ಬೆಂಗಳೂರು, ಮೈಸೂರು ಹಾಗೂ ಮಂಡ್ಯದಲ್ಲಿ ಭ್ರೂಣ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಲಾಗಿದೆ.
ಬೆಂಗಳೂರು (ನ.30): ರಾಜ್ಯದಲ್ಲಿ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆ ಸೇರಿದಂತೆ 2 ವರ್ಷದಲ್ಲಿ ಬರೋಬ್ಬರಿ 900ಕ್ಕೂ ಅಧಿಕ ಹೆಣ್ಣು ಭ್ರೂಣಗಳನ್ನು ಕಾನೂನು ಬಾಹಿರವಾಗಿ ಹಾಗೂ ಅಮಾನುಷವಾಗಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರವು ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗೃಹಮಂತ್ರಿ ಪರಮೇಶ್ವರ್ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಾದ್ಯಂತ ಭ್ರೂಣ ಹತ್ಯೆ ಪ್ರಕರಣದ ಗಂಭೀರ ತನಿಖೆಗೆ ಆಗ್ರಹ ಕೇಳಿಬಂದಿತ್ತು. ಜೊತೆಗೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಯನ್ನು ಕೆಲವರನ್ನು ಒಳಗೊಂಡ ತಂಡವು ಬೆಲ್ಲ ತಯಾರಿಸುವ ಆಲೆಮನೆಯಲ್ಲಿ ಭ್ರೂಣ ಪರೀಕ್ಷೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ CID ತನಿಖೆಗೆ ಒಪ್ಪಿಸಿದೆ. ಈ ಕುರಿತು ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಗೃಹ ಸಚಿವರಿಗೆ ಸೂಚಿಸಿದ್ದಾರೆ.
ಭ್ರೂಣ ಲಿಂಗ ಪತ್ತೆ ಪ್ರಕರಣ; 2 ವರ್ಷದಲ್ಲಿ ಬರೋಬ್ಬರಿ 900 ಭ್ರೂಣ ಹತ್ಯೆ ಮಾಡಿರುವ ಪಾಪಿಗಳು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭ್ರೂಣ ಲಿಂಗ ಪತ್ತೆ ದಂಧೆ ನಡೆಸುತ್ತಿದ್ದ ಜಾಲವನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಭೇದಿಸಿದ್ದಾರೆ. ಈ ಗ್ಯಾಂಗ್ ಎಂಥಾ ಖತರ್ನಾಕ್ ಎಂದರೆ ಮೊದಲಿಗೆ ಗರ್ಭಿಣಿಯರನ್ನು ಹುಡುಕುತ್ತಿದ್ದ ಗ್ಯಾಂಗ್ ಬಳಿಕ ಗರ್ಭಿಣಿಯರ ಭ್ರೂಣ ಲಿಂಗ ಪತ್ತೆ ಹಚ್ಚಿ, ಹೆಣ್ಣು ಮಗು ಎಂದು ಗೊತ್ತಾದರೆ ಸಾಕು ಗರ್ಭಪಾತ ಮಾಡಿಸಲು ಸ್ಕೆಚ್ ಹಾಕುತ್ತಿದ್ದರು. ಈ ಪ್ರಕರಣದಲ್ಲಿ ಭ್ರೂಣ ಹತ್ಯೆಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಆರೋಪಿಗಳ ಮನೆಹಾಳ ಕೃತ್ಯಕ್ಕೆ ಪೊಲೀಸರೇ ದಂಗಾಗಿದ್ದಾರೆ.
ಪ್ರಕರಣದಲ್ಲಿ ವೈದ್ಯರೂ ಭಾಗಿ: ಮೊದಲಿಗೆ ಭ್ರೂಣ ಲಿಂಗ ಪತ್ತೆ ಪ್ರಕರಣದ ಬೆನ್ನುಹತ್ತಿದ ಪೊಲೀಸರು, ಮೊದಲಿಗೆ ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್ ಎಂಬುವವರನ್ನು ಅರೆಸ್ಟ್ ಮಾಡಿದ್ದರಿ. ಈ ಗ್ಯಾಂಗ್ ವಿಚಾರಣೆ ಬಳಿಕ ಈ ಪ್ರಕರಣದಲ್ಲಿ ವೈದ್ಯರೂ ಸಹ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಚನ್ನೈ ಮೂಲದ ಡಾ. ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ, ಡಾ.ಚಂದನ್ ಬಲ್ಲಾಳ್ (ಮೈಸೂರಿನ ಮಾತಾ ಅಸ್ಪತ್ರೆಯ ಮಾಲೀಕ), ಡಾ.ಚಂದನ್ ಬಲ್ಲಾಳ್ ಪತ್ನಿ ಮೀನಾ, ಲ್ಯಾಬ್ ಟೆಕ್ನೀ಼ಶಿಯನ್ ನಿಸ್ಸಾರ್ ಅರೆಸ್ಟ್ ಮಾಡಲಾಗಿದೆ.
ಒಟ್ಟು 9 ಜನರು ಸೇರಿ ಸಿಂಡಿಕೇಟ್ ಮಾಡಿಕೊಂಡು ವ್ಯವಸ್ಥಿತವಾಗಿ ಕೃತ್ಯ ಎಸಗುತಿದ್ದರು. ಆರೋಪಿಗಳು ಒಂದು ತಿಂಗಳಲ್ಲಿ ಬರೋಬ್ಬರಿ 20-25 ಭ್ರೂಣ ಹತ್ಯೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕೃತ್ಯ ಎಸಗುತ್ತಿರುವ ಬಗ್ಗೆ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೈಸೂರಿನ ಉದಯಗಿರಿಯಲ್ಲಿನ ಮಾತಾ ಆಸ್ಪತ್ರೆ ಮತ್ತು ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಫೈಲ್ಸ್ ಡೇ ಕೇರ್ ಸೆಂಟರ್ ಸೀಜ್ ಮಾಡಿದ್ದಾರೆ. ಹೆಣ್ಣು ಭ್ರೂಣ ಹತ್ಯೆಯನ್ನು ಇದೇ ಡೇ ಕೇರ್‌ನಲ್ಲಿ ನಡೆಸುತ್ತಿತ್ತು.
ರಾಮನಗರ, ಕನಕಪುರ ಮೆಡಿಕಲ್ ಕಾಲೇಜು ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೇನು ಕೆಲಸ?
ಎರಡು ವರ್ಷಗಳಲ್ಲಿ 900 ಹೆಣ್ಣು ಭ್ರೂಣ ಹತ್ಯೆ: ಈ ಗ್ಯಾಂಗ್ ಕಳೆದ ಎರಡು ವರ್ಷಗಳಲ್ಲಿ ಸುಮಾರು 900 ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ಮುಂದುರೆಸಿರುವ ಬೈಯಪ್ಪನಹಳ್ಳಿ ಪೊಲೀಸರು ಕಳೆದ ಅಕ್ಟೋಬರ್ ನಲ್ಲಿ ಪ್ರಕರಣ ಸಂಬಂಧ ಮೊದಲ ಕೇಸ್ ದಾಖಲು ಮಾಡಿದ್ದರು. ತನಿಖೆ ವೇಳೆ ಪೊಲೀಸರಿಗೆ ಸಿಕ್ಕ ಒಂದು ಮಾಹಿತಿ ಆಧರಿಸಿ ಕಾರ್ಯಚರಣೆ ನಡೆಸಿದ್ದರು. ಮೊದಲಿಗೆ ನಾಲ್ವರು ಆರೋಪಿಗಳು ಸಹಿತ ಸ್ಕ್ಯಾನಿಂಗ್ ಮಿಷಿನ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಖದೀಮರು ಒಂದು ಭ್ರೂಣ ಪತ್ತೆ ಮಾಡಲಿಕ್ಕೆ 20 ರಿಂದ 25 ಸಾವಿರ ಹಣ ಪಡೆಯುತ್ತಿದ್ದರು. ಒಟ್ಟು 50,000 ರೂ.ಗೆ ಒಂದು ಭ್ರೂಣ ಹತ್ಯೆ ಮಾಡ್ತಿದ್ದರು. ಈ ಗ್ಯಾಂಗ್‌ನಲ್ಲಿ ಎರಡು ವರ್ಗ ಮಾಡಿಕೊಂಡಿದ್ದರು. ಮೊದಲನೆ ಗ್ಯಾಂಗ್ ಭ್ರೂಣ ಪತ್ತೆ ಮಾಡುವ ಗ್ಯಾಂಗ್, ಇನ್ನೊಂದು ಭ್ರೂಣ ಹತ್ಯೆ ಮಾಡುತ್ತಿದ್ದ ಗ್ಯಾಂಗ್. ಅರೋಪಿಗಳು ಎರಡು ಗ್ಯಾಂಗ್ ಆಗಿ ಕೆಲಸ ಮಾಡ್ತಿದ್ದರು.