ಬೆಂಗಳೂರು: ಎರಡು ದಿನಗಳ Science In Action - ವಿಜ್ಞಾನೋತ್ಸವಕ್ಕೆ ಚಾಲನೆ!

Published : Oct 01, 2023, 01:32 PM IST
ಬೆಂಗಳೂರು: ಎರಡು ದಿನಗಳ Science In Action - ವಿಜ್ಞಾನೋತ್ಸವಕ್ಕೆ ಚಾಲನೆ!

ಸಾರಾಂಶ

ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರ್ ಲಾಲ್ ನೆಹರು ತಾರಾಲಯ ಸಹಯೋಗದಡಿ ಜಯನಗರ ನ್ಯಾಷನಲ್ ಕಾಲೇಜು ಆವರಣದಲ್ಲಿ ಎರಡು ದಿನಗಳ  [ಶನಿವಾರ ಮತ್ತು ಭಾನುವಾರ]  “ಸೈನ್ಸ್ ಇನ್ ಆಕ್ಷನ್” ಹೆಸರಿನಡಿ ಬೃಹತ್ ವಿಜ್ಞಾನೋತ್ಸವಕ್ಕೆ NAL ವಿಜ್ಞಾನಿ ಡಾ.ವಿ. ಶುಭ ಚಾಲನೆ ನೀಡಿದ್ದಾರೆ..

ವರದಿ: ವಿದ್ಯಾಶ್ರೀ ಏಷ್ಯಾನೆಟ್ ಸುವರ್ಣನ್ಯೂಸ್ ಬೆಂಗಳೂರು

ಬೆಂಗಳೂರು (ಅ.1): ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರ್ ಲಾಲ್ ನೆಹರು ತಾರಾಲಯ ಸಹಯೋಗದಡಿ ಜಯನಗರ ನ್ಯಾಷನಲ್ ಕಾಲೇಜು ಆವರಣದಲ್ಲಿ ಎರಡು ದಿನಗಳ  [ಶನಿವಾರ ಮತ್ತು ಭಾನುವಾರ]  “ಸೈನ್ಸ್ ಇನ್ ಆಕ್ಷನ್” ಹೆಸರಿನಡಿ ಬೃಹತ್ ವಿಜ್ಞಾನೋತ್ಸವಕ್ಕೆ NAL ವಿಜ್ಞಾನಿ ಡಾ.ವಿ. ಶುಭ ಚಾಲನೆ ನೀಡಿದ್ದಾರೆ..

ನ್ಯಾಷನಲ್ ಕಾಲೇಜಿನಲ್ಲಿ 1968 ರಿಂದ 1972 ರ ವರೆಗೆ ಬಿಎಸ್ಸಿ ಫಿಸಿಕ್ಸ್ ನಲ್ಲಿ ಅಧ್ಯಯನ ಮಾಡಿ ಸ್ವರ್ಣಪದಕ ಗಳಿಸಿದ ವಿದ್ಯಾರ್ಥಿಯೂ ಆಗಿರುವ ಅವರು NAL ನಲ್ಲಿ ಫೆಲೋಶಿಪ್ ಪಡೆದು ಪ್ರತಿಷ್ಠಿತ ವಿಜ್ಞಾನಿಯಾಗಿದ್ದಾರೆ.

ವಿಜ್ಞಾನುತ್ಸಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ತರಗತಿಗಳಲ್ಲಿ ವಿಜ್ಞಾನ ಕಲಿಕೆಗೂ, ಪ್ರಾಯೋಗಿಕ ಕಲಿಕೆಗೂ ವ್ಯತ್ಯಾಸವಿದೆ. ಇಂತಹ ಉತ್ಸವಗಳು ವಿಜ್ಞಾನದೆಡೆಗೆ ಅತೀವ ಆಸಕ್ತಿ ಮೂಡಿಸುತ್ತವೆ. ಶಾಲಾ ಕಾಲೇಜುಗಳಲ್ಲಿ ಇಂತಹ ಉತ್ಸವ ಆಚರಿಸಬೇಕು  ಎಂದರು.

ಇಸ್ರೋ ವಿಜ್ಞಾನಿಗಳ ಸಾಧನೆ: ನೆಹರು ತಾರಾಲಯದಲ್ಲಿ ಹರ್ಷೋದ್ಘಾರ

 (The National Education society of Karnataka (R)) ದ ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಫ್‌ ಕರ್ನಾಟಕ ದ ಕಾರ್ಯದರ್ಶಿ ವೆಂಕಟಶಿವಾರೆಡ್ಡಿ ಮಾತನಾಡಿ, ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣಕ್ಕೆ ಮೀಸಲಾದ ಕ್ರಿಯಾತ್ಮಕ ಮತ್ತು ಸಂವಾದಾತ್ಮಕ ಸಂಸ್ಥೆಯಾಗಿದೆ. ಇಲ್ಲಿ ವಸ್ತು ಸಂಗ್ರಹಾಲಯ, ಡಿ.ಐ.ವೈ ಪ್ರಯೋಗಾಲಯವಿದ್ದು, ಇದು ಕಲಿಕೆ ಮತ್ತು ಮನೋರಂಜನೆಯ ಕೇಂದ್ರವಾಗಿದೆ. ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಇದರ ಉದ್ದೇಶ ಎಂದರು..

ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ಭಾರತಿ ರಾವ್ ಮಾತನಾಡಿ, ಇಸ್ರೋ, ಇನೋವೇಷನ್ ಅಂಡ್ ಸೈನ್ಸ್ ಪ್ರಮೋಷನ್ ಫೌಂಡೇಷನ್, ಪರಂ ಇನ್ನೋವೇಷನ್ ಸೈನ್ಸ್ ಎಕ್ಸ್ ಪೀರಿಯನ್ಸ್ ಸೆಂಟರ್, ಕರ್ನಾಟಕ ವಿಜ್ಞಾನ, ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆಗಳು ಸಹಭಾಗಿತ್ವವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

ಗ್ರಹಣ ವೀಕ್ಷಿಸಬೇಕೆಂದಿದ್ದವರಿಗೆ ನಿರಾಸೆ; ನೆಹರು ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶವಿಲ್ಲ..!

ಬೃಹತ್ ವಿಜ್ಞಾನೋತ್ಸವದಲ್ಲಿ 8,000 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ  ನಿರೀಕ್ಷೆಯಿದೆ. ಮಾನವ ಆಕೃತಿಯ ರೋಬೋಟ್ ಗಳು, ವಿಜ್ಞಾನದ ಮೂಲ ಸೂತ್ರಗಳ ಆಧಾರಿತ ಮಾದರಿಗಳು, ಚಂದ್ರಯಾನ -3 ರ ವಾಸ್ತವಿಕ ಮಾದರಿಗಳು, ಸಂಗೀತ, ರಾತ್ರಿ ವೇಳೆಯಲ್ಲಿ ಬಾಹ್ಯಾಕಾಶ ವೀಕ್ಷಣೆ ಸೇರಿದಂತೆ ಹಲವಾರು ಆಕರ್ಷಣೆಗಳಿವೆ ಎಂದು ಪ್ರೊಫೆಸರ್ ಭಾರತಿ ರಾವ್ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ