Vijayapura: ಭೀಮಾತೀರದ ಡೆಡ್ಲಿ ನಕಲಿ ಎನ್‌ಕೌಂಟರ್‌ ಕೇಸ್‌: ಕೋರ್ಟ್‌ಗೆ ಹಾಜರಾದ ಬೈರಗೊಂಡ ಗ್ಯಾಂಗ್!

By Govindaraj SFirst Published Dec 30, 2023, 1:00 AM IST
Highlights

ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿದ್ದ ಹಂತಕ ಧರ್ಮರಾಜ್‌ ಚಡಚಣ ನಕಲಿ ಎನ್ಕೌಂಟರ್‌ ಹಾಗೂ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣ ಸಂಬಂಧ ಬೈರಗೊಂಡ ಗ್ಯಾಂಗ್‌ ಇಂದು ವಿಜಯಪುರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದೆ. 
 

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ (ಡಿ.30): ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿದ್ದ ಹಂತಕ ಧರ್ಮರಾಜ್‌ ಚಡಚಣ ನಕಲಿ ಎನ್ಕೌಂಟರ್‌ ಹಾಗೂ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣ ಸಂಬಂಧ ಬೈರಗೊಂಡ ಗ್ಯಾಂಗ್‌ ಇಂದು ವಿಜಯಪುರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದೆ. ಅಂದು ಪ್ರಕರಣದಲ್ಲಿ ನಕಲಿ ಎನ್ಕೌಂಟರ್‌ ಆರೋಪ ಹೊತ್ತ ಅಂದಿನ ಚಡಚಣ ಪಿಎಸ್‌ಐ ಗೋಪಾಲ್‌ ಹಳ್ಳೂರ್‌ ಹಾಗೂ ಪ್ರಕರಣ ಎ2 ಆರೋಪಿ ಹೊರತು ಪಡೆದಿ ಉಳಿದೆಲ್ಲ ಆರೋಪಿಗಳು ಕೋರ್ಟಗೆ ಹಾಜರಾಗಿ ವಿಚಾರಣೆ ಎದುರಿಸಿದ್ರು.

ಜಿಲ್ಲಾ ನ್ಯಾಯಾಲಯಕ್ಕೆ 15 ಆರೋಪಿಗಳು ಹಾಜರ್: ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ, ಅಂದಿನ ಚಡಚಣ ಸಿಪಿಐ ಮಲ್ಲಿಕಾರ್ಜುನ್‌ ಅಸೋಡೆ, ಹಣಮಂತ ಪೂಜಾರ, ಮೂವರು ಪೊಲೀಸ್‌ ಪೇದೆಗಳು ಸೇರಿದಂತೆ 15 ಆರೋಪಿಗಳು ಹಾಜರಾಗಿದ್ದರು. ಒಟ್ಟು 18 ಆರೋಪಿಗಳಿದ್ದು, ಇದ್ರಲ್ಲಿ 6 ನೇ ಆರೋಪಿ ಬಾಬು ಕಂಚನಾಳರ್‌ ಊರ್ಫ್ ಬಾಬು ಮೆಂಬರ್‌ ಮಹಾದೇವ ಬೈರಗೊಂಡನ ಮೇಲೆ ಕನ್ನಾಳ ಕ್ರಾಸ್‌ ಹೈವೇ ಯಲ್ಲಿ ನಡೆದ ಚಡಚಣ ಗ್ಯಾಂಗ್‌ ಅಟ್ಯಾಕ್‌‌ನಲ್ಲಿ ಸಾವನ್ನಪ್ಪಿದ. ಹೀಗಾಗಿ 15 ಆರೋಪಿಗಳು ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದ್ರು..

ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರದಿಂದ ನೆರವು: ಸಚಿವ ಮುನಿಯಪ್ಪ

ಈ ಪ್ರಕರಣದ ಡೆಡ್ಲಿ ಹಿನ್ನೆಲೆ ಹೇಗಿದೆ ನೋಡಿ: ಭೀಮಾತೀರದಲ್ಲಿ ನಾಲ್ಕೈದು ದಶಕಗಳಿಂದ ಚಡಚಣ ಹಾಗೂ ಬೈರಗೊಂಡ ಕುಟುಂಬಗಳ ನಡುವೆ ವೈರತ್ವ ಬೆಳೆದುಕೊಂಡು ಬಂದಿದೆ. ಇನ್ನು ಕಳೆದ 2017ರ ಅಕ್ಟೋಬರ್ 30 ರಂದು ಚಡಚಣ ಮಲ್ಲಿಕಾಜೀ ಮಕ್ಕಳಾದ ಧರ್ಮರಾಜ್‌ ಮೇಲೆ ಆಗಿನ ಚಡಚಣ ಪಿಎಸೈ ಗೋಪಾಲ್‌ ಹಳ್ಳೂರ್‌ ಶಸ್ತ್ರಾಸ್ತ್ರ ತಪಾಸಣೆ ನೆಪದಲ್ಲಿ ಹೋಗಿ ಗುಂಡು ಹಾರಿಸಿದ್ದ. ಇತ್ತ ಆತನ ಸಹೋದರ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದ. ಅಂದಿನ ಬೆಳಗಾವಿ ಐಜಿಪಿಯಾಗಿದ್ದ ಅಲೋಕ್‌ ಕುಮಾರ್‌ ಪ್ರಕರಣ ಕೈಗೆತ್ತಿಕೊಂಡ ಬಳಿಕ ಇಡೀ ಬಂಡವಾಳ ಬಯಲಾಗಿತ್ತು. ಗಂಗಾಧರ ಸಹ ಹತ್ಯೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಎರೆಡು ಪ್ರಕರಣಗಳನ್ನ ಧರ್ಮರಾಜ್‌ ನಕಲಿ ಎನ್ಕೌಂಟರ್‌ ಹಾಗೂ ಗಂಗಾಧರ ನಿಗೂಢ ಹತ್ಯೆ ಎಂದು ಪರಿಗಣಿಸಿ ಸಿಐಡಿ ಕೂಡ ತನಿಖೆ ನಡೆಸಿ ಕೋರ್ಟ್‌ ಗೆ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿತ್ತು.

ಚಡಚಣ ಗ್ಯಾಂಗ್‌ ನಿಂದ ಬೈರಗೊಂಡನ ಮೇಲೆ ರಿವೆಂಜ್‌ ಅಟ್ಯಾಕ್: ಕಳೆದ 2020 ರ ನವೆಂಬರ್‌ 2ರಂದು ಇದೆ ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ ಮೇಲೆ ಕನ್ನಾಳ ಕ್ರಾಸ್‌ ಬಳಿ ಚಡಚಣ ಗ್ಯಾಂಗ್‌ ನ ಹುಡುಗರು ಅಟ್ಯಾಕ್‌ ನಡೆಸುವ ಮೂಲಕ ಧರ್ಮರಾಜ್‌ ಚಡಚಣ, ಗಂಗಾಧರ ಚಡಚಣ ಹತ್ಯೆ ಪ್ರತಿಕಾರಕ್ಕೆ ಯತ್ನಸಿದ್ದರು. ಹೀಗಾಗಿ ಬೈರಗೊಂಡ ಕೋರ್ಟ್‌ ಗೆ ಹಾಜರಾಗುವ ವೇಳೆ ಮತ್ತೆ ಚಡಚಣ ಗ್ಯಾಂಗ್‌ ಅಟ್ಯಾಕ್‌ ಮಾಡುವ ಭೀತಿ ಬೈರಗೊಂಡನಿಗಿದ್ದು, ಈ ಹಿನ್ನೆಲೆ ಪೊಲೀಸ್‌ ಇಲಾಖೆ ಹೆಚ್ಚಿನ ಭದ್ರತೆಯನ್ನ ನೀಡಿದೆ.. ಚಡಚಣ ಸಿಪಿಐ ಬೆಂಡೆಗುಂಬಳ್, ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಒದಗಿಸಿದ್ರು

ಸಂದಾನದಲ್ಲಿ ಅಪಸ್ವರ ಬೈರಗೊಂಡನಿಗೆ ತಪ್ಪಿಲ್ಲ ಅಟ್ಯಾಕ್ ಭಯ: ಮಹಾದೇವ ಬೈರಗೊಂಡನ ಮೇಲೆ ಅಟ್ಯಾಕ್‌ ಆದ ಬಳಿಕ ಭೀಮಾತೀರದಲ್ಲಿ ಶಾಂತಿ ನೆಲೆಸಲಿ ಎಂದು ಪೊಲೀಸ್‌ ಇಲಾಖೆ. ಭೀಮಾತೀರದ ನಟೋರಿಯಸ್‌ ಗ್ಯಾಂಗ್‌ ಗಳ ನಡುವೆ ಸಂದಾನ ನಡೆಸಲು ಮುಂದಾಗಿತ್ತು. ಅದ್ರಂತೆ ಹಿಂದಿನ ಎಡಿಜಿಪಿ ಅಲೋಕ್‌ ಕುಮಾರ್ ಚಡಚಣದ ಸಾರ್ವಜನಿಕರ ಎದುರಲ್ಲೆ ಸಂಧಾನ ನಡೆಸಿದ್ದರು. ಸಂಧಾನ ಬಳಿಕವು ವಿಮಲಾಬಾಯಿ ಅಪಸ್ವರ ಎತ್ತಿದ್ದಳು. ಹೀಗಾಗಿ ಭೀಮಾತೀರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕೋರ್ಟಗೆ ಹಾಜರಾಗಲು ಬರುವಾಗ ಅಥವಾ ಹೋಗುವಾಗ ಅಟ್ಯಾಕ್‌ ಗಳು ನಡೆಯಬಹುದು ಎನ್ನುವ ಕಾರಣಕ್ಕೆ ಪೊಲೀಸ್‌ ಇಲಾಖೆ ಮುಂಜಾಗೃತೆ ಕೈಗೊಳ್ಳುತ್ತ ಬಂದಿದೆ.

ಭೀಮಾತೀರದಲ್ಲಿ ಕೋರ್ಟಗೆ ಹಾಜರಾಗುವಾಗಲೇ ನಡೆದಿದ್ದವು ಅಟ್ಯಾಕ್: ಭೀಮಾತೀರದಲ್ಲಿನ ಗ್ಯಾಂಗ್‌ ವಾರ್‌ ಗಳೂ ತೀರಾ ವಿಚಿತ್ರ. ಯಾಕಂದ್ರೆ ಇಲ್ಲಿ ಒಂದು ಗ್ಯಾಂಗ್‌ ಮತ್ತೊಂದು ಗ್ಯಾಂಗ್‌ ಮೇಲೆ ಸೇಡು ತೀರಿಸಿಕೊಳ್ಳಲು ಸಮಯಾವಕಾಶಕ್ಕಾಗಿ ಕಾಯುತ್ತಿರುತ್ತವೆ. ಅದ್ರಲ್ಲು ತಮ್ಮ ಎದುರಾಳಿ ಯಾವಾಗ ಕೋರ್ಟಗೆ ಹಾಜರಾಗ್ತಾನೆ ಅನ್ನೋದನ್ನೇ ಕಾಯ್ತಿರುತ್ತವೆ. ಕಾರಣ ಏನಂದ್ರೆ ಕೋರ್ಟಗೆ ಹಾಜರಾಗಲು ಬರುವ ಭೀಮಾತೀರದ ಹಂತಕರು ತಮ್ಮ ಜೊತೆಗೆ ಆತ್ಮರಕ್ಷಣೆಗೆ ಬಂದೂಕು ಬಿಟ್ಟು ಬಂದಿರ್ತಾರೆ, ಅದ್ರಲ್ಲು ಸಲೀಸಾಗಿ ಸಿಕ್ಕಿಬೀಳ್ತಾರೆ ಅನ್ನೋದು. 

ಹಿಂದೆ ಭೀಮಾತೀರದಲ್ಲಿ ಸಿಂದಗಿ ಕೋರ್ಟ ಆವರಣದಲ್ಲಿಯೇ ಚಂದಪ್ಪ ಹರಿಜನ್‌ ಅಮೀನ್‌ ಸಾಬ ಅವಟಿ ಮೇಲೆ ಸ್ಟನ್‌ ಗನ್‌ ನಿಂದ ಪೈರಿಂಗ್‌ ಮಾಡಿ ಕೊಂದು ಹಾಕಿದ್ದ. ಬಳಿಕ ಸಿಂದಗಿ ಕೋರ್ಟಗೆ ಹಾಜರಾಗಿ ಬರುವಾಗಲೇ ಆಲಮೇಲ ಬಳಿಕ ರಾಂಪೂರ್‌ ಕ್ರಾಸ್‌ ಬಳಿ ಹೈದ್ರಾ ಬಸ್‌ ಮೇಲೆ ಇದೆ ಚಂದಪ್ಪ ಹರಿಜನ್‌ ಗ್ಯಾಂಗ್‌ ಅಟ್ಯಾಕ್‌ ಮಾಡಿ ಮೂವರ ಹೆಣ ಕೆಡವಿತ್ತು. ತೀರಾ ಇತ್ತೀಚೆಗೆ ಅಂದ್ರೆ 2017 ಆಗಷ್ಟ 8 ರಂದು ವಿಜಯಪುರ ಕೋರ್ಟ ಆವರಣದಲ್ಲಿಯೇ ಬಾಗಪ್ಪ ಹರಿಜನ್‌ ಮೇಲೆ ಅವರ ಎದುರಾಳಿ ಗ್ಯಾಂಗ್‌ ಅಟ್ಯಾಕ್‌ ಮಾಡಿ ಗುಂಡಿನ ದಾಳಿ ನಡೆಸಿತ್ತು. ಹೀಗಾಗಿ ಭೀಮಾತೀರದಲ್ಲಿ ನಡೆದ ಹಲವು ಹತ್ಯಾಕಾಂಡಗಳು ಕೋರ್ಟಗೆ ಹಾಜರಾಗುವಾಗಲೇ ನಡೆದಿವೆ. ಇದೆ ಕಾರಣಕ್ಕೆ ಕೋರ್ಟಗಳಿಗೆ ಭೀಮಾತೀರದ ರೌಡಿಗಳು ಹಾಜರಾಗಲು ಹೊರಟರೆ ಪೊಲೀಸ್‌ ಹೈ ಅಲರ್ಟ್‌ ಆಗುತ್ತೆ..

ಕೋವಿಡ್‌ ಕುರಿತ ಸುಳ್ಳು, ವೈರಲ್ ಸುದ್ದಿ ನಂಬಬೇಡಿ: ಸಚಿವ ಶರಣಪ್ರಕಾಶ ಪಾಟೀಲ

ಹತ್ತಾರು ಐಶಾರಾಮಿ ಕಾರುಗಳಲ್ಲಿ ಬಂದ ಆರೋಪಿಗಳು: ಇನ್ನು ಇಂದು ಚಡಚಣ ಸಹೋದರರ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಮಹಾದೇವ ಬೈರಗೊಂಡ ಕೋರ್ಟ್‌ ಗೆ ಹಾಜರಾಗಲು ಬಂದಾಗ ಆತನ ಬೆನ್ನಿಗೆ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ರು. ಜೊತೆಗೆ ಪ್ರಕರಣದ 15 ಆರೋಪಿಗಳೆಲ್ಲ ಐಶಾರಾಮಿ ಕಾರುಗಳಲ್ಲೆ ಕೋರ್ಟ ಆವರಣಕ್ಕೆ ಬಂದ್ರು. ಮಹಾದೇವ ಬೈರಗೊಂಡ ಕಾರ ಎದುರಿಗೆ ಪೊಲೀಸ್‌ ವಾಹನ ಇದ್ರೆ ಹಿಂದೆ ಕಾರುಗಳಲ್ಲಿ ಆರೋಪಿಗಳು, ಬೆಂಬಲಿಗರು ಆಗಮಿಸಿದ್ದರು. ಇಡಿ ದೃಶ್ಯಾವಳಿ ಸಿನಿಮಾ ರೀತಿಯಲ್ಲಿ ಕಂಡು ಬಂದ್ವು. ಇನ್ನು ಮಹಾದೇವ ಬೈರಗೊಂಡ ಕೋರ್ಟ್‌ ಹಾಜರಾಗೋದನ್ನ ನೋಡೋದಕ್ಕಾಗಿಯೇ ಯುವಕರು ಕೋರ್ಟ್‌ ಆವರಣ ಸುತ್ತ ಸೇರಿದ್ದು ಕಂಡು ಬಂತು.

click me!