ಕೊರೋನಾ ಎಫೆಕ್ಟ್: ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರ್ಕಾರ, ದೇಶದಲ್ಲಿಯೇ ಮೊದಲ ಪ್ರಯತ್ನ

By Suvarna NewsFirst Published May 27, 2020, 4:59 PM IST
Highlights

ವಿಶ್ವದಾದ್ಯಂತ ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆ ಕರ್ನಾಟಕ ಸರ್ಕಾರವು ಮಹಾಮಾರಿ ಕೊರೋನಾ  ತಡೆಗೆ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ಇದು ದೇಶದಲ್ಲಿ ಮೊದಲ ಪ್ರಯತ್ನ.

ಬೆಂಗಳೂರು, (ಮೇ. 27):  ರಾಜ್ಯದಲ್ಲಿ ಪ್ರತಿ ಮನೆಗೂ ತೆರಳಿ ಆರೋಗ್ಯ ಸ್ಥಿತಿಗತಿಯನ್ನು ಸಮೀಕ್ಷೆ ನಡೆಸುವ ಮೂಲಕ ಹೆಲ್ತ್ ರಿಜಿಸ್ಟರ್ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

"

ಹೆಲ್ತ್ ರಿಜಿಸ್ಟರ್ ಬಗ್ಗೆ ಹದಿನೆಂಟು ವಿಭಾಗದಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿದ ತಜ್ಞರ ಜೊತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಈ ಹೆಲ್ತ್ ರಿಜಿಸ್ಟರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಸೋಂಕು ತೀವ್ರ!

ಹೆಲ್ತ್ ರಿಜಿಸ್ಟರ್ ಸಂಬಂಧ ಸಭೆಯನ್ನು ಮಾಡಿದ್ದೇವೆ. ಆರೋಗ್ಯ ಕರ್ನಾಟಕವಾಗಬೇಕು ಅನ್ನೋದು ರಾಜ್ಯ ಸರ್ಕಾರದ ಉದ್ದೇಶ ಮತ್ತು ಆಶಯವಾಗಿದೆ. ಏಕರೂಪ ಚಿಕಿತ್ಸ ಪದ್ಧತಿಗಳನ್ನ ರಾಜ್ಯದಲ್ಲಿ ಅಳವಡಿಸಬೇಕು ಅನ್ನೋ ಉದ್ದೇಶವಿದೆ. ದೇಶದಲ್ಲಿ ಇದು ಮೊದಲ ಪ್ರಯತ್ನ ಎಂದು ಹೇಳಿದರು.

ರಾಜ್ಯದಲ್ಲಿ ಎಷ್ಟು ಜನ ಇದ್ದಾರೋ ಅವರೆಲ್ಲರ ಆರೋಗ್ಯ ರಿಜಿಸ್ಟರ್ ಮಾಡಲಾಗುವುದು. ಆರಂಭದಲ್ಲಿ ಹೆಲ್ತ್ ರಿಜಿಸ್ಟರ್ ಯೋಜನೆಗೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನ ಮೊದಲು ಆಯ್ಕೆ ಮಾಡಿಕೊಳ್ಳಲಾಗಿದ್ದು, ಬಹಳ ದೀರ್ಘ ಸಮಯ ತೆಗೆದುಕೊಳ್ಳುವ ಯೋಜನೆಯಾಗಿದೆ. ಕನಿಷ್ಠ ಮೂರು ತಿಂಗಳಲ್ಲಿ ಒಂದು ಜಿಲ್ಲೆಯನ್ನು ಕಂಪ್ಲಿಟ್ ಮಾಡುವ ಪ್ಲಾನ್ ಇದೆ ಎಂದು ತಿಳಿಸಿದರು.

ದೇಶದಲ್ಲಿ ಮೊದಲ ಸಮೀಕ್ಷೆ
ಈ ರೀತಿ ಯ ಸಮೀಕ್ಷೆ ವಿಶ್ವದ ಕೆಲವು ದೇಶಗಳಲ್ಲಿದೆ. ಭಾರತದಲ್ಲಿ ಯಾವ ರಾಜ್ಯದಲ್ಲೂ ಸಮೀಕ್ಷೆ ನಡೆದಿಲ್ಲ. ಎಲ್ಲರ ಆರೋಗ್ಯದ ಮಾಹಿತಿಯನ್ನು ಪಡೆದು ರಿಜಿಸ್ಟರ್ ಮಾಡಲು ಚರ್ಚೆ ನಡೆಸಲಾಗಿದೆ. ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗುವುದು. ರಾಜ್ಯದ ಆರುವರೆ ಕೋಟಿ ಜನರ ಆರೋಗ್ಯ ರಿಜಿಸ್ಟರ್ ನಿರ್ವಹಣೆ ಮಾಡಲಾಗುವುದು. ಇದರಿಂದ ಆರೋಗ್ಯ ಸೇವೆಯಲ್ಲಿ ಸುಧಾರಣೆ ಸಾಧ್ಯ ಮತ್ತು ಬಜೆಟ್ ನಲ್ಲಿ‌ ಅನುದಾನ ನಿಗದಿಗೂ ಅನುಕೂಲವಾಗಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ಕೊರೋನಾ ತಡೆಗಟ್ಟುವುದೇಗೆ? ಬೆಂಗಳೂರು ಆಯ್ತು ರೋಲ್ ಮಾಡೆಲ್..!

ಸಮಗ್ರ ಮಾಹಿತಿ ಹಂಚಿಕೊಳ್ಳಬೇಕು 
ಸಮೀಕ್ಷೆಗೆ ದೀರ್ಘ ಕಾಲಬೇಕಿದೆ, ಆದರೂ ಶುರು ಮಾಡುತ್ತೇವೆ. ಆಶಾ ಕಾರ್ಯಕರ್ತರು, ಖಾಸಗಿ ಆಸ್ಪತ್ರೆಗಳ ಸಹಕಾರದಲ್ಲಿ ಮಾಹಿತಿ ಸಂಗ್ರಹಿಸಲಾಗುವುದು. ಮೀಕ್ಷೆಗೆ ಪ್ರಶ್ನಾವಳಿಗಳನ್ನು ಎರಡು ಮೂರು ದಿನಗಳಲ್ಲಿ ಸಿದ್ದ ಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಆಹಾರ, ನೀರು ಯಾವ ರೀತಿ ಇರಬೇಕು ಎಂಬ ಮಾಹಿತಿಯೂ ಸಮೀಕ್ಷೆ ಒಳಗೊಂಡಿರುತ್ತದೆ. ಜನ ಸಮೀಕ್ಷೆಯ ವೇಳೆ ಸಮಗ್ರ ಮಾಹಿತಿ ಹಂಚಿಕೊಳ್ಳಬೇಕು ಎಂದರು.

ಸಮೀಕ್ಷೆಗೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಚರ್ಚೆ ನಡೆದಿದೆ. ಸಂಪನ್ಮೂಲ ಕ್ರೋಢಿಕರಣ ಬಗ್ಗೆ ಎಲ್ಲಾ ಆಯಾಮಗಳಿಂದ ಚರ್ಚೆ ನಡೆಸಲಾಗುವುದು. ಇದಲ್ಲದೆ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವ ಬಗ್ಗೆ ಚರ್ಚೆ ನಡೆಸಲಾಗಿದೆ. ಏಕರೂಪ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಇದೆ ಎಂದು ಸ್ಪಷ್ಟಪಡಿಸಿದರು.

click me!