ಜೈನಮುನಿಗಳ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್‌ರ ಎಲ್ಲ ಆಯಾಮಗಳಿಂದಲೂ ತನಿಖೆ ನಡೆದಿದ್ದು, ಆರೋಪಿಗಳನ್ನು ಸಹ ಬಂಧಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ಸಿಬಿಐನವರು ಮಾಡುವ ಕೆಲಸವನ್ನು ನಮ್ಮ ಪೊಲೀಸ್‌ನವರೇ ಮಾಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ (ಜು.15) : ಜೈನಮುನಿಗಳ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್‌ರ ಎಲ್ಲ ಆಯಾಮಗಳಿಂದಲೂ ತನಿಖೆ ನಡೆದಿದ್ದು, ಆರೋಪಿಗಳನ್ನು ಸಹ ಬಂಧಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ಸಿಬಿಐನವರು ಮಾಡುವ ಕೆಲಸವನ್ನು ನಮ್ಮ ಪೊಲೀಸ್‌ನವರೇ ಮಾಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ಗೃಹ ಸಚಿವರು ಭೇಟಿ ನೀಡಿದ್ದಾರೆ. ಸದನದಲ್ಲಿಯೂ ಗೃಹಮಂತ್ರಿಗಳು ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ಈ ಬಗ್ಗೆ ಸಾಕಷ್ಟುಗಮನ ಹರಿಸಿದೆ. ಪ್ರಕರಣ ಬೇಧಿಸುವಲ್ಲಿ ಪೊಲೀಸರು ತತಕ್ಷಣವೇ ಯಶಸ್ವಿಯಾಗಿದ್ದಾರೆ. ಇಂತಹ ಅಹಿತಕರ ಘಟನೆ ನಡೆದಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಅಹಿಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಸ್ವಾಮೀಜಿಗಳ ಹತ್ಯೆಯನ್ನು ಎಲ್ಲ ಪಕ್ಷಗಳು ಖಂಡನೆ ಮಾಡಿವೆ ಎಂದು ತಿಳಿಸಿದರು.
ಹತ್ಯೆ ಬಳಿಕ ಜೈನಮುನಿಗಳ ವೈಯಕ್ತಿಕ ಡೈರಿ ಸುಟ್ಟಿರೋ ಹಂತಕರು! ಪೊಲೀಸ್ ತನಿಖೆ ವೇಳೆ ಬಯಲು!
ಜೈನಮುನಿ ಕಾಮಕುಮಾರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗ್ರಾಮದ ಜೈನ ಮುಖಂಡರಿಗೆ ಸಾಂತ್ವನ ಹೇಳಿದರು. ಜೈನಮುನಿಗಳು ವಾಸಿಸುತ್ತಿದ್ದ ಕೋಣೆಗೆ ಭೇಟಿ ನೀಡಿ ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಬಸವರಾಜ ಯಲಿಗಾರರಿಂದ ಹತ್ಯೆಯ ಕುರಿತಂತೆ ಪೊಲೀಸರಿಂದ ಮಾಹಿತಿ ಪಡೆದುಕೊಂಡರು.
ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಜೈನಮುಖಂಡ ಉತ್ತಮ ಪಾಟೀಲ, ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ, ಎಸ್.ಎಸ್.ನಸಲಾಪೂರೆ, ಮಹಾವೀರ ಮೋಹಿತೆ, ಡಾ.ಎನ್.ಎ.ಮಗದುಮ್ಮ, ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಉಪಸ್ಥಿತರಿದ್ದರು.
ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ಹತ್ಯೆಗೊಳಗಾಗಿರುವ ಜೈನ ಮುನಿ ಕಾಮಕುಮಾರ ನಂದಿ ಪರ್ವತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿದರು. ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಜೈನಮುಖಂಡ ಉತ್ತಮ ಪಾಟೀಲ, ವೀರಕುಮಾರ ಪಾಟೀಲ ಉಪಸ್ಥಿತರಿದ್ದರು.
ಜೈನಮುನಿಗಳ ಹತ್ಯೆಗೆ ಧನ್ಯಕುಮಾರ ಗುಂಡೆ ಖಂಡನೆ
ಚಿಕ್ಕೋಡಿ: ಹಿರೇಕೋಡಿ ಗ್ರಾಮದ ನಂದಿ ಪರ್ವತದಲ್ಲಿ ಜೈನ ಪುಣ್ಯಕ್ಷೇತ್ರವನ್ನು ಸ್ಥಾಪಿಸಿದಂತಹ ಮುನಿಶ್ರೀ ಕಾಮಕುಮಾರ ನಂದಿಜೀಯವರ ಅಮಾನವೀಯ ಹತ್ಯೆಯನ್ನು ದೆಹಲಿಯ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ಖಂಡಿಸಿದರು.
ನವದೆಹಲಿಯ ತಮ್ಮ ಕಚೇರಿಯಿಂದ ಶುಕ್ರವಾರ ಪತ್ರಿಕಾ ಪ್ರಕಟಣೆ ಮೂಲಕ ವಿಷಯ ಪ್ರಸ್ತಾಪಿಸಿದ ಅವರು, ದೆಹಲಿಯ ವೃಷಭವಿಹಾರದಲ್ಲಿ ಅಚಾರ್ಯಶ್ರೀ, ಸುನಿಲ ಸಾಗರ ಮಹಾರಾಜ ನೇತೃತ್ವದಲ್ಲಿ ಬೃಹತ್ ಸಭೆಯನ್ನು ಕೈಗೊಂಡಿದ್ದು, ಒಮ್ಮತದಿಂದ ಮುನಿಶ್ರೀ ಕಾಮಕುಮಾರ ನಂದಿಯವರ ಭೀಕರ ಹತ್ಯೆ ಖಂಡಿಸಲಾಯಿತು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ನವದೆಹಲಿಯಲ್ಲಿಯು ಸದಸ್ಯರು ಚಿಕ್ಕೋಡಿ ಪಟ್ಟಣದ ಹಿರಿಯ ನ್ಯಾಯವಾದಿಗಳಾದ ಧನ್ಯಕುಮಾರ ಗುಂಡೆ ಹಾಗೂ ಅಧ್ಯಕ್ಷ ಇಕ್ವಾಲಸಿಂಗ್ ಲಾಲಪುರಾಜಿ ಮತ್ತು ಉಳಿದ ಸದಸ್ಯರ ನೇತೃತ್ವದಲ್ಲಿಯು ಸಹ ಚರ್ಚಿಸಿ ಮುನಿಯವರ ಬರ್ಬರ ಹತ್ಯೆಯನ್ನು ಖಂಡಿಸಲಾಯಿತು.
ಮೇಲ್ನೋಟಕ್ಕೆ ತೋರಿಸುವಂತಹ ಹಣದ ವ್ಯವಹಾರ ಆಧಾರರಹಿತವಾಗಿದ್ದು, ದಿಗಂಬರತ್ವವನ್ನು ಹೊಂದಿದ ಜೈನ ಮುನಿಗಳ ಹತ್ತಿರ ಯಾವುದೇ ತರಹದ ಧನ ಅಥವಾ ದ್ರವ್ಯವಿರುವ ಕಾರಣವೇ ಇಲ್ಲ. ವಿಷಯವನ್ನು ಸಂಪೂರ್ಣ ಅಧ್ಯಯನ ಮಾಡಿದಲ್ಲಿ ಬೇರಾವುದೋ ಕಾರಣಗೋಸ್ಕರ ಅವರ ಅಮಾನವೀಯ ಹತ್ಯೆವನ್ನು ಕೈಗೊಂಡಂತೆ ಮೇಲ್ನೋಟಕ್ಕೆ ಕಾಣುತ್ತದೆ.
ಕಾನೂನು ಸುವ್ಯವಸ್ಥೆ ಕುಸಿತ; ಸರ್ಕಾರದ ವಿರುದ್ಧ ಗೌರ್ನರ್‌ಗೆ ಬಿಜೆಪಿ ದೂರು
ಈ ವಿಷಯದ ಬಗ್ಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಲ್ಲಿ ಚರ್ಚಿಸಿ ಸದರಿ ಆರೋಪದ ತನಿಖೆಯನ್ನು ಉಚ್ಚಸ್ಥರಿಯವಾಗಿ ಮಾಡುವುದರ ಅವಶ್ಯಕತೆ ಇರುತ್ತದೆ. ಕಾರಣ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮೂಲಕ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಅವರಿಗೆ ಆಗ್ರಹವನ್ನು ಪತ್ರದ ಮೂಲಕ ತಿಳಿಸಲಾಗಿದೆ. ಮುಂದಿನ ವರದಿಯನ್ನು 15 ದಿನಗಳಗಾಗಿ ತಿಳಿಸಲು ಆಗ್ರಹ ಮಾಡಲಾಗಿದೆ. ಈ ಹೀನಕೃತ್ಯ ಜೈನ ಸಮಾಜಕ್ಕೆ ಅಷ್ಟೇ ಅಲ್ಲದೆ ಸಂಪೂರ್ಣ ಮನುಕುಲಕ್ಕೆ ಆಘಾತಕಾರಿ ವಿಷಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.