ಮರಳು ದಂಧೆಕೋರರಿಂದ ಹೆಡ್ ಕಾನಸ್ಟೇಬಲ್ ಹತ್ಯೆ ಪ್ರಕರಣ ಸಂಬಂದಪಟ್ಟಂತೆ ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ.
ಕಲಬುರಗಿ (ಜೂ.17): ಮರಳು ದಂಧೆಕೋರರಿಂದ ಹೆಡ್ ಕಾನಸ್ಟೇಬಲ್ ಹತ್ಯೆ ಪ್ರಕರಣ ಸಂಬಂದಪಟ್ಟಂತೆ ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ. ಜೇವರ್ಗಿ ಠಾಣೆ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್‌ಐ ಗೌತಮ್ ಮತ್ತು ಎಸ್‌ಬಿ ಕಾನಸ್ಟೇಬಲ್ ರಾಜಶೇಖರ ಅವರುಗಳನ್ನು ಕಲಬುರಗಿ ಎಸ್ಪಿ ಇಶಾ ಪಂತ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಪೇದೆ ಹತ್ಯೆಗೆ ಖಂಡನೆ: ಮರಳು ಮಾಫಿಯಾದವರು ಕಲಬುರ್ಗಿಯಲ್ಲಿ ಪೊಲೀಸ್ ಮುಖ್ಯ ಪೇದೆಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆಗೈದಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಶನಿವಾರ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮದ ಬಳಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ನಿಲೋಗಿ ಠಾಣೆ ಮುಖ್ಯ ಪೇದೆ ಮಯೂರ್ ಚೌವ್ಹಾಣ ಮೇಲೆ ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹತ್ತಿಸಿ ಬಲಿ ಪಡೆಯಲಾಗಿದೆ.
undefined
ಮರಳು ಮಾಫಿಯಾಗೆ ಪೇದೆ ಬಲಿ: ಮತ್ತೆ ದುಷ್ಟ ಶಕ್ತಿಗಳು ತಲೆ ಎತ್ತುತ್ತಿವೆಯೆಂದ ಆರಗ ಜ್ಞಾನೇಂದ್ರ
ಇಂತಹ ಅಮಾನವೀಯ ಘಟನೆಗಳು ಪದೆ ಪದೆ ನಡೆಯುತ್ತಿದ್ದರೂ ಪೊಲೀಸರಿಗೆ ರಕ್ಷಣೆ ನೀಡುವಲ್ಲಿ ಆಳುವ ಸರ್ಕಾರಗಳು ವಿಫಲವಾಗಿವೆ. ಮರಳು ದಂಧೆಗಳಷ್ಟೆಅಲ್ಲದ ಅಕ್ರಮವಾಗಿ ಅಕ್ಕಿ, ಗೋಸಾಗಾಣೆ ,ಗಾಂಜಾ ಸಾಗಾಟ ಕೂಡ ಎಗ್ಗಿಲ್ಲದೆ ಸಾಗುತ್ತಿದೆ. ಇಂತಹ ದಂಧೆಗಳನ್ನು ಬಯಲಿಗೆಳೆಯಲು ಹೋದ ಪೊಲೀಸರು, ಮಾಧ್ಯಮದ ವರು ಹಾಗೂ ಹೋರಾಟಗಾರರ ಮೇಲೆ ಹಲ್ಲೆ ಸರ್ವೇ ಸಾಮಾನ್ಯವಾಗಿದೆ ಎಂದರು.
ಹತ್ಯೆಗೀಡಾಗಿರುವ ಮುಖ್ಯ ಪೇದೆ ಕುಟುಂಬಕ್ಕೆ ಐವತ್ತು ಲಕ್ಷ ರು.ಗಳ ಪರಿಹಾರ ನೀಡುವುದರ ಜೊತೆ ಮನೆ ನಿರ್ಮಿಸಿ ಕುಟುಂಬದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಜಿಲ್ಲಾ ರಕ್ಷಣಾಧಿಕಾರಿ ಮೂಲಕ ಸರ್ಕಾರವನ್ನು ಒತ್ತಾಯಿಸಿದರು. ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ಯುವ ಘಟಕದ ಅಧ್ಯಕ್ಷ ನಾಗರಾಜ್ ಮುತ್ತು, ವಿದ್ಯಾರ್ಥಿ ಘಟಕದ ಮಣಿಕಂಠ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವಿಶ್ವನಾಥಮೂರ್ತಿ, ಅಖಿಲೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆ ಶಂಕೆ: ಜೋಸೆಫ್ ಹೂವರ್ ಆರೋಪ
ಏನಿದು ಘಟನೆ: ಕಲಬುರಗಿಯ ಭೀಮಾ ತೀರದ ಅಕ್ರಮ ಮರಳು ದಂಧೆ ಹೆಡ್ ಕಾನ್ಸ್‌ಟೆಬಲ್‌ವೊಬ್ಬರನ್ನು ಬಲಿ ಪಡೆದಿತ್ತು. ಅಕ್ರಮವಾಗಿ ಮರಳು ಸಾಗಣೆ ತಡೆಯಲು ಹೋದ ಹೆಡ್‌ಕಾನ್ಸ್‌ಟೆಬಲ್‌ವೊಬ್ಬರ ಮೇಲೆ ಮರಳು ತುಂಬಿದ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿತ್ತು. ಹುಲ್ಲೂರು ಗ್ರಾಮದ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ನೆಲೋಗಿ ಠಾಣೆ ಹೆಡ್ ಕಾನ್ಸ್‌ಟೆಬಲ್ ಮಯೂರ್ ಚವ್ಹಾಣ್ (51) ಮರಳು ದಂಧೆಗೆ ಬಲಿಯಾದವರು.