ಭಾರತದ ಮಹತ್ವಾಕಾಂಕ್ಷಿ ‘ಚಂದ್ರಯಾನ-3’ ಬುಧವಾರ ಯಶಸ್ವಿಯಾದ ಬೆನ್ನಲ್ಲೇ ಚಂದ್ರನ ಮೇಲಿಳಿದ ‘ವಿಕ್ರಮ್’ ಲ್ಯಾಂಡರ್ ಹಾಗೂ ‘ಪ್ರಜ್ಞಾನ್’ ರೋವರ್‌ಗಳು ಕೆಲಸ ಆರಂಭಿಸಿವೆ.
ಬೆಂಗಳೂರು (ಆ.25): ಭಾರತದ ಮಹತ್ವಾಕಾಂಕ್ಷಿ ‘ಚಂದ್ರಯಾನ-3’ ಬುಧವಾರ ಯಶಸ್ವಿಯಾದ ಬೆನ್ನಲ್ಲೇ ಚಂದ್ರನ ಮೇಲಿಳಿದ ‘ವಿಕ್ರಮ್’ ಲ್ಯಾಂಡರ್ ಹಾಗೂ ‘ಪ್ರಜ್ಞಾನ್’ ರೋವರ್‌ಗಳು ಕೆಲಸ ಆರಂಭಿಸಿವೆ. ಇವು ಭೂಮಿಗೆ ಚಂದ್ರನ ಮೇಲಿನ ಮಹತ್ವದ ಮಾಹಿತಿ ಹಾಗೂ ಚಿತ್ರಗಳನ್ನು ಶೀಘ್ರ ರವಾನಿಸುವ ನಿರೀಕ್ಷೆ ಇದೆ. ಈ ಬಗ್ಗೆ ಗುರುವಾರ ಸಂಜೆ ಟ್ವೀಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’, ‘ಲ್ಯಾಂಡರ್ ಮಾಡ್ಯೂಲ್‌ನ 3 ಪೇಲೋಡ್‌ಗಳನ್ನು ಆನ್ ಮಾಡಲಾಗಿದೆ. ಇಸ್ಲಾ, ರಂಭಾ ಹಾಗೂ ಚೇಸ್ಟ್ ಪೇಲೋಡ್‌ಗಳು ಕಾರ್ಯಾಚರಣೆ ಆರಂಭಿಸಿವೆ’ ಎಂದಿದೆ.
ಇದೇ ವೇಳೆ, ‘ರೋವರ್ ಸಂಚಾರ (ಮೊಬಿಲಿಟಿ) ಕೂಡ ಆರಂಭವಾಗಿದೆ’ ಎಂದು ಅದು ಹೇಳಿದೆ. ಇನ್ನು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಕಕ್ಷೆಗೆ ರವಾನಿಸಿರುವ ಪ್ರೊಪಲ್ಷನ್ ಮಾಡ್ಯೂಲ್‌ನ ಶೇಪ್ ಪೇಲೋಡ್ ಅನ್ನು ಭಾನುವಾರ ಆನ್ ಮಾಡಲಾಗುತ್ತದೆ ಎಂದು ಟ್ವೀಟ್‌ನಲ್ಲಿ ಇಸ್ರೋ ಮಾಹಿತಿ ನೀಡಿದೆ. ಬುಧವಾರ ರಾತ್ರಿಯೇ, ಚಂದ್ರನ ಮೇಲೆ ಲ್ಯಾಂಡ್ ಅದ ಸುಮಾರು ಮೂರೂವರೆ ತಾಸಿನ ಬಳಿಕ ಲ್ಯಾಂಡರ್‌ನಿಂದ ‘ಪ್ರಜ್ಞಾನ್’ ರೋವರ್ ಸುಲಲಿತವಾಗಿ ಹೊರಬಂದಿತ್ತು ಹಾಗೂ ಮೊದಲ ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು.
ಚಂದ್ರಯಾನ ಯಶಸ್ಸಿನ ಹಿಂದೆ ಪ್ರಧಾನಿ ಮೋದಿ ಪ್ರಬಲ ಸ್ಫೂರ್ತಿ: ಸಂಸದ ರಾಘವೆಂದ್ರ
ಇನ್ನೂ 14 ದಿನ ಹೆಚ್ಚುವರಿ ಕಾರ‍್ಯ- ಇಸ್ರೋ ವಿಶ್ವಾಸ: ಭೂಮಿಯ 14 ದಿನಗಳು 1 ಚಂದ್ರನ ದಿನಕ್ಕೆ ಸಮ. ಹೀಗಾಗಿ ಬುಧವಾರದಿಂದ 14 ದಿನ ಕಾಲ ಚಂದ್ರನ ಮೇಲೆ ಅಧ್ಯಯನ ನಡೆಸುವ ಶಕ್ತಿಯು ಪ್ರಜ್ಞಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್‌ಗೆ ಇದೆ. ನಂತರ ಭೂಮಿಯ 14 ದಿನಗಳ ಕಾಲ (ಚಂದ್ರನ 1 ದಿನ) ಚಂದ್ರನಲ್ಲಿ ರಾತ್ರಿ ಸಂಭವಿಸಲಿದ್ದು, ಆಗ ಕೊರೆಯುವ ಚಳಿ ಕಾರಣ ರೋವರ್ ಹಾಗೂ ಲ್ಯಾಂಡರ್‌ಗಳು ನಿಷ್ಕ್ರಿಯಗೊಳ್ಳಬಹುದು ಎಂದು ಆರಂಭದಲ್ಲಿ ವಿಶ್ಲೇಷಿಸಲಾಗಿತ್ತು.
ಚಂದ್ರಯಾನ 3 ಯಶಸ್ಸು: ಬಾಹ್ಯಾಕಾಶದಲ್ಲಿ ಭಾರತವೀಗ ಹೊಸ ಪವರ್ ಸೆಂಟರ್
ಆದರೆ ಚಂದ್ರನಲ್ಲಿ ಸಂಭವಿಸುವ 14 ದಿನಗಳ ರಾತ್ರಿ ಬಳಿಕವೂ ರೋವರ್ ಹಾಗೂ ಲ್ಯಾಂಡರ್ ಸುಸ್ಥಿತಿಯಲ್ಲಿ ಇರುವ ನಿರೀಕ್ಷೆಯಿದೆ. ಹೀಗಾಗಿ ಆ ರಾತ್ರಿ ಕಳೆದ ಬಳಿಕ ಮತ್ತೆ 14 ದಿನ ಕಾಲ ರೋವರ್ ಹಾಗೂ ಲ್ಯಾಂಡರ್‌ಗಳು ಚಂದ್ರನ ಮೇಲೆ ಕಾರಾರಯಚರಣೆ ನಡೆಸುವ ವಿಶ್ವಾಸವಿದೆ ಎಂದು ಇಸ್ರೋ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.