ಆ್ಯಪಲ್ ಮ್ಯಾಪ್‌ನ ತಪ್ಪು ಮಾಹಿತಿಯಿಂದ 6.5 ಲಕ್ಷ ರೂ. ನಷ್ಟ ಅನುಭವಿಸಿದ ರೆಸ್ಟೋರೆಂಟ್!

By Suvarna NewsFirst Published Jan 25, 2024, 3:02 PM IST
Highlights

ಆ್ಯಪಲ್ ಮ್ಯಾಪ್‌ನ ತಪ್ಪಿನಿಂದಾಗಿ ರೆಸ್ಟೋರೆಂಟ್ ಮಾಲೀಕನಿಗೆ ಲಕ್ಷಗಟ್ಟಲೆ ಹಣ ನಷ್ಟವಾಗಿದೆ. ಚೆನ್ನಾಗಿಯೇ ನಡೆಯುತ್ತಿದ್ದ ರೆಸ್ಟೋರೆಂಟ್ 'ಪರ್ಮನೆಂಟಾಗಿ ಕ್ಲೋಸಾಗಿದೆ' ಎಂದು ಮ್ಯಾಪ್ ತೋರಿಸಿದ್ದೇ ಇದಕ್ಕೆ ಕಾರಣ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಸನ್‌ಶೈನ್ ಕೋಸ್ಟ್‌ನಲ್ಲಿರುವ ಪಮ್ಸ್ ಕಿಚನ್ ಎಂಬ ರೆಸ್ಟೋರೆಂಟ್ ಮಾಲೀಕ, Apple Mapನ ತಪ್ಪಿನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

ಆ್ಯಪಲ್ ಮ್ಯಾಪ್‌ನಲ್ಲಿ ಪಮ್ಸ್ ಕಿಚನ್ ಎಂದು ಕೊಟ್ಟೊಡನೆ 'ಇದು ಶಾಶ್ವತವಾಗಿ ಮುಚ್ಚಲ್ಪಟ್ಟಿದೆ' ಎಂಬ ಸಂದೇಶ ತೋರಿಸುತ್ತಿತ್ತು. ತೆರೆದಿರುವ ರೆಸ್ಟೋರೆಂಟನ್ನು ಮುಚ್ಚಿದೆ ಎಂದು ಮ್ಯಾಪ್ ತೋರಿಸಿದ್ದರಿಂದ ರೆಸ್ಟೋರೆಂಟ್ ಮಾಲೀಕನಿಗೆ ಸುಮಾರು 6.5 ಲಕ್ಷ ರುಪಾಯಿಯಷ್ಟು ನಷ್ಟವಾಗಿದೆ. 

ಮಾಲೀಕ ಕ್ರಿಸ್ ಪ್ಯಾಟ್ ಬಳಿ ಸಾಕಷ್ಟು ಜನರು ಏಕೆ ರೆಸ್ಟೋರೆಂಟ್ ಮುಚ್ಚಿದ್ದೀರೆಂದು ವಿಚಾರಿಸಿದ್ದರಿಂದ ಸಮಸ್ಯೆಯ ಬಗ್ಗೆ ಅವರಿಗೆ ಅರಿವಾಯಿತು. ನವೆಂಬರ್ ಅಂತ್ಯ ಮತ್ತು ಡಿಸೆಂಬರ್‌ನಲ್ಲಿ ಗ್ರಾಹಕರ ದಟ್ಟಣೆಯಲ್ಲಿ ಗಮನಾರ್ಹ ಕುಸಿತ ಕಂಡಿದ್ದಕ್ಕೆ ಇದೇ ಕಾರಣ ಎಂಬುದು ಅರಿವಿಗೆ ಬಂದರೂ ಮಾಲೀಕರು ಆಪಲ್ ಉತ್ಪನ್ನಗಳನ್ನು ಬಳಸದ ಕಾರಣದಿಂದ ಸವಾಲುಗಳು ಉದ್ಭವಿಸಿದವು. ತಪ್ಪನ್ನು ಸರಿಪಡಿಸುವ ಪ್ರಯತ್ನ ಕಷ್ಟವಾಯಿತು. 

ಸುಮಾರು ಒಂದು ದಶಕದ ಕಾಲ ತನ್ನ ಹೆಂಡತಿಯೊಂದಿಗೆ ಪಮ್ಸ್ ಕಿಚನ್ ಅನ್ನು ನಿರ್ವಹಿಸಿದ, ಆಪಲ್ ಉತ್ಪನ್ನಗಳನ್ನು ಬಳಸದ ಪ್ಯಾಟ್, ತಪ್ಪನ್ನು ಸರಿಪಡಿಸುವಲ್ಲಿ ಸವಾಲುಗಳನ್ನು ಎದುರಿಸಿದರು. ಆಪಲ್‌ನ ಗ್ರಾಹಕ ಸೇವೆಯನ್ನು ತಲುಪಿದರೂ, ಆಪಲ್ ತನ್ನ ಗ್ರಾಹಕರಿಗೆ ಮಾತ್ರ ಸಹಾಯವನ್ನು ಒದಗಿಸಬಹುದು ಎಂದು ಅವರಿಗೆ ತಿಳಿಸಲಾಯಿತು.

ಪ್ರತಿಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವುದು ಸೂಚಿಸಿದ ಪರಿಹಾರವಾಗಿದೆ, ಇದು ಸ್ವಯಂಚಾಲಿತ ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಮೈಕ್ರೋಸಾಫ್ಟ್ ಎಡ್ಜ್ ಬಳಸಿಕೊಂಡು ಮಾಹಿತಿಯನ್ನು ಸರಿಪಡಿಸುವ ಪ್ರಯತ್ನಗಳು ವಿಫಲವಾದ ಕಾರಣ ವರ್ಚುವಲ್ ರನ್-ಅರೌಂಡ್ ಮುಂದುವರೆಯಿತು. 

ಈ ಬಗ್ಗೆ ಮಾಧ್ಯಮಗಳು ಕಾಮೆಂಟ್‌ಗಾಗಿ Apple ಅನ್ನು ಸಂಪರ್ಕಿಸಿದ ನಂತರ ತಪ್ಪನ್ನು ಸರಿಪಡಿಸಿಕೊಂಡ ಆ್ಯಪಲ್,  ರೆಸ್ಟೋರೆಂಟನ್ನು ಶಾಶ್ವತವಾಗಿ ಮುಚ್ಚಲಾಗಿಲ್ಲ ಎಂದು ಪ್ರತಿಬಿಂಬಿಸಲು ನಕ್ಷೆಗಳ ಅಪ್ಲಿಕೇಶನ್ ಅನ್ನು ನವೀಕರಿಸಿದೆ.

ಪ್ಯಾಟ್ ಪಾಡು ತಿಳಿಯುತ್ತಿದ್ದಂತೆ ಹಲವು ವ್ಯಾಪಾರಿಗಳು ಮತ್ತಿತ್ತರು ತಮಗೂ ಆ್ಯಪಲ್ ಮ್ಯಾಪ್‌ನಿಂದ ಇಂಥ ಸಮಸ್ಯೆಯಾಗಿದ್ದನ್ನು ಹೇಳಿಕೊಳ್ಳುತ್ತಿದ್ದಾರೆ. 

ಆಪಲ್ 2012ರಲ್ಲಿ ಮೊದಲ ಬಾರಿಗೆ ಮ್ಯಾಪನ್ನು ಪ್ರಾರಂಭಿಸಿದ ನಂತರ, ಸಿಇಒ ಟಿಮ್ ಕುಕ್ ಅವರು ತಪ್ಪು ಮಾಹಿತಿ ಮತ್ತು ಭೌಗೋಳಿಕ ತಪ್ಪುಗಳಂತಹ ಕೆಲವು ನ್ಯೂನತೆಗಳಿಗಾಗಿ ಕ್ಷಮೆ ಯಾಚಿಸಿದ್ದರು.

ನಕ್ಷೆಗಳನ್ನು ಉತ್ತಮಗೊಳಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಕುಕ್ ಹೇಳಿದ್ದರು. ಆದರೆ, ಇಂದಿಗೂ ಆ್ಯಪಲ್‌ನಂಥ ದೊಡ್ಡ ಕಂಪನಿಯ ಮ್ಯಾಪ್ ಮಾಹಿತಿಯಲ್ಲಿ ತಪ್ಪಾಗುವುದು ಅಕ್ಷಮ್ಯವಾಗಿದೆ. 

click me!