ಹೆಸರು ತಿರುಚಿ ವೈದ್ಯಕೀಯ ವೀಸಾದಿಂದ ಭಾರತದಲ್ಲಿ ನೆಲೆಸುವ ಇರಾಕ್‌ ಪ್ರಜೆಯ ಯತ್ನಕ್ಕೆ ಕರ್ನಾಟಕ ಕೋರ್ಟ್‌ ಕೊಕ್ಕೆ!

By Kannadaprabha NewsFirst Published Jun 22, 2024, 6:25 PM IST
Highlights

ಹೆಸರು ತಿರುಚಿಕೊಂಡು ವೈದ್ಯಕೀಯ ವೀಸಾ ಮೂಲಕ ಎರಡನೇ ಬಾರಿಗೆ ಭಾರತ ಪ್ರವೇಶಿಸಲು ಇರಾಕ್‌ ಪ್ರಜೆಯೊಬ್ಬ ನಡೆಸಿದ ಪ್ರಯತ್ನವನ್ನು ಕರ್ನಾಟಕ ಹೈಕೋರ್ಟ್‌ ವಿಫಲಗೊಳಿಸಿದೆ.

ಬೆಂಗಳೂರು (ಜೂ.22): ಹೆಸರು ತಿರುಚಿಕೊಂಡು ವೈದ್ಯಕೀಯ ವೀಸಾ ಮೂಲಕ ಎರಡನೇ ಬಾರಿಗೆ ಭಾರತ ಪ್ರವೇಶಿಸಲು ಇರಾಕ್‌ ಪ್ರಜೆಯೊಬ್ಬ ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿರುವ ಹೈಕೋರ್ಟ್‌, ವಿದೇಶಿಯರಿಗೆ ವೈದ್ಯಕೀಯ ವೀಸಾ ಮಂಜೂರು ಮಾಡುವಾಗ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗೆ (ಎಫ್‌ಆರ್‌ಆರ್‌ಒ) ನಿರ್ದೇಶಿಸಿದೆ.

ವೈದ್ಯಕೀಯ ವೀಸಾ ಕೋರಿ ಸಲ್ಲಿಸಿದ್ದ ಅರ್ಜಿ ಪರಿಗಣಿಸದ ಎಫ್‌ಆರ್‌ಆರ್‌ಒ ಕ್ರಮ ಪ್ರಶ್ನಿಸಿ ಇರಾಕ್‌ನ ಬಾಗ್ದಾದ್ ನಿವಾಸಿ ಸಗದ್ ಕರೀಂ ಇಸ್ಮಾಯಿಲ್ ಎಂಬಾತ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ನಿರ್ದೇಶನ ನೀಡಿದೆ.

Latest Videos

Breaking: ಜುಲೈ 4ರವರೆಗೆ ನಟ ದರ್ಶನ್ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಅಲ್ಲದೆ, ವೈದ್ಯಕೀಯ ವೀಸಾ ಪಡೆದು ಒಂದು ಬಾರಿ ಭಾರತಕ್ಕೆ ಬಂದಿದ್ದ ಅರ್ಜಿದಾರ ಅವಧಿ ಮೀರಿ ದೇಶದಲ್ಲಿ ನೆಲೆಸಿದ್ದಾನೆ. ಇದರಿಂದ ಆತನ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ತನ್ನ ನಿಜವಾದ ಹೆಸರಾದ ಸಜ್ಜದ್ ಕರೀಂ ಇಸ್ಮಾಯಿಲ್ ಅನ್ನು ಸಾಗದ್ ಕರೀಂ ಇಸ್ಮಾಯಿಲ್ ಎಂಬುದಾಗಿ ಬದಲಾಯಿಸಿಕೊಂಡು ಎರಡನೇ ಬಾರಿಗೆ ವೀಸಾ ಪಡೆಯಲು ಎಫ್‌ಆರ್‌ಆರ್‌ಒಗೆ ಅರ್ಜಿ ಸಲ್ಲಿಸಿದ್ದಾನೆ.

ಆ ಅರ್ಜಿ ಪರಿಗಣಿಸದೇ ಇದ್ದಾಗ ಅರ್ಜಿದಾರ ವಿದೇಶದಲ್ಲಿ ಕುಳಿತು ತಮ್ಮ ಪರವಾಗಿ ಸ್ಪೆಷಲ್ ಪವರ್ ಆಫ್ ಅಟಾರ್ನಿ (ಎಸ್‌ಪಿಎ) ಭಾರತದ ಪ್ರಜೆ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ವಿದೇಶದಲ್ಲಿ ಕುಳಿತು ಎಸ್‌ಪಿಎ ಮೂಲಕ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಸಿಖ್ ಉಗ್ರನಿಗೆ ಕೆನಡಾ ಸಂಸತ್‌ನಲ್ಲಿ ಶ್ರದ್ಧಾಂಜಲಿ; ಇದೇನು ಭಾರತ ವಿರೋಧಿ ನೀತಿಯೇ?

ಪ್ರಕರಣದ ವಿವರ: ಇರಾಕ್ ಪ್ರಜೆಯಾಗಿರುವ ಅರ್ಜಿದಾರ ಅಲ್ಲಿನ ಬಸ್ರಾ ನಗರದ ಆರೋಗ್ಯ ಇಲಾಖೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದ. ಈ ವೇಳೆ ಅತನ ಮೆದುಳಿನಲ್ಲಿ ಮೂರು ಸಣ್ಣ ಗಾಯಗಳಾಗಿರುವುದು ಪತ್ತೆಯಾಗಿತ್ತು. ಅದಕ್ಕೆ ಬೆಂಗಳೂರಿನ ಆಸ್ಟ್ರ ಸಿಎಂಐ ಆಸ್ಪತ್ರೆಯಲ್ಲಿ ಮೂರು ತಿಂಗಳುಗಳ ಕಾಲ ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದ. ಇದರಿಂದ ಭಾರತ ಪ್ರವೇಶಕ್ಕೆ ವೀಸಾ ನೀಡಲು ಕೋರಿ 20224ರ ಫೆ.22ರಂದು ಇ-ಮೇಲ್ ಮನವಿ ಸಲ್ಲಿಸಿದ್ದ. ಅದನ್ನು ಎಫ್‌ಆರ್‌ಆರ್‌ಒ ಪುರಸ್ಕರಿಸದೇ ಇದ್ದಾಗ ಬೆಂಗಳೂರಿನ ನಿವಾಸಿಯೊಬ್ಬರ ಸ್ಪೆಷಲ್ ಪವರ್ ಆಫ್ ಅಟಾರ್ನಿ (ಎಸ್‌ಪಿಎ) ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಪರ ಹಾಜರಾದ ಉಪ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್ , ಬಿ-ಫಾರ್ಮಾ ಕೋರ್ಸ್‌ ಅಧ್ಯಯನ ಮಾಡಲು ಅರ್ಜಿದಾರರು 2012ರಲ್ಲಿ ವೀಸಾ ಪಡೆದು ಬೆಂಗಳೂರಿಗೆ ಆಗಮಿಸಿದ್ದರು. ಬಳಿಕ 2017ರ 11 ತಿಂಗಳ ಕಾಲ ವಿಳಂಬವಾಗಿ ತಮ್ಮ ದೇಶಕ್ಕೆ ಹಿಂದಿರುಗಿದ್ದರು. ವೀಸಾ ಅವಧಿ ಮೀರಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರ ಪರಿಣಾಮ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಹೀಗಿದ್ದರೂ 2017ರ ನವೆಂಬರ್ ತಿಂಗಳಲ್ಲಿ ವೈದ್ಯಕೀಯ ಸಹಾಯಕರಾಗಿ ಭಾರತಕ್ಕೆ ಬರಲು ಪ್ರಯತ್ನಿಸಿದ್ದರು. ಆಗಲೂ ಆತನಿಗೆ ಅವಕಾಶ ನಿರಾಕರಿಸಲಾಗಿತ್ತು.

ಕಪ್ಪುಪಟ್ಟಿಗೆ ಸೇರಿಸಿದ್ದರ ಪರಿಣಾಮ ಆತನ ಎಸ್‌ಪಿಎ ಮೂಲಕ ಹೈಕೋರ್ಟ್‌ಗೆ ಇದೀಗ ಅರ್ಜಿ ಸಲ್ಲಿಸಿದ್ದಾರೆ. ಈ ರೀತಿ ಅರ್ಜಿ ಸಲ್ಲಿಸಲು ಕಾನೂನಿಯಲ್ಲಿ ಅವಕಾಶವಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು. ಈ ವಾದವನ್ನು ನ್ಯಾಯಪೀಠ ಪುರಸ್ಕರಿಸಿದೆ.

click me!