ಟಿಬಿ ಡ್ಯಾಂ ನೀರು ಉಳಿಸಿಕೊಳ್ಳುವ ಪ್ರಯತ್ನ, ಗೇಟ್ ಅಯಸ್ಸು 40 ವರ್ಷ, ಜಲಾಶಯದ್ದು 70 ವರ್ಷ: ಆಂಧ್ರ ತಜ್ಞ ಕನ್ನಯ್ಯ

By Gowthami K  |  First Published Aug 13, 2024, 2:06 PM IST

ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸೋದು ಕಷ್ಟ. 48 ಟನ್  ಭಾರದ ಗೇಟ್ ಒಂದೇ ಬಾರಿ ಇಳಿಸೋದು ಕಷ್ಟವಾಗುತ್ತದೆ. ಐವತ್ತು ಟನ್ ಭಾರದ ಐದು ಪೀಸ್ ಕಬ್ಬಿಣ ಗೇಟ್ ಒಂದೊಂದು ಇಳಿಸುತ್ತೇವೆ ಎಂದು ತಜ್ಞ ಕನ್ನಯ್ಯ ಹೇಳಿದ್ದಾರೆ.


ಹೊಸಪೇಟೆ(ಆ.13): ತುಂಗಭದ್ರಾ ಡ್ಯಾಂನ 19ನೇ ನಂಬರ್‌ ಕ್ರಸ್ಟ್‌ ಗೇಟ್‌ ಅನ್ನು ದುರಸ್ತಿ ಮಾಡುವ ಸಲುವಾಗಿ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಾಣ ಸಂಬಂಧ ಪರಿಣಿತ ಆಂಧ್ರ ಮೂಲದ ಕನ್ನಯ್ಯ ನಾಯ್ಡು  ಅವರು ಮಂಗಳವಾರ  ಜಲಾಶಯ ಪರಿಶೀಲನೆ ಮಾಡಿದ್ದು, ಅವರ ಜೊತೆಗೆ ತುಂಗಭದ್ರಾ ಬೋರ್ಡ್ ಕಾರ್ಯದರ್ಶಿ ಓ.ಕೆ.ಆರ್. ರೆಡ್ಡಿ, ಇನ್ನೊಬ್ಬ ತಜ್ಞ ಟಿವಿಎನ್ ರತ್ನಕುಮಾ‌ರ್, ನೀರಾವರಿ ಇಲಾಖೆ ಕಾರ್ಯದರ್ಶಿ ಸಾಯಿ ಪ್ರಸಾದ್ ಹಾಗೂ ರಾಜ್ಯದ ನೀರಾವರಿ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಕುಲಕರ್ಣಿ  ಎಲ್ಲರ ಜೊತೆಗೂ ಗೇಟ್ ಅಳವಡಿಕೆಯ ವಿಧಾನ, ನೀರಿನ ಮಟ್ಟ ಮತ್ತಿತರ ತಾಂತ್ರಿಕ ಮಾಹಿತಿ ಬಗ್ಗೆ ಸಮಾಲೋಚನೆ ಮಾಡಿದ್ದಾರೆ. ನೀರು ಉಳಿಸಿಕೊಳ್ಳುವುದರ ಬಗ್ಗೆ ಕೂಡ ಕನ್ನಯ್ಯ ಮಾಹಿತಿ ನೀಡಿದ್ದಾರೆ. 

ಸಿಎಂ ಸಿದ್ದರಾಮಯ್ಯ ಬರುವುದಕ್ಕೂ ಮುನ್ನವೇ  ಜಲಾಶಯಕ್ಕೆ  ಕನ್ನಯ್ಯ ನೇತೃತ್ವದ ತಜ್ಞರ ತಂಡ ಆಗಮಿಸಿದ್ದು, ಈ ವೇಳೆ ಮಾತನಾಡಿದ ಅವರು ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸೋದು ಕಷ್ಟ. 48 ಟನ್  ಭಾರದ ಗೇಟ್ ಒಂದೇ ಬಾರಿ ಇಳಿಸೋದು ಕಷ್ಟವಾಗುತ್ತದೆ. ಐವತ್ತು ಟನ್ ಭಾರದ ಐದು ಪೀಸ್ ಕಬ್ಬಿಣ ಗೇಟ್ ಒಂದೊಂದು ಇಳಿಸುತ್ತೇವೆ. ಮೂರು ನಾಲ್ಕು ಕಡೆ ಗೇಟ್ ನಿರ್ಮಾಣವಾಗ್ತಿದೆ. ನಾಳೆಯಿಂದ ಒಂದೊಂದೇ ಪೀಸ್ ಗಳನ್ನು ಹಾಕ್ತೇವೆ. ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನ ಮಾಡ್ತೇವೆ. ಗೇಟ್ ಅಯುಸ್ಸು 40 ವರ್ಷ ಇರುತ್ತದೆ ಇದೀಗ ಜಲಾಶಯಕ್ಕೆ 70  ವರ್ಷವಾಗಿದೆ. ಎಲ್ಲ ರೀತಿಯ ಮೆಂಟೆನೆನ್ಸ್ ಮಾಡಿದ್ದೇವೆ. ಇದೀಗ ಹೊಸ ಪ್ರಯತ್ನ ಮಾಡಿ ನೀರು ನಿಲ್ಲಿಸುತ್ತೇವೆ.ಇದು ಟೆಂಪರ್ ವೆರಿ ವರ್ಕ್. ನೀರು ಕಡಿಮೆಯಾದ ಮೇಲೆ ‌ಮತ್ತೊಮ್ಮೆ ಗೇಟ್ ಕೂರಿಸಬೇಕು ಎಂದಿದ್ದಾರೆ.

Tap to resize

Latest Videos

undefined

ತುಂಗಭದ್ರಾ ನೀರು ಉಳಿಸಲು ಗ್ರೇಟ್‌ ಐಡಿಯಾ ಕೊಟ್ಟ ತಜ್ಞ ಕನ್ನಯ್ಯ, ನೀರು ಪೋಲಾಗುತ್ತಿರುವುದಕ್ಕೆ ಮರುಕ

105tmc ನೀರಿನ ಸಾಮಾರ್ಥ್ಯ ಇರುವ ಜಲಾಶಯದಲ್ಲಿ  ಒಟ್ಟು 20 ಟಿಎಂಸಿ ನೀರು ಹರಿದು ಹೋಗಿದೆ. ಇಂದು ಸಂಜೆ ವೇಳೆಗೆ ಇನ್ನೂ ಹತ್ತು ಟಿಎಂಸಿ ನೀರು ಹೊರ ಹೊಗಲಿದೆ. ಈಗಿರುವ ನೀರಿನ ಪ್ರಮಾಣದಲ್ಲಿ 25 ಟಿಎಂಸಿ ನೀರು ಹೊರ ಹೋಗ್ತಿದ್ದಂತೆ ಗೇಟ್ ಅಳವಡಿಸುವ ಮೊದಲ ಕಾರ್ಯ ಇಂದೇ ಆರಂಭವಾಗಲಿದೆ. ಹೀಗಾಗಿ ಜಲಾಶಯಕ್ಕೆ ಎರಡು ಬೃಹತ್ ಕ್ರೇನ್ ಗಳು ಬಂದು ನಿಂತಿವೆ. ಈಗಾಗಲೇ ನಾರಾಯಣ ಇಂಜಿನೀಯರಿಂಗ್ ಹಾಗೂ ಹಮೀದ್ ಇಂಜಿನಿಯರಿಂಗ್ ನಲ್ಲಿ ಗೇಟ್ ನಿರ್ಮಾಣವಾಗಿದ್ದು, ಸಂಜೆ ಗೇಟ್‌ ಜಲಾಶಯದ ಬಳಿ ತಲುಪಲಿದೆ.   

ಕ್ರಸ್ಟ್ ಗೇಟ್ ಗಳ ಮೇಲಿರೋ ಸೇತುವೆಗಳ ಮೇಲೆ ವಾಹನ ಸಂಚಾರ ಹೆಚ್ಚು ಆಗಬಾರದು ಅನ್ನೋ ಕಾರಣಕ್ಕೆ ಬ್ಯಾಟರಿ ಚಾಲಿತ ವಾಹನಗಳನ್ನು ತರಲಾಗಿದೆ. ಹಂಪಿಯ ಕಲ್ಲಿನ ತೇರಿನ ಬಳಿ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಇರೋ ಬ್ಯಾಟರಿ ಚಾಲಿತ ವಾಹನ ಇದಾಗಿದೆ. ಹೈದರಾಬಾದ್ ನ ತಜ್ಞ ಕನ್ನಯ್ಯ ನಾಯ್ಡು ಈಗಾಗಲೇ ಕ್ರಸ್ಟ್‌ ಗೇಟ್ ಬಳಿ ಇದ್ದು, ಸಿದ್ದಗೊಂಡ ಕ್ರಸ್ಟ್‌ ಗೇಟ್ ಅಳವಡಿಕೆ ಬಗ್ಗೆ ಪರೀಶಿಲನೆ  ಮಾಡುತ್ತಿದ್ದಾರೆ. 

ರೈಲು ಟ್ರ್ಯಾಕ್ ಮಾದರಿಯಲ್ಲಿ ಫ್ಲಾಟ್ ಫಾರ್ಮ್‌ಗಳನ್ನು ನಿರ್ಮಾಣ ಮಾಡಿ ಕ್ರೇನ್ ಸಹಾಯದಿಂದ ನಿಯಮಿತ ತೂಕದ ಗೇಟ್ ಗಳನ್ನು ಹಂತಹಂತವಾಗಿ ಅಳವಡಿಕೆ ಮಾಡಲು ಪ್ರಯತ್ನಿಸಲಾಗುತ್ತದೆ. ಮೊದಲು ಒಂದು ಬದಿಯಲ್ಲಿ ಅಳವಡಿಕೆಯಾಗುವ ಗೇಟ್ . ನೀರಿನ ರಭಸ, ಗೇಟ್ ತಡೆಯುವಿಕೆ ಆಧಾರದ ಮೇಲೆ‌ ಹಂತ ಹಂತವಾಗಿ ಗೇಟ್ ಆಳವಡಿಸುವ ಸಾಧ್ಯತೆ. ಎಸ್ ಡಿಆರ್ ಎಫ್ ಮುಳುಗು ತಜ್ಞರು  ಕೂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ತುಂಗಭದ್ರಾ ಕ್ರಸ್ಟ್ ಗೇಟ್ ಮುರಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಪರಿಶೀಲನೆ  ಮಾಡಿದರು. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮಿರ್ ಅಹ್ಮದ್ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಡಗಿ  ಸಾಥ್ ನೀಡಿದರು. ಸ್ಥಳ ಪರಿಶೀಲನೆ ಮಾಡಿದ ಬಳಿಕ ಅಧಿಕಾರಿಗಳ ಜೊತೆಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದರು.

ವಯನಾಡು ಭೂಕುಸಿತದ ಬಳಿಕ ಎಚ್ಚೆತ್ತ ಕರ್ನಾಟಕ, ಕುದುರೆಮುಖದಲ್ಲಿ ಒಂದು ಅಕ್ರಮ ರೆಸಾರ್ಟ್‌ ಪತ್ತೆ!

ತುಂಗಭದ್ರಾ ಜಲಾಶಯ ಗಟ್ಟಿಯಾಗಿದೆ. ಸುಮಾರು 6.5 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡುವ ಸಾಮರ್ಥ್ಯ ಇದ್ದು, ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ. ಈಗ ನೀರು ಉಳಿಸಿಕೊಂಡು ಮುರಿದಿರುವ ಕ್ರಸ್ಟ್ ಗೇಟ್ ದುರಸ್ತಿ ಮಾಡುವ ಪ್ರಯತ್ನ ಸಾಧ್ಯವಿಲ್ಲವಾದ್ದರಿಂದ ನೀರು ತೆರವು ಮಾಡಿಯೇ ದುರಸ್ತಿ ಮಾಡಬೇಕಾಗಿದೆ ಎಂದು ತುಂಗಭದ್ರಾ ಬೋರ್ಡ್ ಕಾರ್ಯದರ್ಶಿ ಓ.ಕೆ.ಆರ್. ರೆಡ್ಡಿ ತಿಳಿಸಿದ್ದಾರೆ. 

ತುಂಗಭದ್ರಾ ಕಾಡಾ ಪ್ರಭಾರಿ ಮುಖ್ಯ ಅಭಿಯಂತರ ಬಸವರಾಜ ಅವರು ಮಾತನಾಡಿ, 19ನೇ ಕ್ರಸ್ಟ್ ಗೇಟ್ ತುಂಡಾಗಿ ಒಂದೇ ಗೇಟ್‌ನಲ್ಲಿ ನೀರು ಹೋಗುತ್ತಿದ್ದರಿಂದ ಒತ್ತಡವಾಗಿ, ಜಲಾಶಯಕ್ಕೆ ಸಮಸ್ಯೆಯಾಗುತ್ತಿತ್ತು. ಇದನ್ನು ತಪ್ಪಿಸಲು ಇತರ ಗೇಟ್‌ಗಳ ಮೂಲಕ ನೀರು ಬಿಡಲಾಗಿದೆ. ಜಲಾಶಯದ 69 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಘಟನೆ ನಡೆದಿದೆ. ಆದರೆ, ಜಲಾಶಯಕ್ಕೆ ಗಂಡಾಂತರವಿಲ್ಲ ಎಂದಿದ್ದಾರೆ.

click me!