ನಾಳೆ ರಾತ್ರಿ ಚಂದ್ರವು ಎಂದಿನಂತಿರುವುದಿಲ್ಲ, ಬದಲಾಗಿ ಸೂಪರ್ ಮೂನ್ ಆಗಲಿದೆ. ಚಂದ್ರವು ಇಂದು ಎಂದಿಂಗಿಂತ ದೊಡ್ಡದಾಗಿ ಗೋಚರಿಸಲಿದೆಯಲ್ಲದೇ, ಹೆಚ್ಚು ಪ್ರಕಾಶಮಯವಾಗಲಿದೆ. ಖಗೋಳಶಾಸ್ತ್ರದಲ್ಲಿ ಈ ಪ್ರಕ್ರಿಯೆಯನ್ನು ಸೂಪರ್ ಮೂನ್ ಎನ್ನಲಾಗುತ್ತದೆ.

ಚಂದ್ರನು ಕಕ್ಷೆಯಲ್ಲಿ ತಿರುಗುತ್ತಾ ಆಗ್ಗಾಗೆ ಭೂಮಿಯ ಹತ್ತಿರಕ್ಕೆ ಬರುತ್ತದೆ. ಆ ಸಂದರ್ಭದಲ್ಲಿ ಚಂದ್ರವು ಸಾಮಾನ್ಯವಾಗಿ ದೊಡ್ಡದಾಗಿಯೂ, ಪ್ರಕಾಶಮಾನವಾಗಿಯೂ ಕಾಣಿಸುತ್ತದೆ.

ಆದರೆ ನಾಳೆಯ ಸೂಪರ್ ಮೂನ್ ವಿಶೇಷವಾದುದ್ದು. ಏಕೆಂದರೆ, 68 ವರ್ಷಗಳ ಬಳಿಕ ಇಷ್ಟು ದೊಡ್ಡದಾಗಿ ಕಾಣಿಸಲಿದೆ. 1948ರ ಬಳಿಕ ಮೊದಲ ಬಾರಿಗೆ ಚಂದ್ರವು ಭೂಮಿಯ ಇಷ್ಟು ಹತ್ತಿರ ಬರುತ್ತಿದೆ. ಮುಂದಿನ ತಿಂಗಳು ಡಿ.14ರಂದು ಕೂಡಾ ಸೂಪರ್ ಮೂನ್ ಸಂಭವಿಸಲಿದೆ. ಆದರೆ ಈ ಸೂಪರ್ ಮೂನ್ ನೋಡಬೇಕಾದರೆ ನಾವು 2034ರವರೆಗೆ ಕಾಯಬೇಕು ಎಂದು ನಾಸಾ ವಿಜ್ಞಾನಿಗಳು ಹೇಳುತ್ತಾರೆ.

ಇಂದು ಚಂದ್ರ ಎಂದಿಗಿಂತ ಶೇ.14ರಷ್ಟು ಭೂಮಿಗೆ  ಹತ್ತಿರವಾಗುತ್ತಿದೆಯಲ್ಲದೇ, ಸುಮಾರು 30 ಶೇ. ಹೆಚ್ಚು ಪ್ರಕಾಶಮಯವಾಗಿ ಗೋಚರಿಸಲಿದೆ.

ಸೂಪರ್ ಮೂನ್’ಅನ್ನು ನೋಡಲು ಟೆಲಿಸ್ಕೋಪ್ ಬೇಕಂತಿಲ್ಲ. ಜನರು ಬರೀ ಕಣ್ಣಿನಿಂದಲೂ ಸೂಪರ್ ಮೂನ್’ಅನ್ನು ನೋಡಬಹುದು. ಬೆಂಗಳೂರು ತಾರಾಲಯದಲ್ಲಿ ಸೋಮವಾರ ಸಂಜೆ ಅದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಯಿಂದ 7.30 ವರೆಗೆ ಈ ವ್ಯವಸ್ಥೆಯಿರುವುದು.