ಅವಮಾನದಿಂದ ಕರ್ನಾಟಕದ ಮೊದಲ ಟ್ರಾನ್ಸ್‌ಜೆಂಟರ್‌ ಆಟೋ ಚಾಲಕಿಯಾಗಿ ಬೆಳೆದ ಕಾವೇರಿಯ ಸ್ಫೂರ್ತಿದಾಯಕ ಕಥೆ

By Gowthami KFirst Published Oct 19, 2024, 5:46 PM IST
Highlights

ಸಾಮಾಜಿಕ ತಾರತಮ್ಯ, ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಕರ್ನಾಟಕದ ಮೊದಲ ಟ್ರಾನ್ಸ್‌ಜೆಂಡರ್‌ ಆಟೋ ಚಾಲಕಿಯಾಗಿ ಕಾವೇರಿ ಸ್ವಂತ ದುಡಿಮೆಯಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಲೈಂಗಿಕ ಕಾರ್ಯಕರ್ತೆಯಾಗಿ ದುಡಿದ ಅನುಭವ ಹೊಂದಿರುವ ಕಾವೇರಿ ಇಂದು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.

ಅನೇಕರು ತಮ್ಮ ಜೀವನದಲ್ಲಿ ಹಲವಾರು ಅವಮಾನಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸುತ್ತಾರೆ ಆದರೆ ಇಲ್ಲೊಬ್ಬ ತೃತೀಯ ಲಿಂಗಿ ಸಮಾಜದಲ್ಲಿ ಹಲವು ಅವಮಾನಗಳನ್ನು ಎದುರಿಸಿ ಕೊನೆಗೆ ಸ್ವಂತ ದುಡಿಮೆಯಿಂದ ಇಂದು ಉತ್ತಮ ಬದುಕು ಕಟ್ಟಿಕೊಂಡು ಇಂದು ಕರ್ನಾಟಕದ ಮೊದಲ ಟ್ರಾನ್ಸ್‌ಜೆಂಡರ್‌ ಆಟೋ ಡ್ರೈವರ್‌ ಆಗಿ ಆಟೋ ರಿಕ್ಷಾವನ್ನು ಓಡಿಸುತ್ತಿದ್ದಾರೆ.

ಉಡುಪಿಯಲ್ಲಿ ಜನಿಸಿದ ಕಾವೇರಿ ಮೇರಿ ಡಿಸೋಜಾ ಸಾಮಾಜಿಕ ತಾರತಮ್ಯವನ್ನು ಎದುರಿಸುವುದರಿಂದ ಹಿಡಿದು  ಅನೇಕ ಸವಾಲುಗಳನ್ನು ಎದುರಿಸಿದರು.  ಗಾರ್ಮೆಂಟ್ ಉದ್ಯಮದಲ್ಲಿ ಹಲವಾರು ಕೆಲಸಗಳನ್ನು ಮಾಡಿದರು.  ಬದುಕಲು ಸಿಗ್ನಲ್‌ಗಳಲ್ಲಿ ಚುರ್ಮುರಿಗಳನ್ನು ಮಾರಾಟ ಮಾಡಿದರು.

Latest Videos

ಇಂದು ಕರ್ನಾಟಕದ ಮೊದಲ ಟ್ರಾನ್ಸ್‌ಜೆಂಡರ್‌ ಆಟೋ ಡ್ರೈವರ್‌ ಆಗಿ  ಆಟೋ ರಿಕ್ಷಾವನ್ನು ಓಡಿಸುತ್ತಿದ್ದಾರೆ, ಉಡುಪಿಯ ಪೇತ್ರಿಯಲ್ಲಿ ಸ್ಟ್ಯಾನಿ ಡಿಸೋಜಾ ಎಂಬ ಹೆಸರಿನಿಂದ ಜನಿಸಿದ ಕಾವೇರಿ, ಹುಡುಗನಾಗಿದ್ದಾಗ ಬಡತನದಲ್ಲಿ ಬೆಳೆದರು. ತನ್ನ ದೇಹದಲ್ಲಿ ಆಗಿರುವ ಬದಲಾವಣೆಗಳನ್ನು ಅರಿತು ಮಹಿಳೆಯಾಗಿ ಬದಲಾಗಲು ಬಯಸಿದರು. ಹೀಗಾಗಿ 10ನೇ ತರಗತಿ ಓದುತ್ತಿರುವಾಗಲೇ ಕೈಯಲ್ಲಿ ಕೇವಲ 20 ರೂಪಾಯಿಯೊಂದಿಗೆ ಮನೆ ಬಿಟ್ಟು ಮೂರು ತಿಂಗಳು ಸುರತ್ಕಲ್‌ನ ಹೋಟೆಲ್‌ಗಳಲ್ಲಿ ಕೆಲಸ ಮಾಡಲು ಆರಂಭಿಸಿದರು.

ಉಗಾಂಡದಲ್ಲಿ ಮಗಳ ಬಂಧನ, ಅಸಾಹಾಯಕರಾದ ಭಾರತೀಯ ಬಿಲಿಯನೇರ್ ಉದ್ಯಮಿ!

ಕಾವೇರಿ ಅಲಿಯಾಸ್ ಸ್ಟಾನಿ ತನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಯಾರೂ ಇಲ್ಲದ ಕಾರಣ ಹೋಟೆಲ್ ಕೆಲಸ ಬಿಟ್ಟು ಮೈಸೂರಿಗೆ ಹೋದರು. ಬಸ್ ನಿಲ್ದಾಣದಲ್ಲಿ ತಂಗಿದರು. ದೇವಸ್ಥಾನಗಳಲ್ಲಿ , ವಿವಾಹದಲ್ಲಿ ಸಮಾರಂಭದಲ್ಲಿ ಬಡಿಸಿದ ಆಹಾರವನ್ನು ತಿನ್ನುತ್ತಿದ್ದರು.  ಸುಮಾರು ಮೂರು ತಿಂಗಳ ಕಾಲ ಜೀವನ ಹೀಗೆ ನಡೆಯಿತು.  ಒಂದು ದಿನ ಬಸ್ ನಿಲ್ದಾಣದ ಬಳಿ ತನ್ನ ಸಮುದಾಯದ ಜನರನ್ನು ನೋಡಿ ಅಲ್ಲಿಂದ   'ಗೆಳೆಯ' ಎಂಬ ಎನ್‌ಜಿಒ ಗುಂಪಿನ ಸಂಪರ್ಕ ಪಡೆದುಕೊಂಡರು.

ಅಲ್ಲಿಂದ ಎನ್‌ಜಿಒ ಕಚೇರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಟ್ರಾನ್ಸ್ ಕಮ್ಯುನಿಟಿ ಜನರ ಎನ್‌ಜಿಒ ಆಗಿದ್ದರಿಂದ ಬೆಂಗಳೂರಿನಿಂದ  ಅನೇಕರು ಭೇಟಿ ಕೊಡುತ್ತಿದ್ದರು. ಆ ಟ್ರಾನ್ಸ್‌ಜೆಂಡರ್‌ಗಳನ್ನು ನೋಡಿದಾಗ ಅವರು ನನ್ನ ಸಮುದಾಯದ ಜನರು ಎಂದು ನಂಬಲಿಲ್ಲ. ಯಾಕೆಂದರೆ ಹುಟ್ಟಿನಿಂದಲೇ ಮಹಿಳೆಯರು ಎಂದು ಕಾವೇರಿ ಭಾವಿಸಿದ್ದರಂತೆ. ಅಷ್ಟೊಂದು ಸುಂದರವಾಗಿರುತ್ತಿದ್ದರಂತೆ. ಅವರನ್ನು ನೋಡಿದ ಬಳಿಕ ಕಾವೇರಿಗೂ ಅವರಂತೆ ಆಗಬೇಕೆಂದು ನಿರ್ಧರಿಸಿ ಬೆಂಗಳೂರಿಗೆ ಹೋದರು.

ಈ ರೂಪಾಂತರದ ನಂತರ ಸ್ವಂತ ವೃತ್ತಿಗೆ ಬರಲಿಲ್ಲ. ಇತರ ಟ್ರಾನ್ಸ್‌ಜೆಂಡರ್‌ಗಳಂತೆ ಲೈಂಗಿಕ ಕಾರ್ಯಕರ್ತೆ ಮತ್ತು ಭಿಕ್ಷುಕಿಯಾಗಿ ಕೆಲಸ ಮಾಡಿದರು. ಬೇರೆ ದಾರಿಯಿಲ್ಲದ ಕಾರಣ ನಾನು ಲೈಂಗಿಕ ಕಾರ್ಯಕರ್ತೆ ಮತ್ತು ಭಿಕ್ಷುಕನಾದೆ ಎಂದು ಅವರು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಅನೇಕ ವರ್ಷಗಳ ನಂತರ ಪರಿವರ್ತನೆ ಕಂಡುಕೊಂಡ ಅವರು ತನ್ನ ಸ್ವಂತ ಸಮುದಾಯದವರ ವಿರುದ್ಧ ಧ್ವನಿ ಎತ್ತಿ ಅಲ್ಲಿಂದ ಹೊರಬಂದರು.

ಚಾಣಕ್ಯ ನೀತಿ: ಮಕ್ಕಳಿಗೆ ಈ 10 ವಿಷಯ ಕಲಿಸಿದ್ರೆ ಜೀವನದಲ್ಲಿ ಎಂದಿಗೂ ಸೋಲಲಾರರು

ಅಲ್ಲಿಂದ ಹೊರಬಂದ ನಂತರ ಎನ್‌ಜಿಒ ಒಂದರಲ್ಲಿ ಕೆಲಸ ಮಾಡಿದ ಬಳಿಕ ಸಂಸದೆ ಬಿ ಜಯಶ್ರೀ ಅವರ ಕಚೇರಿಯಲ್ಲಿ ಕೆಲಸ ಮಾಡಿದರು. ಅಲ್ಲಿ ಟಿಬಿ ಬಂದು ಅನಿವಾರ್ಯವಾಗಿ ಊರಿಗೆ ಮರಳಿದರು. ಚೇತರಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವ ವೇಳೆಗೆ ಆ ಕೆಲಸದ ಜಾಗದಲ್ಲಿ ಬೇರೆಯವರಿದ್ದರು. ಟಿಬಿ ಅಟ್ಯಾಕ್ ಆದಾಗ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಸಂಬಂಧಿಕರು ಸೇರಿದಂತೆ ಅವರ ಸಮುದಾಯದ ಸದಸ್ಯರು ಕೂಡ ಸಹಾಯಕ್ಕೆ ಬರದೆ ದೂರವಾಗಿದ್ದರು. ಆಗ ಜೊತೆಗಿದ್ದದ್ದು ತಂದೆ ತಾಯಿ ಮಾತ್ರ. ಬೆಂಗಳೂರಿಗೆ ಮರಳಿ ಬಂದ ನಾಲ್ಕು ತಿಂಗಳಲ್ಲಿ ತಾಯಿಯನ್ನು ಕಳೆದುಕೊಂಡರು. 

ಇದಾಗಿ ಮರಳಿ ಊರಿಗೆ ಬಂದು ಬ್ರಹ್ಮಾವರದ ಕೊಳಂಬೆ ಬಳಿ ಸಾಮಾನ್ಯ ಅಂಗಡಿ ತೆರೆದರು. ಆದರೆ 15 ದಿನಗಳ ನಂತರ  ಸಾಂಕ್ರಾಮಿಕ ರೋಗ ಕೋವಿಡ್‌ ಪರಿಣಾಮ ಲಾಕ್‌ಡೌನ್ ಆಯ್ತು. ಜೊತೆಗೆ ತೃತೀಯ ಲಿಂಗಿ ಎಂಬ ಅವಮಾನವೂ ಆಯ್ತು. ಇದೆಲ್ಲದರ ನಡುವೆ ಆಟೋ-ರಿಕ್ಷಾ ಓಡಿಸುವ ಗಟ್ಟಿ ನಿರ್ಧಾರ ಮಾಡಿದರು. ಹಲವರ ಸಹಾಯದಿಂದ ಇಂದು ತನ್ನ ಸ್ವಂತ ದುಡಿಮೆ ಮತ್ತು ಸ್ವಂತ ಮನೆಯನ್ನು ಕಟ್ಟಿಕೊಂಡು ಸುಂದರ ಜೀವನ ನಡೆಸುತ್ತಿದ್ದಾರೆ.
 

click me!