Asianet Suvarna News Asianet Suvarna News

Breaking: ಜುಲೈ 4ರವರೆಗೆ ನಟ ದರ್ಶನ್ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ  ಜುಲೈ 4ರವರೆಗೆ ನಟ ದರ್ಶನ್ ಗೆ  ನ್ಯಾಯಾಂಗ ಬಂಧನವಾಗಿದ್ದು, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್.

actor darshan and gang sent parappana agrahara jail in renukaswamy murder case gow
Author
First Published Jun 22, 2024, 4:04 PM IST

ಬೆಂಗಳೂರು(ಜೂ.22):   ಚಿತ್ರದುರ್ಗದ ರೇಣುಕಾಸ್ವಾಮಿ (RenukaSwamy) ಬರ್ಬರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ (Actor Darshan) ಮತ್ತು ಮೂವರು ಸಹಚರರನ್ನು ಪೊಲೀಸ್‌ ಕಸ್ಟಡಿ ಅಂತ್ಯ ಹಿನ್ನೆಲೆ ವಿಚಾರಣೆಗೆ ಒಳಪಡಿಸಲಾಯಿತು.  ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದರ್ಶನ್ ಹಾಗೂ  ಆಪ್ತರಾದ ವಿನಯ್‌, ಪ್ರದೂಷ್‌ ಹಾಗೂ ಧನರಾಜ್‌ರನ್ನು ಶನಿವಾರ ಹಾಜರುಪಡಿಸಿದ್ದು, ಕೋರ್ಟ್ ಇವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಜುಲೈ 04ರವರೆಗೆ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಕಳೆದ 12 ದಿನಗಳಿಂದ ದರ್ಶನ್ ಹಾಗೂ ಗ್ಯಾಂಗ್ ಪೊಲೀಸ್‌ ಕಸ್ಟಡಿಯಲ್ಲಿತ್ತು. ಇನ್ನು ಮುಂದಿನ ವಿಚಾರಣೆಗೆವರೆಗೆ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸಬೇಕು.  ರೇಣುಕಾಸ್ವಾಮಿ ಭೀಕರ ಹತ್ಯೆ ಹಿನ್ನೆಲೆ ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ ಸೇರಿ ಉಳಿದ 13 ಮಂದಿ ಈಗಾಗಲೇ  ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.  ಈಗ ದರ್ಶನ್ ಸೇರಿ ನಾಲ್ವರು ಪರಪ್ಪನ ಅಗ್ರಹಾರ ಸೇರಿದ್ದು, ಈ ಮೂಲಕ ಕೊಲೆ ಕೇಸ್ ನಲ್ಲಿ ಭಾಗಿಯಾದ 17 ಆರೋಪಿಗಳು ಕಂಬಿ ಎಣಿಸಬೇಕಿದೆ.

ದರ್ಶನ್ ಪ್ರಕರಣ ಸೇರಿ ಸಾಲು ಸಾಲು ಘಟನೆ ಉಲ್ಲೇಖಿಸಿ ರಮ್ಯಾ ಟ್ವೀಟ್, ನೊಂದವರ ಪರ ನಿಂತ ನಟಿ!

ನ್ಯಾಯಾಲಯದ ಮುಂದೆ ಗುರುವಾರ ದರ್ಶನ್‌ ಸೇರಿದಂತೆ ನಾಲ್ವರನ್ನು ಹಾಜರುಪಡಿಸಿ ಮತ್ತೆರೆಡು ದಿನ ಕಸ್ಟಡಿಗೆ ಪೊಲೀಸರು ಪಡೆದಿದ್ದರು. ಈ ಅವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಲಾಯ್ತು. ಈಗ ನ್ಯಾಯಾಂಗ ಬಂಧನವಾಗಿದ್ದು, ಪೊಲೀಸ್ ಠಾಣೆಯ ಲಾಕಪ್‌ನಿಂದ ಸೆಂಟ್ರಲ್ ಜೈಲ್‌ನ ಕತ್ತಲ ಕೋಣೆಯಲ್ಲಿ ಕಂಬಿ ಎಣಿಸಲಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿದ್ದೆ ಮಾಡದೇ ರಾತ್ರಿಯಿಡೀ ಚಡಪಡಿಸಿದ ಪವಿತ್ರಾ ಗೌಡ! 

ಆರೋಪಿಗಳ ಪಟ್ಟಿ ಇಂತಿದೆ: A1.ಪವಿತ್ರಾಗೌಡ, A2.ದರ್ಶನ್, A3.ಪವನ್ ಅಲಿಯಾಸ್ ಪುಟ್ಟಸ್ವಾಮಿ ,A4.ರಾಘವೇಂದ್ರ ,A5.ನಂದೀಶ್,A6.ಜಗದೀಶ್  ಅಲಿಯಾಸ್ ಜಗ್ಗ , A7.ಅನುಕುಮಾರ್, A8.ರವಿ , A9.ರಾಜು (ಧನರಾಜ್) , A10.ವಿನಯ್, A11.ನಾಗರಾಜು, A12.ಲಕ್ಷ್ಮಣ್, A13.ದೀಪಕ್, A14.ಪ್ರದೋಶ್, A15.ಕಾರ್ತಿಕ್, A16.ಕೇಶವ ಮೂರ್ತಿ, A17.ನಿಖಿಲ್ ನಾಯಕ್.

Latest Videos
Follow Us:
Download App:
  • android
  • ios