15 ನಿಮಿಷದಲ್ಲಿ ದಿನಕ್ಕಾಗುವಷ್ಟು ಚಾರ್ಜ್: 1+‌ 8T 5G ಫೋನ್‌ ವಿಶೇಷತೆ ಹೀಗಿದೆ

By Kannadaprabha News  |  First Published Oct 17, 2020, 10:19 AM IST

15 ನಿಮಿಷದಲ್ಲಿ ಒಂದು ದಿನಕ್ಕೆ ಸಾಕಾಗುವಷ್ಟು ಚಾರ್ಜ್ | 48 ಮೆಗಾ ಪಿಕ್ಸೆಲ್‌ ಮುಖ್ಯ ಕ್ಯಾಮೆರಾ | ವನ್‌ಪ್ಲಸ್‌ 8ಟಿ 5ಜಿ ಫೋನ್ ಹೀಗಿದೆ ನೋಡಿ


ಸ್ಪೀಡಾಗಿ ಚಾರ್ಜ್ ಮಾಡಲು ವಾರ್ಪ್ ಚಾರ್ಜರ್‌ 65, ಸಕತ್ತಾಗಿ ಫೋಟೋ ತೆಗೆಯಲು 48 ಮೆಗಾ ಪಿಕ್ಸೆಲ್‌ ಮುಖ್ಯ ಕ್ಯಾಮೆರಾ, ವಿಡಿಯೋ ನೋಡಲು ಆಟವಾಡಿ ಮರುಳಾಗಲು 120 ಹಟ್ಜ್ರ್ಡ್  ಫ್ಲುಯ್ಡ್‌ ಅಮೋಲ್ಡ್‌ ಡಿಸ್‌ಪ್ಲೇ, ಮನಸಿನಷ್ಟೇ ವೇಗವಾಗಿ ಕೆಲಸ ಮಾಡಲು ಆಕ್ಸಿಜನ್‌ಓಸ್‌ 11 ಓಎಸ್‌ ಹೊಂದಿರುವ ವನ್‌ಪ್ಲಸ್‌ನ ನೂತನ ಫೋನ್‌ ವನ್‌ಪ್ಲಸ್‌ 8ಟಿ 5ಜಿ ಫೋನ್‌ ಪ್ರಿಯರ ಹೃದಯದಲ್ಲಿ ಹೊಸ ಫೋನಿನ ಆಸೆ ಚಿಗುರಿಸುವ ಸಾಧ್ಯತೆ ಇದೆ.

ಒಂದ್ಸಲ ರೇಟ್‌ ಕೂಡ ನೋಡಿಬಿಟ್ಟರೆ ನಿರ್ಧಾರ ಸುಲಭ. 8 ಜಿಬಿ ರ‍್ಯಾಮ್‌, 128 ಜಿಬಿ ಸ್ಟೋರೇಜ್‌ ಹೊಂದಿರುವ ಫೋನಿನ ಬೆಲೆ ರು.42,999 ಇದ್ದರೆ 12 ಜಿಬಿ ರ‍್ಯಾಮ್‌, 128 ಜಿಬಿ ಸ್ಟೋರೇಜ್‌ ಹೊಂದಿರುವ ಫೋನಿನ ಬೆಲೆ ರು.45,999.

Tap to resize

Latest Videos

undefined

4G ಸಪೋರ್ಟ್ ನೊಕಿಯಾ 215, ನೊಕಿಯಾ 225 ಫೋನ್ ಬಿಡುಗಡೆ!

ಹೊಸ ಫೋನ್‌ ತಂದಂತೆ ಚಾರ್ಜಿಂಗ್‌ ಸ್ಪೀಡ್‌ ಹೆಚ್ಚಿಸುತ್ತಿರುವ ವನ್‌ಪ್ಲಸ್‌ ಕಂಪನಿ ಈ ಸಲ 65 ವಾರ್ಪ್ ಚಾರ್ಜರ್‌ ತಂದಿದೆ. 4500 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಲು 39 ನಿಮಿಷಗಳು ಸಾಕು ಎನ್ನುತ್ತದೆ ಕಂಪನಿ.

15 ನಿಮಿಷದಲ್ಲಿ ಒಂದು ದಿನಕ್ಕೆ ಸಾಕಾಗುವಷ್ಟು ಚಾರ್ಜ್ ಮಾಡಬಹುದು ಅನ್ನುವುದು ಮತ್ತೊಂದು ಆಮಿಷ. ಆಕರ್ಷಕ ಡಿಸೈನ್‌ ಈ ಫೋನಿನ ಹೆಚ್ಚುಗಾರಿಕೆ. ಇದರ ಡಿಸ್‌ಪ್ಲೇ ಎಷ್ಟುಚೆನ್ನಾಗಿದೆ ಎನ್ನುವುದಕ್ಕೆ ಸೂರ್ಯನ ಪ್ರಖರ ಬೆಳಕಿನಲ್ಲೂ ಮೊಬೈನ್‌ ಸ್ಕ್ರೀನ್‌ನಲ್ಲಿರುವ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುತ್ತದೆ ಎನ್ನುತ್ತದೆ ಕಂಪನಿ.

ಇಯರ್‌ಫೋನ್‌, ಪವರ್‌ಬ್ಯಾಂಕ್

ಫೋನ್‌ ಬಿಡುಗಡೆ ಮಾಡುವಾಗ ಒಂದಷ್ಟು ಹೊಸ ಆ್ಯಸೆಸರೀಸ್‌ಗಳನ್ನೂ ಬಿಡುಗಡೆ ಮಾಡುವುದು ವನ್‌ಪ್ಲಸ್‌ ಸಂಪ್ರದಾಯ. ಆ ಪ್ರಕಾರ ವನ್‌ಪ್ಲಸ್‌ ಬಡ್ಸ್‌ ಝಡ್‌ ಎಂಬ ಇಯರ್‌ಫೋನ್‌ ಮತ್ತು 10000 ಎಂಎಎಚ್‌ ಸಾಮರ್ಥ್ಯದ ಪವರ್‌ಬ್ಯಾಂಕ್‌ ಬಿಡುಗಡೆ ಮಾಡಿದೆ.

ಹಾಟ್‌ 10 ಸ್ಮಾರ್ಟ್‌ಫೋನ್‌ ಬಿಡುಗಡೆಗೊಳಿಸಿದ ಇನ್ಫಿನಿಕ್ಸ್‌

ಇಯರ್‌ಫೋನ್‌ ಬೆಲೆ ರು.3,190. ಮೊದಲೇ ಬುಕ್‌ ಮಾಡಿದವರಿಗೆ ರು.2990ಕ್ಕೆ ಸಿಗಲಿದೆ. ಪವರ್‌ಬ್ಯಾಂಕ್‌ ಬೆಲೆ ರು.1299. ಇದರೊಂದಿಗೆ ವನ್‌ಪ್ಲಸ್‌ ಬುಲೆಟ್ಸ್‌ ವೈರ್‌ಲೆಸ್‌ ಬಿಡುಗಡೆಯಾಗಿದ್ದು, ಅದರ ಬೆಲೆ ರು.1999.

click me!