ಪ್ರಯಾಣಿಕರ ಬೇಡಿಕೆ ಮೇರೆಗೆ ನೈಋತ್ಯ ರೈಲ್ವೆ ವಲಯ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಕೊಟ್ಟಾಯಮ್ ನಿಲ್ದಾಣಗಳ ಮಧ್ಯೆ ಸ್ಪೇಷಲ್ ವೀಕ್ಲಿ ಎಕ್ಸ್ಪ್ರೆಸ್ ರೈಲು ಸಂಚಾರ ಪ್ರಾರಂಭಿಸಲು ನಿರ್ಧರಿಸಿದೆ.
ಹುಬ್ಬಳ್ಳಿ (ನ.28): ಪ್ರಯಾಣಿಕರ ಬೇಡಿಕೆ ಮೇರೆಗೆ ನೈಋತ್ಯ ರೈಲ್ವೆ ವಲಯ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಕೊಟ್ಟಾಯಮ್ ನಿಲ್ದಾಣಗಳ ಮಧ್ಯೆ ಸ್ಪೇಷಲ್ ವೀಕ್ಲಿ ಎಕ್ಸ್ಪ್ರೆಸ್ ರೈಲು ಸಂಚಾರ ಪ್ರಾರಂಭಿಸಲು ನಿರ್ಧರಿಸಿದೆ. ಡಿ. 2 ರಿಂದ 2024ರ ಜ. 20ರ ವರೆಗೆ ಬೆಳಗ್ಗೆ 10.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 8.15ಕ್ಕೆ ಕೊಟ್ಟಾಯಮ್ ನಿಲ್ದಾಣ ತಲುಪಲಿದೆ. ಡಿ. 3 ರಿಂದ ಜನವರಿ 21ರ ವರೆಗೆ ಬೆಳಗ್ಗೆ 11ಕ್ಕೆ ಕೊಟ್ಟಾಯಮ್ಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 9.50ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
ಟ್ರಾಫಿಕ್ ದಟ್ಟಣೆ ನಿಯಂತ್ರಣಕ್ಕೆ ಬೆಂಗಳೂರು ಸುತ್ತ 287 ಕಿ.ಮೀ ರಿಂಗ್‌ರೈಲ್ ನಿರ್ಮಾಣ, 7 ಕೋಟಿ ರೂ ಮಂಜೂರು
ಮತ್ತೊಂದು ರೈಲು ಡಿ. 5 ರಿಂದ 2024ರ ಜನವರಿ 16ರವರೆಗೆ ಬೆಳಗ್ಗೆ 11 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗ್ಗೆ 8.15ಕ್ಕೆ ಕೊಟ್ಟಾಯಮ್ ನಿಲ್ದಾಣ ತಲುಪಲಿದೆ. ಈ ರೈಲು ಡಿ. 6 ರಿಂದ 2024ರ ಜನವರಿ 17ರ ವರೆಗೆ ಬೆಳಗ್ಗೆ 11 ಗಂಟೆಗೆ ಕೊಟ್ಟಾಯಮ್ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗ್ಗೆ 9.50ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. ರೈಲು ದಾವಣಗೆರೆ, ತುಮಕೂರು, ಸಂವಿತ್ ಬೆಂಗಳೂರು, ವಿಟ್‌ಫೀಲ್ಡ್, ಸೇಲಂ, ಪಾಲಕ್ಕಾಡ್ ಮತ್ತು ಎರ್ನಾಕುಲಂ ಮೂಲಕ ಹಾದು ಹೋಗಲಿದೆ.
ವಿಶ್ವದರ್ಜೆಯ ಯಶವಂತಪುರ ರೈಲು ನಿಲ್ದಾಣ ಪುನರಾಭಿವೃದ್ಧಿ
ಬೆಂಗಳೂರಿ ಯಶವಂತಪುರ ರೈಲುನಿಲ್ದಾಣವನ್ನು ₹ 377 ಕೋಟಿ ಮೊತ್ತದಲ್ಲಿ ನವೀಕರಣ ಮಾಡಲಾಗುತ್ತಿದ್ದು, ವಿಶ್ವದರ್ಜೆಯ ನಿಲ್ದಾಣವನ್ನಾಗಿ ರೂಪಿಸಲಾಗುವುದು ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
24 ನೇ ವಯಸ್ಸಿನಲ್ಲಿ ಟಿವಿ ಕಂಪನಿ ಸಿಇಒ ಆಗಿ, ಶೂನ್ಯದಿಂದ 1000 ಕೋಟಿ ಕಂಪನಿ ಕಟ್ಟಿ ಶ್ರೀಮಂತೆಯಾದ ಸುಂದರಿ!
ಸೋಮವಾರ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಮುಂಬರುವ 20-30 ವರ್ಷಗಳಲ್ಲಿ ಈ ನಿಲ್ದಾಣವು ಭಾರೀ ಜನಸಂದಣಿ ಮತ್ತು ರೈಲು ಪ್ರಯಾಣಕ್ಕೆ ನೆರವಾಗಲಿದೆ. ಕರ್ನಾಟಕಕ್ಕೆ ಇನ್ನೂ ಹಲವು ವಂದೇ ಭಾರತ್ ರೈಲುಗಳು ಸಿಗಲಿದೆ ಎಂದು ಹೇಳಿದರು.
ಯಶವಂತಪುರ ರೈಲು ನಿಲ್ದಾಣ ಮೇಲ್ಛಾವಣಿ ಪ್ಲಾಜಾವನ್ನು ಹೊಂದಿದ್ದು, ಆಕರ್ಷಣೀಯವಾಗಿ ಇರಲಿದೆ. ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿರುವ ಇದು ಬೆಂಗಳೂರು (ನಗರ ನಿಲ್ದಾಣ), ಹಾಸನ, ತುಮಕೂರು, ಮತ್ತು ಹುಬ್ಬಳ್ಳಿ-ಧಾರವಾಡ ಮತ್ತು ದೆಹಲಿಯಿಂದ ಬರುವ ರೈಲು ಸಂಚಾರವನ್ನು ಒದಗಿಸಲಿದೆ ಎಂದರು.