ಇಸ್ರೇಲ್ ನಲ್ಲಿ ಸಂಸ್ಕೃತ ದಲ್ಲೇ ಪಿಎಚ್ ಡಿ ಪಡೆದ ಉಪನ್ಯಾಸಕ ರಫಿ ತಮ್ಮ 9 ಮಂದಿ ವಿದ್ಯಾರ್ಥಿಗಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. 9 ಮಂದಿ ವಿದ್ಯಾರ್ಥಿಗಳು ಇಸ್ರೇಲ್ ನಲ್ಲಿ 2ನೇ ವರ್ಷದ ಬಿ ಎ ಪದವಿ, ಮೊದಲನೇ ವರ್ಷದ ಎಂಎ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಕ ರಫಿ, ತನ್ನ ವಿದ್ಯಾರ್ಥಿಗಳಿಗೆ ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಯಲು ವಿದ್ಯಾರ್ಥಿಗಳೊಂದಿಗೆ ಆಗಮಿಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.22) : ಅವರು ಹುಟ್ಟಿದ್ದು ಇಸ್ರೇಲ್ ನಲ್ಲಿ. ಅವರಿಗೆ ತಾಯ್ನಾಡಿನ ಸಂಸ್ಕೃತಿಯ ಅರಿವಿದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ, ಭಾರತೀಯ ಸಂಸ್ಕೃತಿ, ರೂಢಿ-ಸಂಪ್ರಾದಯ, ಆಚಾರ-ವಿಚಾರಕ್ಕೆ ಮಾತ್ರ ಫುಲ್ ಫಿದಾ ಆಗಿದ್ದಾರೆ.
ಇಸ್ರೇಲ್ ನಿಂದ ಬಂದು ಸಂಸ್ಕೃತದ ಅಧ್ಯಯನದಲ್ಲಿರೋ ಆ ವಿದ್ಯಾರ್ಥಿಗಳು ಭಾರತೀಯರು ನಾಚುವಂತೆ ಇಲ್ಲಿನ ಪಂಪರೆ, ಸಂಸ್ಕೃತವನ್ನು ಕಲೆಯುತ್ತಿದ್ದಾರೆ. 9ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳು ಆಗಮಿಸಿ ಕಾಫಿನಾಡಿನ ಕನ್ನಡ ದೇವಾಲಯದಲ್ಲಿ ಮಹಾರಾಜ ಭೋಜ ವಿರಚಿತ ಚಂಪೂ ರಾಮಾಯಣದ ಸುಂದರ ಕಾಂಡದ ಕಾವ್ಯಗಳು ಅಧ್ಯಾನ ನಡೆಸುತ್ತಿದ್ದಾರೆ.
undefined
ಹೊಸ ಸಂಸತ್ತಿನ ಗೇಟ್‌ನಲ್ಲಿ ಗರುಡ, ಆನೆ ಕುದುರೆ: ಇವು ನೀಡುವ ಸಂದೇಶವೇನು?
ಭಾರತೀಯರೇ ಭಾರತೀಯ ಸಂಸ್ಕೃತಿಯನ್ನು ನಖಾಶಿಖಾಂತ ವಿರೋಧಿಸುತ್ತಿರುವ ಇಂಥ ಕಾಲಘಟ್ಟದಲ್ಲಿ, ದಿನದಿಂದ ದಿನಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿ ನಾವು-ನಮ್ಮದೆಂಬುದರ ಅರಿವಿಲ್ಲದೆ ಬದುಕುತ್ತಿರುವ ಭಾರತೀಯರಿಗೆ. ಇಲ್ಲಿಗೆ ಸಂಸ್ಕೃತ ಕಲಿಯಲು ಬಂದಿರುವ ಈ ವಿದ್ಯಾರ್ಥಿಗಳನ್ನು ನೋಡಿ ಕಲಿಯುವುದು ಸಾಕಷ್ಟಿದೆ.
ಇಸ್ರೇಲ್ ನಲ್ಲಿ ಸಂಸ್ಕೃತ ದಲ್ಲೇ ಪಿಎಚ್ ಡಿ ಪಡೆದ ಉಪನ್ಯಾಸಕ ರಫಿ ತಮ್ಮ 9 ಮಂದಿ ವಿದ್ಯಾರ್ಥಿಗಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. 9 ಮಂದಿ ವಿದ್ಯಾರ್ಥಿಗಳು ಇಸ್ರೇಲ್ ನಲ್ಲಿ 2ನೇ ವರ್ಷದ ಬಿ ಎ ಪದವಿ, ಮೊದಲನೇ ವರ್ಷದ ಎಂಎ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಕ ರಫಿ, ತನ್ನ ವಿದ್ಯಾರ್ಥಿಗಳಿಗೆ ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಸೋಕೆ ವಿದ್ಯಾರ್ಥಿಗಳಾದ ಇನ್ಬಾರ್ , ಇಲಿ , ಯೈರ್ , ಎಲಿ , ರುತಿ, ಓಲ್ಗಾ, ನೋವಾ, ಅಮೀರ್, ರಫಿ ಎಂಬುವವರನ್ನ ಕರೆತಂದಿದ್ದಾರೆ. ಇವೆರೆಲ್ಲರೂ ಭಾರತೀಯ ಸಂಸ್ಕೃತಕ್ಕೆ ಮನಸೋತು ಆಸಕ್ತಿಯಿಂದ ಸಂಸ್ಕೃತ ಕಲಿಯೋಕೆ ಮುಂದಾಗಿದ್ದಾರೆ.
ಇಸ್ರೇಲ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಇವರು ರಜೆ ಸಮಯದ 15 ದಿನಗಳ ಕಾಲ ಸಂಸ್ಕೃತ ಕಲಿಸೋಕೆ ಉಪನ್ಯಾಸಕ ರಫಿ ಜೊತೆ ಭಾರತಕ್ಕೆ ಬಂದಿದ್ದಾರೆ. ಈ ಟೀಮ್ ಸದ್ಯ ಚಿಕ್ಕಮಗಳೂರು ನಗರದ ಹಿರೇಮಗಳೂರಿನ ಇತಿಹಾಸ ಪ್ರಸಿದ್ದ ಶ್ರೀ ಕೊದಂಡರಾಮಚಂದ್ರಸ್ವಾಮಿ ಸನ್ನದಿಯಲ್ಲಿ ಮಹಾರಾಜ ಭೋಜ ವಿರಚಿತ ಚಂಪೂ ರಾಮಾಯಣದ ಸುಂದರ ಕಾಂಡದ ಕಾವ್ಯದ ಶ್ಲೋಕಗಳನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರ ಮಾತು-ಕಥೆ, ನಯಾ-ವಿನಯ ಮಾತ್ರ ಭಾರತೀಯರು ನಾಚುವಂತಿದೆ. ಸಂಸ್ಕೃತದ ಮೇಲಷ್ಟೆ ಅಲ್ಲದೆ ಭಾರತವಂದ್ರು ಕೂಡ ಇವರಿಗೆ ಅಷ್ಟೆ ಗೌರವವಿದೆ.
ಸಂಸ್ಕೃತದಲ್ಲೇ ಮಾತನಾಡುವಷ್ಟು ಸಮರ್ಥರಾಗಿರುವ ವಿದ್ಯಾರ್ಥಿಗಳು :
ಭಾಷೆ ಗೊತ್ತಿಲ್ಲ, ಇಲ್ಲಿ ಯಾರೂ ಸ್ನೇಹಿತರು-ಸಂಬಂಧಿಗಳಿಲ್ಲ. ಇಲ್ಲಿನ ಊಟ-ತಿಂಡಿಯ ಅರಿವಿಲ್ಲ. ಆದರೂ ಹಿರೇಮಗಳೂರಿನಲ್ಲಿ ಉಳಿದುಕೊಂಡು ಹಗಲಿರುಳು ಸಂಸ್ಕೃತ ಕಲಿಯುತ್ತಿರೋ ಈ ಟೀಮ್ ಭಾರತೀಯ ಪ್ರೀತಿಗೆ ಶಹಬಾಸ್ ಎನ್ನಲೇಬೇಕು.
ನಾವು ಜಗತ್ತಿನ ಯಾವುದೇ ದೇಶಕ್ಕೆ ಹೋದ್ರು ಒಂದೆರಡು ರೀತಿಯ ರೂಢಿ-ಸಂಪ್ರದಾಯವನ್ನ ನೋಡ್ಬೋದು. ಆದ್ರೆ, ಭಾರತದಲ್ಲಿ ಮಾತ್ರ ನೂರಾರು ಕಲೆ, ಸಂಸ್ಕೃತಿಯನ್ನ ಕಲಿಯೋಕೆ ಸಾಧ್ಯವೆಂದು ಭಾರತಕ್ಕೆ ಬಂದಿದ್ದೇವೆ ಅಂತಾರೆ ವಿದ್ಯಾರ್ಥಿಗಳು . ಕಳೆದ 14 ದಿನದಿಂದ ಸಂಸ್ಕೃತ ಕಲಿಯುತ್ತಿರೋ ಇವರು ಆರಂಭದಲ್ಲಿ ಸಂಸ್ಕೃತದ ಜೊತೆ ಇಂಗ್ಲೀಷ್ ಬಳಸುತ್ತಿದ್ರು ಆದ್ರೀಗ, ಸಂಪೂರ್ಣವಾಗಿ ಸಂಸ್ಕೃತದಲ್ಲೇ ಮಾತನಾಡುವಷ್ಟು ಸಮರ್ಥರಾಗಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳು ಭಾರತದ ಭವ್ಯ ಪರಂಪರೆಯಲ್ಲಿ ಭಾವಪರವಶರಾಗಿರುವುದು ಹೆಮ್ಮೆ ವಿಚಾರವೆಂದು ಶಿಕ್ಷಕ ವೈಷ್ಣವ್ ಅಭಿಪ್ರಾಯಿಸಿದ್ದಾರೆ.
ಜನರು ಧನವಂತರಾದರೆ ಸಾಲದು, ಧರ್ಮವಂತರೂ ಆಗಬೇಕು: ರಾಘವೇಶ್ವರ ಭಾರತೀ ಸ್ವಾಮೀಜಿ
ಒಟ್ಟಾರೆ, ನಿಜಕ್ಕೂ ಭಾರತೀಯರು ಹೆಮ್ಮೆ ಪಡುವಂಥ ಸಂಗತಿ ಇದು. ನಮ್ಮ ಸಂಸ್ಕೃತಿಯನ್ನ ಜಗತ್ತೇ ಮೆಚ್ಚಿಕೊಂಡಿದೆಯೆಂದರೆ ಭಾರತೀಯರಾಗಿ ನಿಜಕ್ಕೂ ನಾವು ಹೆಮ್ಮೆ ಪಡಬೇಕು. ಅದರ ಜೊತೆಗೆ ಅದರ ಅಭಿವೃದ್ಧಿ ಹಾಗೂ ಉಳಿವಿಗೆ ನಾವೇನು ಮಾಡ್ತಿದ್ದೇವೆ, ಮಾಡುತ್ತಿದ್ದೇವೆಂಬುದದನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಬಹಳ ಮುಖ್ಯ. ಇನ್ನಾದರೂ ನಾವುಗಳು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗೋ ಬದ್ಲು ನಾವು-ನಮ್ಮದನ್ನ ಉಳಿಸಿ-ಬೆಳೆಸಿದ್ರೆ ಜಗತ್ತೇ ಭಾರತಕ್ಕೆ ಜೈ ಅನ್ನೋದ್ರಲ್ಲಿ ಎರಡು ಮಾತಿಲ್ಲ