ಒಂದೊಂದು ಘಟನೆಗೂ ಒಂದೊಂದು ಕಾರಣ ಅಂತಾ ಇರುತ್ತೆ ಜನರಲೈಸ್ ಮಾಡೋಕೆ ಆಗುತ್ತಾ? ಅವರ ಕಾಲದಲ್ಲಿ ಎಷ್ಟು ಮರ್ಡರ್ ಆಗಿತ್ತು ಅಂತಾ ಹೇಳಿದ್ಮೇಲೆ ಯಾವ ಸರ್ಕಾರದಲ್ಲಿ ಸುರಕ್ಷತೆ ಇತ್ತು ಅನ್ನೋದು ತಿಳಿಯುತ್ತೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ತಿಳಿಸಿದರು.
ತುಮಕೂರು (ಮೇ.18): ಒಂದೊಂದು ಘಟನೆಗೂ ಒಂದೊಂದು ಕಾರಣ ಅಂತಾ ಇರುತ್ತೆ ಜನರಲೈಸ್ ಮಾಡೋಕೆ ಆಗುತ್ತಾ? ಅವರ ಕಾಲದಲ್ಲಿ ಎಷ್ಟು ಮರ್ಡರ್ ಆಗಿತ್ತು ಅಂತಾ ಹೇಳಿದ್ಮೇಲೆ ಯಾವ ಸರ್ಕಾರದಲ್ಲಿ ಸುರಕ್ಷತೆ ಇತ್ತು ಅನ್ನೋದು ತಿಳಿಯುತ್ತೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ತಿಳಿಸಿದರು.
ರಾಜ್ಯದಲ್ಲಿ ಕ್ರೈಂ ರೇಟ್ ಹೆಚ್ಚಳ ಕುರಿತಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, 2022-23 ರಲ್ಲಿ ಎಷ್ಟಿತ್ತು. ಕೇವಲ ನಾಲ್ಕು ತಿಂಗಳ ಬಗ್ಗೆ ಮಾತ್ರ ಹೇಳೋದು ಅಲ್ಲ. ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ. ಇವರನ್ನು ಹೇಳ್ಕೊಂಡು, ಕೇಳ್ಕೊಂಡು ಸರ್ಕಾರ ಕಾನೂನು ಸುವ್ಯವಸ್ಥೆ ಮಾಡೋಕೆ ಆಗೊಲ್ಲ. ಏನು ಕ್ರಮ ಬೇಕಾದ್ರೂ ತಗೊಳ್ತೇವೆ ಎಂದು ಉಡಾಫೆಯಾಗಿ ಉತ್ತರಿಸಿದರು.
undefined
ನೇಹಾ, ಅಂಜಲಿ ಕೊಲೆ ಸಮಾಜಕ್ಕೆ ಒಳ್ಳೆ ವಿಚಾರವಲ್ಲ: ಸಚಿವ ಸಂತೋಷ್ ಲಾಡ್
ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿಯವರು ಎಷ್ಟೇ ಪ್ರಯತ್ನ ಮಾಡಿದ್ರು, ಕಂಟ್ರೋಲ್ ಮಾಡೋ ಶಕ್ತಿ ಸರ್ಕಾರಕ್ಕಿದೆ. ನಾವು ಹತೋಟಿಗೆ ಪ್ರಯತ್ನ ಮಾಡ್ತಿವಿ. ಡೊಮೆಸ್ಟಿಕ್ ವಿಚಾರಗಳೇ ಬೇರೆ. ಸಂದರ್ಭಾನುಸಾರವಾಗಿದೆ, ಸಂದರ್ಭಾನುಸಾರವೇ ಉತ್ತರ ಕೊಟ್ಟಿದ್ದೇವೆ. ಯಾರೇ ಕಾನೂನು ಸುವ್ಯವಸ್ಥೆ ಹಾಳುಮಾಡಲು ಪ್ರಯತ್ನ ಮಾಡಿದ್ರೂ ನಾವು ಅದನ್ನ ಬಿಡೊಲ್ಲ ಶಾಂತಿಯನ್ನ ಕಾಪಾಡ್ತೇವೆ ಎಂದರು ಇದೇ ವೇಳೆ ಪ್ರಜ್ವಲ್ ಪ್ರಕರಣದಲ್ಲಿ ದೇವರಾಜೇಗೌಡ 100 ಕೋಟಿ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಅದನ್ನೆಲ್ಲ ಎಸ್‌ಐಟಿ ನೋಡಿಕೊಳ್ತದೆ. ಅವರು ಸಾಧಕ ಬಾಧಕಗಳನ್ನು ನೋಡಿ ತನಿಖೆ ಮಾಡ್ತಾರೆ. ಹಾಗಾದ್ರೆ ಅವರು ಅಲ್ಲೇ ಇರಬೇಕಾಗುತ್ತದೆ ಎಂದು ನಕ್ಕ ಗೃಹಸಚಿವರು.
ಅಂಜಲಿ ಹತ್ಯೆ ಆರೋಪಿ ಬಂಧನ ಆಗಿದೆ, ಮುಲಾಜು ಇಲ್ಲದೆ ಕಾನೂನು ಕ್ರಮ: ಪರಮೇಶ್ವರ
ಹೇಮಾವತಿ ಲಿಂಕ್ ಕೆನಾಲ್ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲೆಗೆ ಕುಡಿಯುವ ನೀರಿಗಾಗಿ ಹೇಮಾವತಿ ನಾಲೆಯಿಂದ 24 tmc ಅಲೋಕೇಷನ್ ಇದೆ. ಆದ್ರೆ ಎಂದು ಕೂಡ 18-19 tmc ಮೇಲೆ ಹರಿದಿಲ್ಲ.ಹಾಸನ ಜಿಲ್ಲೆಯಿಂದ ನಮಗೆ 18-19 tmc ಬಂದಿದೆ. ಇದು ಸೆಮಿಡ್ರೈವ್ ಕುಡಿಯುವ ನೀರಿಗೆ ಹಂಚಿಕೆ ಆದ ಯೋಜನೆಯಾಗಿದೆ. ಅದೇ ರೀತಿ ಕುಣಿಗಲ್ ಕೆರೆಗೂ ಇದೆ. ಹೆಬ್ಬೂರು ಭಾಗಕ್ಕೆ ಇದೆ. ಈ ಮಧ್ಯೆ ಸರ್ಕಾರದ ಮುಂದೆ, ಗುಬ್ಬಿ ಬಳಿ 70 ಕಿಲೋ ಮೀಟರ್ ನಿಂದ ಕುಣಿಗಲ್ ಗೆ ನೇರವಾಗಿ ತೆಗೆದುಕೊಂಡು ಹೋಗುವ ಬಗ್ಗೆ ಪ್ರಸ್ತಾಪ ಬಂದಿದೆ. ಯೋಜನೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಾರಿ ಸರ್ಕಾರ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿ 1000 ಕೋಟಿ ಅಲೋಕೆಶನ್ ಕೊಟ್ಟಿದ್ದೆ. ಎಕ್ಸ್ ಪ್ರೆಸ್ ಕೆನಾಲ್ ನಿರ್ಮಾಣಕ್ಕೆ ಸರ್ಕಾರ ತಿರ್ಮಾನ ಮಾಡಿದೆ. ಇಲಾಖೆ ಟೆಂಡರ್ ಕರೆದು ಕೆಲಸ ಮಾಡ್ತಿದ್ದಾರೆ. ಗುಬ್ಬಿ ತುರುವೇಕೆರೆ ಭಾಗದ ರೈತರಿಗೆ ತೊಂದರೆ ಆಗಲಿದೆ, ನಮಗೆ ನೀರು ಸರಿಯಾಗಿ ಸಿಗಲ್ಲ ಅಂತಾ ಹೇಳಿದ್ದಾರೆ. ನನಗೂ ಕೂಡ ಮನವಿ ಕೊಟ್ಟಿದ್ದಾರೆ. ಕ್ಯಾಬಿನೆಟ್ ನಲ್ಲಿ ನಾನು ರಾಜಣ್ಣ ಕೂಡ ತೊಂದರೆ ಆಗುತ್ತೆ ಅಂತಾ ಅಭಿಪ್ರಾಯ ತಿಳಿಸಿದ್ದೇವೆ. ಆದರೆ ಕ್ಯಾಬಿನೆಟ್ ನಮ್ಮ ಇಬ್ಬರದ್ದೇ ಅಲ್ಲ ಎಂದರು.