತ್ತಿದೆ.

ಡ್ರೋಣಾಚಾರ್ಯ:
ಈಗ ಎಲ್ಲ ಕಡೆಯೂ ಮನುಷ್ಯನೇ ಹೋಗಿ ತಲುಪಿಸುವ ಕಾಲ ಹೋಯಿತು. ಅದಕ್ಕೆಂದೇ ಡ್ರೋನ್ ಅನ್ನು ಕಂಡುಹಿಡಿಯಲಾಗಿದೆ. ಈಗ ಈ ಡ್ರೋಣ್ ನ ನಿಜವಾದ ಸೇವೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಲಿದೆ. ಸೋಂಕುಪೀಡಿತರ ಸಹಿತ ಅಗತ್ಯ ಇರುವ ಎಲ್ಲ ವೈದ್ಯಕೀಯ ಉಪಕರಣ, ಔಷಧ ಸೇರಿ ವಸ್ತುಗಳನ್ನು ಇದೇ ಡ್ರೋನ್ ತಲುಪಿಸುವ ಕಾರ್ಯ ಮಾಡುತ್ತಿದೆ. ಜತೆಗೆ ಆರೋಗ್ಯ ಸಂಬಂಧಿ ಎಚ್ಚರಿಕೆ ಕ್ರಮಗಳ ಕ್ಯುಆರ್ ಕೋಡ್ ಅನ್ನೂ ಇದು ಹೊಂದಿದೆ. ಮತ್ತೆ ಹಲವು ಕಡೆ ಕೃಷಿ ಸಂಬಂಧಿ ಡ್ರೋನ್ ಗಳನ್ನು ಬಳಸಿ ಸೋಂಕುನಿವಾರಕ ಔಷಧಗಳ ಸಿಂಪಡಣೆ ಮಾಡಲಾಗುತ್ತಿದೆ.

click me!