ಸೌಜನ್ಯ ಹತ್ಯೆ ಪ್ರಕರಣ; ನ್ಯಾಯಕ್ಕಾಗಿ ಸುಳ್ಯದಲ್ಲಿಂದು ಬೃಹತ್‌ ಹೋರಾಟ!

By Ravi Janekal  |  First Published Aug 8, 2023, 9:05 AM IST

ಸುಳ್ಯ (ಆ.8): ಸೌಜನ್ಯ ಕೇಸ್ ನಲ್ಲಿ ಧರ್ಮಸ್ಥಳದ ಶಕ್ತಿ ಪ್ರದರ್ಶನದ ಬೆನ್ನಲ್ಲೇ ಮತ್ತೊಂದು ಬೃಹತ್ ಹೋರಾಟಕ್ಕೆ ಸುಳ್ಯ ಸಾಕ್ಷಿಯಾಗಲಿದೆ.  ನ್ಯಾಯಕ್ಕಾಗಿ ಇಂದು ಬೃಹತ್‌ ಜಾಥಾ ಹಮ್ಮಿಕೊಳ್ಳಲಾಗಿದೆ. ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ಹೋರಾಟ ನಡೆಸಲು ಮುಂದಾಗಿರುವ ಹಲವು ಸಂಘಟನೆಗಳು. 


ಸುಳ್ಯ (ಆ.8): ಸೌಜನ್ಯ ಕೇಸ್ ನಲ್ಲಿ ಧರ್ಮಸ್ಥಳದ ಶಕ್ತಿ ಪ್ರದರ್ಶನದ ಬೆನ್ನಲ್ಲೇ ಮತ್ತೊಂದು ಬೃಹತ್ ಹೋರಾಟಕ್ಕೆ ಸುಳ್ಯ ಸಾಕ್ಷಿಯಾಗಲಿದೆ.   ನ್ಯಾಯಕ್ಕಾಗಿ ಇಂದು ಬೃಹತ್‌ ಜಾಥಾ ಹಮ್ಮಿಕೊಳ್ಳಲಾಗಿದೆ. ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ಹೋರಾಟ ನಡೆಸಲು ಮುಂದಾಗಿರುವ ಹಲವು ಸಂಘಟನೆಗಳು. ಇಂದಿನ ಪ್ರತಿಭಟನೆ ಮೂಲಕ ರಾಜ್ಯಾದ್ಯಂತ ಹೋರಾಟದ ಕಿಚ್ಚು ಹಚ್ಚಲು ನಿರ್ಧರಿಸಿರುವ ಸಂಘಟನೆಗಳು

ನಿಂತಿಕಲ್ಲಿನಿಂದ ಸುಳ್ಯದವರೆಗೆ ಸುಮಾರು 22 ಕಿ.ಮೀವರೆಗೆ ಕಾಲ್ನಡಿಗೆ, ಬೃಹತ್ ವಾಹನ ಜಾಥವಾಹನ ಜಾಥದ ಮೂಲಕ ಹೋರಾಟ. ಬಳಿಕ ಸುಳ್ಯದ ಪೈಚಾರಿನಿಂದ ಕಾಲ್ನಡಿಗೆ ಮೂಲಕ ಸಾಗಿ ಸುಳ್ಯದಲ್ಲಿ ಬೃಹತ್ ಸಭೆ ನಡೆಯಲಿದೆ. ಸೌಜನ್ಯ ತಾಯಿ ಕುಸುಮಾವತಿ(soujanya's mother kusumavati), ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಭಾಗಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ. ಇಂದಿನ ಬೃಹತ್ ಜಾಥಾದಲ್ಲಿ ಪಕ್ಷ, ಜಾತಿ, ಧರ್ಮ ಮರೆತು ಹೋರಾಟ ನಡೆಸಲಾಗುತ್ತಿದೆ. ಸುಳ್ಯದ ಗೌಡರ ಸಂಘ ಸೇರಿ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದಾರೆ.

Tap to resize

Latest Videos

ಜಸ್ಟೀಸ್‌ ಫಾರ್‌ ಸೌಜನ್ಯಾ ಕೇಸಿಗೆ ಮಣಿಯುತ್ತಾ ಸರ್ಕಾರ.! ನಾಲ್ವರ ವಿರುದ್ಧ ಮರು ತನಿಖೆ ನಡೆಯುತ್ತಾ.?

ಸೌಜನ್ಯಳ ಹತ್ಯೆ (Soujanya murder case)ನಡೆದು 11 ವರ್ಷ ಆದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಆಕೆಯ ಹತ್ಯೆಯ ನೈಜ ಆರೋಪಿಯ ಬಂಧನ ಆಗಬೇಕು ಎಂದು ಇಂದು ಹೋರಾಟ. ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಬೆಳ್ತಂಗಡಿ ತಾಲೂಕು ದಾಟಿ ಸುಳ್ಯಕ್ಕೂ ಹಬ್ಬಿದ ಸೌಜನ್ಯ ಪರ ಕಿಚ್ಚು. 

ಇತ್ತೀಚೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪರ ನಡೆದಿದ್ದ ಬೃಹತ್ ಸಮಾವೇಶ ನಡೆಸಲಾಗಿತ್ತು. ಸಮಾವೇಶದಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿತ್ತು. ಈ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಹೆಗ್ಗಡೆ ಪರ ಪ್ರತಿಭಟನೆ ಬೆನ್ನಲ್ಲೇ ಸುಳ್ಯದಲ್ಲಿ ಸೌಜನ್ಯ ನ್ಯಾಯಕ್ಕೆ ಬೃಹತ್ ಹೋರಾಟ ನಡೆಸಲಾಗುತ್ತಿದೆ. ಸೌಜನ್ಯಳ ಪರ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ ಯಾವ ಸ್ವರೂಪ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕು. 

ಧರ್ಮಸ್ಥಳ ಭಕ್ತರ ಪ್ರತಿಭಟನೆ ವೇಳೆ ಸೌಜನ್ಯ ಪೋಷಕರ ಮೇಲೆ ಹಲ್ಲೆ ಯತ್ನ; ದೂರು

click me!