ನವದೆಹಲಿ (ಅ.02): ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್ (Elan Musk) ಮಾಲೀಕತ್ವದ ಸ್ಪೇಸ್ ಎಕ್ಸ್ (Spacex) ಅಧೀನ ಸಂಸ್ಥೆ ಸ್ಟಾರ್‌ಲಿಂಕ್ (Star Link) ಭಾರತದಲ್ಲಿ 2022ರ ಡಿಸೆಂಬರ್‌ನಿಂದ ಉಪಗ್ರಹ (satellite) ಆಧರಿತ ಬ್ರಾಡ್‌ಬ್ಯಾಂಡ್ (Broadband) ಸೇವೆ ಆರಂಭಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2 ಲಕ್ಷ ಸಕ್ರಿಯ ಟರ್ಮಿನಲ್‌ಗಳಿಗೆ ಭಾರತ (India) ಸರ್ಕಾರದಿಂದ ಅನುಮತಿ ಕೋರಿದೆ.
‘ಸ್ಪೇಸ್ ಎಕ್ಸ್ ಮಾಲೀಕತ್ವದ ಅಧೀನ ಸಂಸ್ಥೆ ಸ್ಟಾರ್‌ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಷನ್ ಪ್ರೈ.ಲಿ (SSCPL) ಭಾರತದಲ್ಲಿ ನ.1ರಿಂದ ತನ್ನ ಕಚೇರಿಯನ್ನು ಆರಂಭಿಸಿದೆ. ನಾವು ಇನ್ಮುಂದೆ ಪರವಾನಗಿ ಪಡೆಯಲು, ಬ್ಯಾಂಕ್ (Bank) ಖಾತೆ ತೆರೆಯಲು ಅರ್ಜಿ ಸಲ್ಲಿಸಬಹುದು’ ಕಂಪನಿಯ ಭಾರತದ ನಿರ್ದೇಶಕ ಸಂಜಯ್ ಭಾರ್ಗವ (Sanjay Bhargav) ತಿಳಿಸಿದ್ದಾರೆ.
undefined
ಜಿಯೋನಿಂದ ಬ್ರಾಡ್‌ಬ್ಯಾಂಡ್ ಸೇವೆ; ಸ್ಪೀಡ್ ಹೇಗಿದೆ? ಎಲ್ಲಿ? ಯಾವಾಗ? ಹೇಗೆ? ಇಲ್ಲಿದೆ ಫುಲ್ ಡೀಟೆಲ್ಸ್
ಭಾರತದಿಂದ ಈಗಾಗಲೇ ಸುಮಾರು 5000 ಬ್ರಾಡ್‌ಬ್ಯಾಂಡ್ ಆರ್ಡರ್ ಇರುವುದಾಗಿ ಕಂಪನಿ ಹೇಳಿಕೊಂಡಿದೆ. ಕಂಪನಿಯು ಸೆಕೆಂಡಿಗೆ 50ರಿಂದ 150 ಮೆಗಾ ಬೈಟ್ ವೇಗದಲ್ಲಿ ಡೇಟಾ (Data ) ಸೌಲಭ್ಯ ಒದಗಿಸಲು ಪ್ರತಿ ಗ್ರಾಹಕರಿಂದ 7,350 ರು. ಡೆಪಾಸಿಟ್ (Deposit) ಶುಲ್ಕ ಪಡೆಯಲಿದೆ. ಈ ಮೂಲಕ ಈಗಾಗಲೇ ಭಾರತದಲ್ಲಿ ಅಸ್ತಿತ್ವದಲ್ಲಿರುವ ರಿಲಯನ್ಸ್ (Reliance), ಜಿಯೋ, ಭಾರತಿ ಏರ್‌ಟೆಲ್, ವಡಾಫೋನ್ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಪೈಪೋಟಿ ನೀಡಲಿದೆ.
ಜಿಯೋ ಬ್ರಾಡ್ ಬ್ಯಾಂಡ್
41ನೇ ವಾರ್ಷಿಕ ಮಹಾಸಭೆಯಲ್ಲಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಜಿಯೋಗಿಗಾಫೈಬರ್ ಸೇವೆ ಹಾಗೂ ಜಿಯೋ ಫೋನ್ 2 ಬಿಡುಗಡೆ ಬಗ್ಗೆ ಪ್ರಕಟಿಸಿದ್ದರು.
ಜಿಯೋಗಿಗಾಫೈಬರ್ ಹೊಸ ಬ್ರಾಡ್‌ಬ್ಯಾಂಡ್ ಸೇವೆಯಾಗಿದ್ದು, 1 ಜಿಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೇವೆ ಕಲ್ಪಿಸುವುದಾಗಿ ಹೇಳಿದ್ದರು. ಅದೇ ರೀತಿ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಫೋನ್‌ನ ಹೊಸ ಹಾಗೂ ಮೇಲ್ದರ್ಜೆಗೇರಿಸಲಾಗಿರುವ ಜಿಯೋ ಫೋನ್ 2 ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.
ಈ 2 ಸೇವೆ/ಫೋನ್ ಗಳನ್ನು ಪಡೆಯಲು ಸ್ವಾತಂತ್ರ್ಯ ದಿನದಂದು [ಆ.15] ನೋಂದಣಿ ಆರಂಭಿಸಲಾಗಿದೆ.
ನೋಂದಣಿ ಹೇಗೆ:
ಜಿಯೋನ ಜಿಯೋ ಫೋನ್ 2 ಮತ್ತು ಜಿಯೋಗಿಗಾಫೈಬರ್ ಹೊಸ ಸೇವೆಗಳನ್ನು ಪಡೆಯಬಯಸುವ ಗ್ರಾಹಕರು MyJio ಆ್ಯಪ್ ಅಥವಾ Jio.Com.ನಲ್ಲಿ ನೋಂದಣಿ ಮಾಡಬೇಕು.
ತಮ್ಮ ಹೆಸರು, ನೋಂದಾಯಿತ ಈಮೇಲ್ ವಿಳಾಸವನ್ನು ನಮೂದಿಸಿ ಶುಲ್ಕವನ್ನು ಪಾವತಿಸಬೇಕು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಅಥವಾ ಜಿಯೋಮನಿ, ಪೇಟಿಎಂನಂತಹ ವ್ಯಾಲೆಟ್ ಆ್ಯಪ್‌ಗಳ ಮೂಲಕವೂ ಶುಲ್ಕವನ್ನು ಪಾವತಿಸಬಹುದಾಗಿದೆ.
ಜಿಯೋ ಗಿಗಾ ಫೈಬರ್ ಸೇವೆಯೂ ಸದ್ಯ ಬೀಟಾ-ಪರೀಕ್ಷೆ ಹಂತದಲ್ಲಿದೆ. ಯಾವ ಸ್ಥಳದಿಂದ ಹೆಚ್ಚು ಬೇಡಿಕೆ ಬರುತ್ತದೋ ಆ ಸ್ಥಳಗಳಿಗೆ ಆದ್ಯತೆಯ ಮೇರೆಗೆ ಜಿಯೋಗಿಗಾ ಫೈಬರ್ ಸಂಪರ್ಕ ಕಲ್ಪಿಸಲಾಗುವುದು ಎಂದು ಮುಕೇಶ್ ಅಂಬಾನಿ ಪ್ರಕಟಿಸಿದ್ದರು.
ಜಿಯೋ ಗಿಗಾ ಫೈಬರ್ ಸಂಪರ್ಕ ಅಳವಡಿಸಲು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಕಂಪನಿಯು ವಿಧಿಸುತ್ತಿಲ್ಲ. ಆದರೆ ಗ್ರಾಹಕರು ₹4500 ರಿಫಂಡೇಬಲ್ ಡಿಪಾಸಿಟನ್ನು ಪಾವತಿಸಬೇಕಾಗುತ್ತದೆ.
ಜಿಯೋಗಿಗಾಫೈಬರ್ ಸೇವೆ ಹೇಗೆ ಭಿನ್ನ?
ಅತೀ ದೊಡ್ಡ ‘ಗ್ರೀನ್ ಫೀಲ್ಡ್ ಫಿಕ್ಸೆಡ್ ಲೈನ್ ಬ್ರಾಡ್ ಬ್ಯಾಂಡ್ ಸೇವೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಯೋಗಿಗಾಫೈಬರ್ ದೇಶದ 1000 ನಗರ/ಪಟ್ಟಣ ಪ್ರದೇಶಗಳಲ್ಲಿ 1 ಜಿಬಿಪಿಎಸ್ ರಷ್ಟು ವೇಗದಲ್ಲಿ ಇಂಟರ್ನೆಟ್ ಸೇವೆ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದೆ.
‘ಇಂಟರ್ನೆಟ್ ಆಫ್ ಥಿಂಗ್ಸ್ [IoT]’ ಮತ್ತು ವರ್ಚುವಲ್ ರಿಯಾಲಿಟಿಯಂತಹ ಭವಿಷ್ಯದ ತಂತ್ರಜ್ಞಾನಗಳಿಗೂ ಈ ಹೊಸ ಸೇವೆಯೂ ಪೂರಕವಾಗಿರಲಿದೆ.
ಸದ್ಯ ಜಿಯೋಗಿಗಾಫೈಬರ್ ಸೇವೆಯು ಪ್ರಿಪೇಯ್ಡ್ ಯೋಜನೆಗಳಲ್ಲಿ ಮಾತ್ರ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಪೋಸ್ಟ್-ಪೇಯ್ಡ್ ಸೇವೆಗಳನ್ನು ಆರಂಭಿಸುವ ಯೋಜನೆಯಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಾನ್ಸೂನ್ ಹಂಗಾಮದೊಂದಿಗೆ ಮತ್ತೆ ಅಬ್ಬರಿಸಿದ ಜಿಯೋ
ಅದೇ ರೀತಿ ಜಿಯೋ ಫೋನ್ 2 ಕೂಡಾ ನಾಳೆಯಿಂದ ಗ್ರಾಹಕರು ಪಡೆಯಬಹುದು. ಜಿಯೋ ಫೋನ್-2 ಕ್ಕೆ ₹2999 ದರನಿಗದಿಪಡಿಸಲಗಿದೆ. ಆದರೆ ಕಂಪನಿಯೂ ಈ ಫೋನ್‌ಗಳಿಗೆ ಸೂಕ್ತವಾದ ಡೇಟಾ ಪ್ಲಾನ್‌ಗಳನ್ನು ಪ್ರಕಟಿಸಿಲ್ಲ.