ನವದೆಹಲಿ(ಆ.27): 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಮತದಾರರನ್ನು ಸಳೆಯಲು ಹಲವು ಕಸರತ್ತು ಮಾಡಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರದ ಗದ್ದುಗೆ ಏರಿದೆ. ಎಲ್ಲಾ ಪಕ್ಷಗಳು ಸಾಮಾಜಿಕ ಜಾಲತಾಣ, ಪ್ರಚಾರ ಸೇರಿದಂತೆ ಹಲವು ರೀತಿಯಲ್ಲಿ ಮತದಾರರನ್ನು ಸಳೆಯುವ ಪ್ರಯತ್ನ ಮಾಡಿದೆ.   ಇದೀಗ  2019 ಲೋಕಸಭಾ ಚುನಾವಣೆಯಿಂದ ಹಿಡಿದು ಇಲ್ಲೀವರೆಗೆ ರಾಜಕೀಯ ಪಕ್ಷಗಳು ಫೇಸ್‌ಬುಕ್ ಜಾಹೀರಾತಿಗೆ ಅತೀ ಹೆಚ್ಚು ಖರ್ಚು ಮಾಡಿದೆ. ಇದರಲ್ಲಿ ಗರಿಷ್ಠ ಜಾಹೀರಾತಿಗಾಗಿ ಖರ್ಚು ಮಾಡಿದ ಪಕ್ಷಗಳ ಪಟ್ಟಿಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ.

ಸೂರ್ಯ ಮಂದಿರದ ವಿಡಿಯೋ ಶೇರ್ ಮಾಡಿದ ಮೋದಿ: ಮಳೆಗಾಲದ ಸೌಂದರ್ಯಕ್ಕೆ ಎಲ್ಲರೂ ಫಿದಾ!

ಕಳೆದ 18 ತಿಂಗಳಲ್ಲಿ ಭಾರತೀಯ ಜನತಾ ಪಕ್ಷ(BJP) ಫೇಸ್‌ಬುಕ್ ಜಾಹೀರಾತಿಗೆ 4.61 ಕೋಟಿ ರೂಪಾಯಿ ವ್ಯಯಿಸಿದೆ. ಇನ್ನು ಪ್ರತಿಪಕ್ಷ ಕಾಂಗ್ರೆಸ್ 1.84 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದರಲ್ಲಿ ನನ್ನ ಮೊದಲ ಮತ ಮೋದಿಗೆ(My First Vote for Modi) ಈ ಜಾಹೀರಾತಿಗೆ 1.39 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಭಾರತ್ ಕಿ ಮನ್ ಕಿ ಬಾತ್ ಜಾಹೀರಾತಿಗಾಗಿ 2.24 ಕೋಟಿ ರೂಪಾಯಿ ಹಾಗೂ ನೇಷನ್ ವಿಥ್ ನಮೋ ಜಾಹೀರಾತಿಗಾಗಿ 1.28 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

ಅನುಪಮ್ ಹೇಳಿದ ಮೋದಿ ಮಂತ್ರಕ್ಕೆ ಮಹಾಘಟಬಂಧನ್ ಮುರಿದು ಬಿದ್ದ ಅಸಲಿ ಕತೆ

ಇದರಲ್ಲಿ ಮೈ ಫಸ್ಟ್ ವೋಟ್ ಮೋದಿ ಹಾಗೂ ಭಾರತ್ ಕಿ ಮನ್ ಕಿ ಬಾತ್ 2019ರ ಲೋಕಸಭೆಗೂ ಮುನ್ನ ಆರಂಭಿಸಿದ ಸಾಮಾಜಿಕ ಜಾಲತಾಣದ ಆಂದೋಲನಗಳು. ಇನ್ನು ನೇಷನ್ ವಿಥ್ ಮೋದಿ 2013ರಲ್ಲಿ ಆರಂಭಿಸಲಾಗಿದೆ. 

ಫೇಸ್ ಜೊತೆ ಇತರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯದ ಜಾಹೀರಾತಿಗಾಗಿ ಬಿಜೆಪಿ 10.17 ಕೋಟಿ ರೂಪಾಯಿ ಖರ್ಚು ಮಾಡಿದೆ. ಚುನಾವಣೆಗೆ ಮತದಾರರನ್ನು ಸಳೆಯಲು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತಿಗೆ ಖರ್ಚು ಮಾಡಿದ ಟಾಪ್ 10 ಪಕ್ಷಗಳ ಪಟ್ಟಿಯಲ್ಲಿ ಆಮ್ ಆದಿ ಕೂಡ ಸ್ಥಾನ ಪಡೆದಿದೆ. ಆಮ್ ಆದ್ಮಿ 69 ಲಕ್ಷ ರೂಪಾಯಿ ಖರ್ಚು ಮಾಡಿದೆ.

ಭಾರತದ ಫೇಸ್‌ಬುಕ್ ನೀಡಿದ ಜಾಹೀರಾತು ಮಾಹಿತಗಳ ಪ್ರಕಾರ 2019ರಿಂದ ಇಲ್ಲೀವೆರಗೆ ಫೇಸ್‌ಬುಕ್‌ಗೆ ಜಾಹೀರಾತು ರೂಪವಾಗಿ 59.65 ಕೋಟಿ ರೂಪಾಯಿ ಹರಿದು ಬಂದಿದೆ. ಫೇಸ್‌ಬುಕ್ ಒಡೆತನದ ಇನ್ಸ್‌ಸ್ಟಾಗ್ರಾಂ, ಆಡಿಯೆನ್ಸ್ ನೆಟವರ್ಕ್ ಹಾಗೂ ಮೆಸೆಂಜರ್ ಮೂಲಕ ಈ ಆದಾಯ ಬಂದಿದೆ.