ನಾಸಾದ ಹೊಸ ಗಗನಯಾತ್ರಿಗಳ ತಂಡ ಸಿದ್ಧ: ಚಂದ್ರ, ಮಂಗಳ ಗೆಲ್ಲುವುದು ಶತಸಿದ್ಧ!

By Suvarna News  |  First Published Jan 12, 2020, 3:57 PM IST

ನಾಸಾ ಬತ್ತಳಇಕೆ ಸೇರಿದ 11 ಹೊಸ ಗಗನಯಾತ್ರಿಗಳು| ಎರಡು ವರ್ಷದ ತರಬೇತಿ ಪೂರ್ಣಗೊಳಿಸಿದ 11 ಗಗನಯಾತ್ರಿಗಳು| ನಾಸಾದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಸಿದ್ಧರಾದ ಯುವ ಗಗನಯಾತ್ರಿಗಳ ತಂಡ| ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಚಂದ್ರ, ಮಂಗಳ ಗ್ರಹ ಯೋಜನೆಗಳಲ್ಲಿ ಭಾಗಿ| ನಾಸಾ ಬತ್ತಳಿಕೆಯಲ್ಲಿ ಒಟ್ಟು 48 ಹೊಸ ಗಗನಯಾತ್ರಿಗಳು|


ವಾಷಿಂಗ್ಟನ್(ಜ.12): 11 ಹೊಸ ಗಗನಯಾತ್ರಿಗಳನ್ನು ನಾಸಾ ಸ್ವಾಗತಿಸಿದ್ದು, ಬಾಹ್ಯಾಕಾಶ ಯೋಜನೆಗಳಿಗೆ ಅರ್ಹರಾದ ಗಗನಯಾತ್ರಿಗಳ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ.

ಮುಂದಿನ ಪೀಳಿಗೆಗೆ ಬಾಹ್ಯಾಕಾಶದಲ್ಲಿ ಮಾನವೀಯತೆಯ ಪರಿಧಿಯನ್ನು ವಿಸ್ತರಿಸುವ ಅವಕಾಶ ಲಭಿಸಿದ್ದು, ಹೊಸ ಗಗನಯಾತ್ರಿಗಳು ಎರಡು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯ ಮೂಲಭೂತ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ನಾಸಾ ಸ್ಪಷ್ಟಪಡಿಸಿದೆ..

Tap to resize

Latest Videos

undefined

ಹೊಸ ಗಗನಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಚಂದ್ರ ಮತ್ತು ಅಂತಿಮವಾಗಿ ಮಂಗಳ ಗ್ರಹಕ್ಕೆ ನಿಯೋಜಿಸಲಾದ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ನಾಸಾ ತಿಳಿಸಿದೆ.

This week:

🎓 Graduating become eligible for spaceflights
🔭 Intriguing discoveries in our solar system – and beyond
✈️ Previewing airborne campaigns to study our home planet

Take a look at these stories and more: https://t.co/kk0w3JKHU1 pic.twitter.com/NcWtlxFnIa

— NASA (@NASA)

ಸುಸ್ಥಿರ ಚಂದ್ರನ ಪರಿಶೋಧನೆಯ ಗುರಿಯೊಂದಿಗೆ ನಾಸಾ 2024ರ ವೇಳೆಗೆ ಚಂದ್ರನತ್ತ ಮೊದಲ ಮಹಿಳಾ ಗಗನಯಾತ್ರ ಸಹಿತ ಮಾನವರನ್ನು ಕಳುಹಿಸಲಿದೆ.

ಅದರಂತೆ ಮಂಗಳ ಗ್ರಹದ ಮಾನವ ಪರಿಶೋಧನೆಯನ್ನು 2030ರ ದಶಕದ ಮಧ್ಯಭಾಗದಲ್ಲಿ ಹಮ್ಮಿಕೊಳ್ಳುವ ಗುರಿ ಹೊಂದಲಾಗಿದೆ.

ಸೃಷ್ಟಿಯಲ್ಲಿ ಸೃಷ್ಟಿಕರ್ತೆ: ಶೀಘ್ರದಲ್ಲೇ ಮಹಿಳೆಯಿಂದ ಬಾಹ್ಯಾಕಾಶ ನಡಿಗೆಯ ಶುಭ ವಾರ್ತೆ!

ಈ ಕುರಿತು ಮಾಹಿತಿ ನೀಡಿರುವ ನಾಸಧ ಹೂಸ್ಟನ್ ಏಜೆನ್ಸಿ ಕೇಂದ್ರದ ಆಡಳಿತಾಧಿಕಾರಿ ಜಿಮ್ ಬ್ರಿಡೆನ್‌ಸ್ಟೈನ್, 2020 ನಾಸಾದ ಆರ್ಟೆಮಿಸ್ ಕಾರ್ಯಕ್ರಮ ಮತ್ತು ಚಂದ್ರ ಹಾಗೂ ಅದಕ್ಕೂ ಮೀರಿದ ಕಾರ್ಯಗಳಿಗೆ ಪ್ರಗತಿಯ ಪ್ರಮುಖ ವರ್ಷವಾಗಿದೆ ಎಂದು ಬಣ್ಣಿಸಿದರು.

ಸದ್ಯ ಹೊಸ ಗಗನಯಾತ್ರಿಗಳಿಗೆ ಬೆಳ್ಳಿಯ ಪಿನ್ ನೀಡಲಾಗಿದ್ದು, ಇವರು ತಮ್ಮ ಮೊದಲ ಬಾಹ್ಯಾಕಾಶ ಪ್ರವಾಸ ಪೂರೈಸಿದ ಬಳಿಕ ಚಿನ್ನದ ಪಿನ್‌ಗಳನ್ನು ನೀಡಲಾಗುತ್ತದೆ ಎಂದು ನಾಸಾ ಹೇಳಿದೆ.

They studied. They trained. They graduated! 👩‍🚀🎓👨‍🚀

Chosen from a record-setting pool of more than 18,000 applicants, our completed two years of basic training to become the first class of astronauts to graduate under our program: https://t.co/2XmsMP7KU9 pic.twitter.com/6JnoWrVRcI

— NASA (@NASA)

2017 ರಲ್ಲಿ ತರಬೇತಿಗಾಗಿ ಆಯ್ಕೆಯಾದ ನಾಸಾ ಗಗನಯಾತ್ರಿ ಅಭ್ಯರ್ಥಿಗಳು, ಇದೀಗ ತರಬೇತಿ ಪೂರ್ಣಗೊಳಿಸಿ ಪೂರ್ಣ ಪ್ರಮಾಣದ ಗಗನಯಾತ್ರಿಗಳಾಗಿ ಹೊರಹೊಮ್ಮಿದ್ದಾರೆ.

ಈ ಮೂಲಕ ನಾಸಾ ತನ್ನ ಬತ್ತಳಿಕೆಯಲ್ಲಿ ಒಟ್ಟು 48 ಸಕ್ರಿಯ ಗಗನಯಾತ್ರಿಗಳನ್ನು ಹೊಂದಿದ್ದು, ಭವಿಷ್ಯದ ಯೋಜನೆಗಳಿಗೆ ಈ ಗಗನಯಾತ್ರಿಗಳನ್ನು ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

click me!