2019ರ ಚುನಾವಣೆಗೂ ಮುನ್ನ ಕೇಂದ್ರ ಸೂಚಿಸಿದ 44 ರ ಪೈಕಿ 14 ಪೇಜ್ ಡಿಲೀಟ್ ಮಾಡಿದ ಫೇಸ್‌ಬುಕ್

By Suvarna News  |  First Published Sep 1, 2020, 3:20 PM IST

ಸಾಮಾಜಿಕ ಜಾಲತಾಣ ಬಳಸಿಕೊಳ್ಳುವುದರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಇತರ ಎಲ್ಲಾ ಪಕ್ಷಗಳಿಗಿಂಚ ಮುಂಚೂಣಿಯಲ್ಲಿದೆ ಅನ್ನೋದು ವರದಿ. ಇದೀಗ 2019ರ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರ 44 ಫೇಸ್‌ಬುಕ್ ಪೇಜ್ ಬ್ಯಾನ್ ಮಾಡಲು ಫೇಸ್‌ಬುಕ್‌ಗೆ ಸೂಚಿಸಿತ್ತು. ಇದರಲ್ಲಿ 14 ಫೇಸ್‌ಬುಕ್ ಪೇಜ್ ಕಿತ್ತೆಸೆಯುವಲ್ಲಿ ಕೇಂದ್ರ ಯಸಸ್ವಿಯಾಗಿದೆ.


ನವದೆಹಲಿ(ಸೆ.01): ಸುಳ್ಳು ಸುದ್ದಿ, ಪ್ರಚೋದನಕಾರಿ ಮಾಹಿತಿ ಹರಡುವಿಕೆ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಕೇಂದ್ರದ ಬಿಜೆಪಿ ಸರ್ಕಾರ 2019ರ ಚುನಾವಣೆಗೂ ಮುನ್ನ 44 ಫೇಸ್‌ಬುಕ್ ಪೇಜ್ ಡಿಲೀಟ್ ಮಾಡಲು ಫೇಸ್‌ಬುಕ್‌ಗೆ ಸೂಚಿಸಿತ್ತು. ಇದರಲ್ಲಿ 14 ಪೇಜ್ ಡಿಲೀಟ್ ಮಾಡಲಾಗಿದೆ. ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಮಾಧ್ಯಮ ತನ್ನ ವರದಿಯಲ್ಲಿ ಹೇಳಿದೆ.

ಮತದಾರರನ್ನು ಸೆಳೆಯಲು ಫೇಸ್‌ಬುಕ್‌ನಲ್ಲಿ ಗರಿಷ್ಠ ಜಾಹೀರಾತು ನೀಡಿದ ಪಕ್ಷಗಳ ಪಟ್ಟಿ ಬಿಡುಗಡೆ!

Latest Videos

undefined

ಭಿಮ್ ಆರ್ಮಿ ಅಧೀಕೃತ ಫೇಸ್‌ಬುಕ್ ಖಾತೆ, ವಿ ಹೇಟ್ ಬಿಜೆಪಿ ಪೇಜ್, ಟ್ರುಥ್ ಆಫ್ ಗುಜರಾತ್, ಪತ್ರಕರ್ತ ರಾವೀಶ್ ಕುಮಾರ್ ಹಾಗೂ ವಿನೋದ್  ದುವಾ ಬೆಂಬಲಿತ ಪೇಸ್‌ಬುಕ್ ಸೇರಿದಂತೆ 14 ಫೇಸ್‌ಬುಕ್ ಪೇಜ್‌ಗಳನ್ನು 2019ರ ಚುನಾವಣೆಗೂ ಮುನ್ನ ಡಿಲೀಟ್ ಮಾಡಲಾಗಿದೆ. 

ತಪ್ಪು ಮಾಹಿತಿ ಹರಡುತ್ತಿರುವ ಆರೋಪದಡಿ ಫೇಸ್‌ಬುಕ್ ಪೇಜ್ ಡಿಲೀಟ್ ಮಾಡಲಾಗಿತ್ತು. ಈ ಕುರಿತು ಫೇಸ್‌ಬುಕ್, ಬಿಜೆಪಿ. ಮಾಹಿತಿ ಮತ್ತು ತಂತ್ರಜ್ಞಾನ್ ಸೆಲ್ ಮುಖ್ಯಸ್ಥ್ ಅಮಿತ್ ಮಾಲ್ವಿಯಾಗೆ  ಈ ಕುರಿತು ಮಾಹಿತಿ ನೀಡಿತ್ತು. ಕನ್ನಡದಲ್ಲಿನ ಕೆಲ ಫೇಸ್‌ಬುಕ್ ಪೇಜ್ ಹಾಗೂ ಅಧೀಕೃತ ಸೈಟ್‌ಗಳನ್ನು ಬ್ಯಾನ್ ಮಾಡಲಾಗಿತ್ತು. ಪೋಸ್ಟ್ ಕಾರ್ಡ್ ವೆಬ್‌ಸೈಟ್‌ಗೂ ನಿರ್ಬಂಧ ವಿಧಿಸಲಾಗಿದೆ. ಇನ್ನು ಅಪಘಾತದಲ್ಲಿ ಗಾಯಗೊಂಡ ಜೈನ ಸನ್ಯಾಸಿ ಕುರಿತು ಸುಳ್ಳು ಮಾಹಿತಿ ಹರಡಿದ ಆರೋಪಡಿ ಪೋಸ್ಟ್‌ ಕಾರ್ಡ್ ಸಂಪಾದಕ ಮಹೇಶ್ ಮಕ್ರಿಮ್ ಹೆಗ್ಡೆಯನ್ನು 2018ರ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. 

ಸುಳ್ಳು ಸುದ್ದಿ, ತಪ್ಪು ಮಾಹಿತಿ, ಪ್ರಚೋದನೆ ನೀಡುವ, ಹಿಂಸಾತ್ಮಕ ವಿಷಯಗಳಿಗೆ ಫೇಸ್‌ಬುಕ್ ವೇದಿಕೆ ಒದಗಿಸುತ್ತಿದೆ  ಅನ್ನೋ ಆರೋಪದಿಂದ ಫೇಸ್‌ಬುಕ್ ತೀವ್ರ ಟೀಕೆಗೂ ಗುರಿಯಾಗಿದೆ. ಕೇಂದ್ರ ಸರ್ಕಾರ ಸೂಚಿಸಿದ 44 ಪೇಜ್‌ನಲ್ಲಿ ಬಹುತೇಕ ಪೇಜ್‌ಗಳು ಬಿಜಿಪೆ ವಿರೋಧಿ ಪೇಜ್‌ಗಳಾಗಿತ್ತು. 2019ರಲ್ಲಿ 14 ಪೇಜ್ ಡಿಲೀಟ್ ಮಾಡಿದ ಬಳಿಕ ಫೇಸ್‌ಬುಕ್ ಕಾರ್ಯನಿರ್ವಹಾಕ ಅಂಕಿ ದಾಸ್ ಹಾಗೂ ಶಿವನಾಥ್ ತುಕ್ರಲ್ ವಿವಾದಕ್ಕೆ ಗುರಿಯಾದರು. 

2019ರಲ್ಲಿ ನಡೆದ ಸಭೆಯಲ್ಲಿ ಅಮಿತ್ ಮಾಲ್ವಿಯಾ ಫೇಸ್‌ಬುಕ್ ಇಂಡಿಯಾಗೆ ಸೂಚನೆ ನೀಡಿದ್ದರು. ಬಿಜೆಪಿ ಟಾರ್ಗೆಟ್ ಮಾಡಿದ ಪೇಸ್‌ಬುಕ್ ಪೇಜ್ ಡೌನ್ ಮಾಡಲು ಸೂಚಿಸಿದ್ದರು. ವಿನಾ ಕಾರಣ ಕೇಸರಿ ಪಕ್ಷವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅನ್ನೋದು ಅವರ ನಿಲುವಾಗಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೇಸ್ ತನ್ನ ವರದಿಯಲ್ಲಿ ಹೇಳಿದೆ.

2019ರ ಚುನಾವಣೆಗೂ ಮುನ್ನ ಫೇಸ್‌ಬುಕ್ ಬಿಜೆಪಿ ಸರ್ಕಾರದ ಒತ್ಕಡಕ್ಕೆ ಮಣಿದು ತನ್ನ ನೀತಿಗಳಲ್ಲಿ ಬದಲಾವಣೆ ಮಾಡಿದೆ ಅನ್ನೋ ಆರೋಪವೂ ಫೇಸ್‌ಬುಕ್ ಇಂಡಿಯಾದ ಮೇಲಿದೆ ಎಂದು ವರದಿಯಲ್ಲಿ ಹೇಳಿದೆ.

click me!