ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಮುಸ್ಲಿಂ ಸಂಘಟನೆಗಳಿಂದ ಮೌನ ಪ್ರತಿಭಟನೆ

By Ravi Janekal  |  First Published Nov 17, 2023, 2:51 PM IST

ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಾಳಿ, ಗಾಜಾದಲ್ಲಿ ಮಕ್ಕಳ ಹತ್ಯೆ ಖಂಡಿಸಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣ ಎಸಿ ಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸಲಾಯಿತು.


ಉತ್ತರ ಕನ್ನಡ (ನ.17): ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಾಳಿ, ಗಾಜಾದಲ್ಲಿ ಮಕ್ಕಳ ಹತ್ಯೆ ಖಂಡಿಸಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣ ಎಸಿ ಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸಲಾಯಿತು.

ವಿವಿಧ ಘೋಷಣೆಗಳ ನಾಮಫಲಕ ಹಿಡಿದು ಎಸಿ ಕಚೇರಿ ಎಸಿ ಕಚೇರಿಯೆದುರು ಜಮಾಯಿಸಿದ ಮುಸ್ಲಿಮರು. ಭಾರತದ ಧ್ವಜದೊಂದಿಗೆ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿ ಬೆಂಬಲ ವ್ಯಕ್ತಪಡಿಸಿದರು. ಇಸ್ರೇಲ್ ವಿರುದ್ಧದ ಮೌನ ಪ್ರತಿಭಟನೆಯಲ್ಲಿ ಐನೂರಕ್ಕೂ ಅಧಿಕ ಮುಸ್ಲಿಮರು ಭಾಗಿಯಾದರು. 

Latest Videos

undefined

16 ವರ್ಷಗಳ ಬಳಿಕ ಹಮಾಸ್ ಗಾಜಾ ಪಟ್ಟಿಯ ನಿಯಂತ್ರಣ ಕಳೆದುಕೊಂಡಿದೆ: ಇಸ್ರೇಲ್‌ ರಕ್ಷಣಾ ಸಚಿವ

ಈ ವೇಳೆ ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತ ಸರ್ಕಾರದ ನಿಲುವಿಗೆ ಭಟ್ಕಳ ಮುಸ್ಲಿಮರ ಬೆಂಬಲ ಸೂಚಿಸಿದರು. ಗಾಜಾದಲ್ಲಿನ ನರಮೇಧ ನಿಲ್ಲಿಸುವಂತೆ ಮೌನ‌ ಪ್ರತಿಭಟನೆ ಮೂಲಕ ಆಗ್ರಹಿಸಿದರು. ಇದರ ಜೊತೆಗೆ ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವಂತೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮುಸ್ಲಿಂ ಮುಖಂಡರು ಮನವಿ ಸಲ್ಲಿಸಿದರು.

ಇಸ್ರೇಲ್ ಮೇಲೆ ರಾತ್ರೋರಾತ್ರಿ ದಾಳಿ ನಡೆಸಿದ್ದ ಹಮಾಸ್ ಉಗ್ರರು. ಸುಮಾರು ಐದು ಸಾವಿರಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿ ಅಪಾರ ಸಾವು ನೋವಿಗೆ ಕಾರಣರಾಗಿದ್ದರು. ಇದಕ್ಕೆ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಸಾವಿರಾರು ನಾಗರಿಕರು ಮಕ್ಕಳು ದುರ್ಮರಣಕ್ಕೀಡಾಗುತ್ತಿದ್ದಾರೆ. ಯುದ್ಧ ನಿಲ್ಲಿಸುವಂತೆ ವಿಶ್ವಸಂಸ್ಥೆ ಸೂಚನೆ ನೀಡಿದ್ದರೂ. ಇಸ್ರೇಲ್ ಮಾತ್ರ ಒಪ್ಪುತ್ತಿಲ್ಲ. ಒಂದು ವೇಳೆ ಯುದ್ಧ ವಿರಾಮ ಘೋಷಿಸಿದರೆ ಇದು ಉಗ್ರರಿಗೆ ಮರುಸಂಘಟನೆ ಮಾಡಲು ಅವಕಾಶ ಕೊಟ್ಟಂತಾಗುತ್ತದೆ ಹೀಗಾಗಿ ಹಮಾಸ್ ಉಗ್ರರ ಮಟ್ಟಹಾಕುವವರೆಗೆ ಯಾವುದೇ ಕಾರಣಕ್ಕೂ ಯುದ್ಧ ನಿಲ್ಲಿಸುವುದಿಲ್ಲ ಎನ್ನುತ್ತಿರುವ ಇಸ್ರೇಲ್.

 

ಫೌದಾ ವೆಬ್ ಸೀರಿಸ್ ನಟ ಗಾಜಾದಲ್ಲಿ ಹತ್ಯೆ: 80 ಒತ್ತೆಯಾಳುಗಳ ಬಿಡುಗಡೆಗೆ ಡೀಲ್ ಇಸ್ರೇಲ್ ಹಮಾಸ್ ಡೀಲ್

click me!