Facebook: ಒಂದೇ ದಿನ ಫೇಸ್‌ಬುಕ್‌ಗೆ 16 ಲಕ್ಷ ಕೋಟಿ ನಷ್ಟ

Kannadaprabha News   | Asianet News
Published : Feb 04, 2022, 04:56 AM IST
Facebook: ಒಂದೇ ದಿನ ಫೇಸ್‌ಬುಕ್‌ಗೆ 16 ಲಕ್ಷ ಕೋಟಿ ನಷ್ಟ

ಸಾರಾಂಶ

18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫೇಸ್‌ಬುಕ್‌ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಡಿಸೆಂಬರ್‌ನಲ್ಲಿ ಅಂತ್ಯ​ವಾದ 3 ತಿಂಗಳ ಅವ​ಧಿ​ಯಲ್ಲಿ ಬಳ​ಕೆ​ದಾ​ರರ ಸಂಖ್ಯೆ 192.9 ಕೋಟಿಗೆ ಕುಸಿ​ದಿದೆ.

ನ್ಯೂಯಾ​ರ್ಕ್ (ಫೆ.04): 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫೇಸ್‌ಬುಕ್‌ (Facebook) ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಡಿಸೆಂಬರ್‌ನಲ್ಲಿ ಅಂತ್ಯ​ವಾದ 3 ತಿಂಗಳ ಅವ​ಧಿ​ಯಲ್ಲಿ ಬಳ​ಕೆ​ದಾ​ರರ ಸಂಖ್ಯೆ 192.9 ಕೋಟಿಗೆ ಕುಸಿ​ದಿದ್ದು, ಈ ಹಿಂದಿನ ತ್ರೈಮಾ​ಸಿಕ ಅವ​ಧಿ​ಯಲ್ಲಿ 193 ಕೋಟಿ​ಯಷ್ಟು ಬಳ​ಕೆ​ದಾ​ರ​ರಿ​ದ್ದರು ಎಂದು ​ಫೇ​ಸ್‌​ಬುಕ್‌ ಸಂಸ್ಥೆಯ ಮಾತೃ​ಸಂಸ್ಥೆ ಮೆಟಾ ನೆಟ್‌​ವ​ರ್ಕ್ಸ್‌ (Meta Networks) ಬಹಿ​ರಂಗ​ಪ​ಡಿ​ಸಿದೆ. 

ಟಿಕ್‌​ಟಾಕ್‌ (Tiktok) ಮತ್ತು ಯೂಟ್ಯೂ​ಬ್‌​ನಿಂದ (Youtube) ಹೆಚ್ಚಿದ ಸ್ಪರ್ಧೆ​ಗ​ಳಿಂದ ಆದಾಯದಲ್ಲೂ ಕುಸಿ​ತ​ವಾ​ಗ​ಬ​ಹು​ದಾದ ಸಾಧ್ಯ​ತೆ​ಯಿದೆ. ಜತೆಗೆ ಫೇಸ್‌​ಬುಕ್‌ ಜಾಹೀ​ರಾ​ತು​ಗಳು ಕಡಿ​ಮೆ​ಯಾ​ಬ​ಗ​ಬ​ಹು​ದಾದ ಸಾಧ್ಯ​ತೆ​ಯಿದೆ ಎಂದು ಕಂಪನಿ ಎಚ್ಚ​ರಿಕೆ ನೀಡಿದೆ. ಅಲ್ಲ​ದೆ ಷೇರು​ ಮಾ​ರು​ಕ​ಟ್ಟೆ​ಯಲ್ಲಿ ಮೆಟಾ ಷೇರು​ಗಳು ಶೇ.23ರಷ್ಟು ಕುಸಿತ ಕಂಡಿದ್ದು, ಕಂಪ​ನಿಗೆ ಸುಮಾರು 16 ಲಕ್ಷ ಕೋಟಿ ರು. ನಷ್ಟ​ವಾ​ಗಿದೆ ಎಂದು ಆಂಗ್ಲ ಮಾಧ್ಯ​ಮ​ವೊಂದು ತಿಳಿ​ಸಿದೆ.

ಸುಳ್ಳು ಸುದ್ದಿ ತಡೆಯದ ಗೂಗಲ್‌, ಟ್ವೀಟರ್‌ಗೆ ಕೇಂದ್ರ ತರಾಟೆ: ‘ಭಾರತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ(Social Media) ಹಾಗೂ ಜಾಲತಾಣಗಳಲ್ಲಿ(Internet) ಹರಿದಾಡುತ್ತಿರುವ ಸುಳ್ಳು ಸುದ್ದಿಗಳು(Fake News) ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೆಟ್ಟಹೆಸರು ತರುತ್ತಿವೆ. ಆದರೆ ಇವನ್ನು ‘ನಕಲಿ ಸುದ್ದಿಗಳು’ ಎಂದು ಗುರುತಿಸಿ ತೆಗೆದುಹಾಕುವಂತೆ ಹೇಳಿದರೂ ಅದನ್ನು ಕಡೆಗಣಿಸಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರವು ಗೂಗಲ್‌, ಟ್ವೀಟರ್‌, ಫೇಸ್‌ಬುಕ್‌ ಹಾಗೂ ಇತರ ಕೆಲವು ಸಾಮಾಜಿಕ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದೆ. 

Meta Express Wi-Fi: ಫೇಸ್‌ಬುಕ್‌ ಕೈಗೆಟುಕುವ ಇಂಟರ್‌ನೆಟ್ ಸೇವೆ ಭಾರತದಲ್ಲಿ ಬಂದ್!

ಅಲ್ಲದೆ, ಸುಳ್ಳು ಸುದ್ದಿ ತಡೆಯದಿದ್ದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಸಂಬಂಧ ಸೋಮವಾರ ಈ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳ ಅಧಿಕಾರಿಗಳ ಜತೆ ವರ್ಚುವಲ್‌ ಸಭೆ ನಡೆಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ಕಂಪನಿಗಳ ನಿರ್ಲಕ್ಷ್ಯವನ್ನು ಬಲವಾಗಿ ಟೀಕಿಸಿ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ಕೂಡಲೇ ಸುಳ್ಳು ಸುದ್ದಿಗಳ ಪ್ರಸಾರವನ್ನು ತಡೆಹಿಡಿಯಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತದೆ. ಈಗಾಗಲೇ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ಇರಬೇಕಾದ ಅಂಶಗಳ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಪಾಲಿಸದೇ ಇದ್ದರೆ, ಸರಿಯಾದ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ ಎಂದು ಅವು ಹೇಳಿವೆ. ಈ ಸಭೆಯಲ್ಲಿ ಭಾರೀ ಬಿಸಿಬಿಸಿ ಚರ್ಚೆ ನಡೆಯಿತು. ಇದು ಭಾರತ ಹಾಗೂ ಪಾಶ್ಚಾತ್ಯ ಸಾಮಾಜಿಕ ಮಾಧ್ಯಮಗಳ ನಡುವಿನ ತ್ವೇಷಮಯ ಸಂದರ್ಭದ ದ್ಯೋತಕದಂತಿತ್ತು. 

Messenger Screenshot Detection: ಇನ್ಮುಂದೆ ಮೇಸೆಜ್ ಸ್ಕ್ರೀನ್‌ಶಾಟ್ ತೆಗೆದರೆ ಫೇಸ್‌ಬುಕ್ ನೋಟಿಫಿಕೇಶನ್!

ಆದರೆ ಕ್ರಮ ಕೈಗೊಳ್ಳಲು ಯಾವುದೇ ಕಾಲಮಿತಿಯನ್ನು ಸರ್ಕಾರ ವಿಧಿಸಲಿಲ್ಲ ಎಂದು ಅವು ಸ್ಪಷ್ಟಪಡಿಸಿವೆ. ಇದರ ಬೆನ್ನಲ್ಲೇ, ‘ಸುಳ್ಳು ಮಾಹಿತಿಯ ಹರಡುವಿಕೆಯನ್ನು ತಡೆಯಲು ಕ್ರಮ ತೆಗೆದುಕೊಳ್ಳುವುದಾಗಿ ಜಾಲತಾಣ ಕಂಪನಿಗಳು ತಿಳಿಸಿದವು. ಆದರೆ ಯಾವ ಅಂಶಗಳನ್ನು ತೆಗೆದು ಹಾಕಬೇಕು ಎಂಬುದನ್ನು ನೇರವಾಗಿ ನಮಗೆ ತಿಳಿಸಿ. ಸಾರ್ವಜನಿಕವಾಗಿ(Public) ಹೇಳಬೇಡಿ. ಇದರಿಂದ ಸಮಸ್ಯೆ ಸುಸೂತ್ರವಾಗಿ ಪರಿಹಾರವಾಗುತ್ತದೆ ಕೋರಿದರು’ ಎಂದು ಮೂಲಗಳು ತಿಳಿಸಿವೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ