ಇಂಥ ಹತ್ಯೆ ಇಡೀ ವ್ಯವಸ್ಥೆಗೇ ಬೆದರಿಕೆ; ಕಲಬುರಗಿ ವಕೀಲ ಪಾಟೀಲ ಹತ್ಯೆಗೆ ಹೈಕೋರ್ಟ್‌ ಕಳವಳ

By Kannadaprabha News  |  First Published Dec 12, 2023, 4:51 AM IST

ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ವಕೀಲ ಈರಣ್ಣಗೌಡ ಪೊಲೀಸ್‌ ಪಾಟೀಲ ಅವರ ಹತ್ಯೆ ಘಟನೆ ನಿಜಕ್ಕೂ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.


ಬೆಂಗಳೂರು (ಡಿ.12): ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ವಕೀಲ ಈರಣ್ಣಗೌಡ ಪೊಲೀಸ್‌ ಪಾಟೀಲ ಅವರ ಹತ್ಯೆ ಘಟನೆ ನಿಜಕ್ಕೂ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

ಸೋಮವಾರ ಸಿವಿಲ್‌ ವ್ಯಾಜ್ಯವೊಂದರ ಸಂಬಂಧ ವಿಚಾರಣೆ ವೇಳೆ ಈರಗಣ್ಣ ಗೌಡರ ಹತ್ಯೆ ಘಟನೆಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರು, 20 ಎಕರೆ ಜಾಗದ ಮೇಲಿನ ಹಕ್ಕಿನ ವಿಚಾರ ಸಂಬಂಧ ಈ ಕೊಲೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Tap to resize

Latest Videos

ಅಲ್ಲದೆ, ಇಂತಹ ಘಟನೆಗಳನ್ನು ಮಟ್ಟಹಾಕದೆ ಹೋದರೆ ಮುಂದಿನ 20 ವರ್ಷಗಳ ನಂತರ ಸಿವಿಲ್ ವ್ಯಾಜ್ಯಗಳು ಕೋರ್ಟ್‌ಗೆ ದಾಖಲಾಗುವುದು ಅನುಮಾನ, ಕೊಲೆಗಡುಕರು ಮುಂದೊಂದು ದಿನ ಶ್ರೀಸಾಮಾನ್ಯರನ್ನು ಬೆದರಿಸಿ ಸಿವಿಲ್‌ ವ್ಯಾಜ್ಯಗಳನ್ನು ತಾವೇ ಇತ್ಯರ್ಥ ಮಾಡಿಕೊಳ್ಳುತ್ತಾರೆ. ಈ ಹೇಯ ಕೃತ್ಯಗಳು ನಿಜಕ್ಕೂ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ನುಡಿದರು

ಕಲಬುರಗಿ ವಕೀಲನ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಬಂಧನ

ಹತ್ಯೆಗೆ ಸುಪಾರಿ ನೀಡಿದ್ದ ದಂಪತಿ ಬಂಧನ: 

ನಗರದ ಜೀವರ್ಗಿ ರಸ್ತೆಯ ಸಾಯಿ ಮಂದಿರ ಬಳಿಯ ಅಪಾರ್ಟ್‍ಮೆಂಟ್ ಬಳಿ ಡಿ.7ರಂದು ನಡೆದ ಹೈಕೋರ್ಟ್‌ ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ ಹತ್ಯೆಗೆ ಸಂಬಂಧಿಸಿ ಅವರ ಸೋದರ ಸಂಬಂಧಿ ನೀಲಕಂಠಗೌಡ ಪೊಲೀಸ್‌ ಪಾಟೀಲ್‌ ದಂಪತಿಯನ್ನು ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಲದ ಆಸ್ತಿ ವಿಚಾರವಾಗಿ ಕೊಲೆ ನಡೆದಿದ್ದು, ನೀಲಕಂಠಗೌಡ ಮತ್ತವರ ಪತ್ನಿ ಸಿದ್ದಮ್ಮ ಸುಪಾರಿ ಕೊಟ್ಟಿದ್ದು, ಕೊಲೆ ನಡೆದ ವೇಳೆ ದತ್ತಾತ್ರೇಯನ ಕ್ಷೇತ್ರ ಗಾಣಗಾಪುರಕ್ಕೆ ತೆರಳಿದ್ದ ವಿಚಾರ ಪೊಲೀಸರ ತನಿಖೆಯಿಂದ ಬಯಲಾಗಿದೆ. ಕೊಲೆ ವೇಳೆ ಬಂಧಿತರಾಗಿರುವ ಮೂವರು ಹಂತಕರ ಪೈಕಿ ಮಲ್ಲೀನಾಥ ಎಂಬಾತ ಕೊಲೆ ಮಾಡಿದ ನಂತರ ನೇರವಾಗಿ

ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹೈಕೋರ್ಟ್‌ ವಕೀಲನ ಭೀಕರ ಹತ್ಯೆ

ನೀಲಕಂಠ ಗೌಡರ ಮನೆಗೆ ಹೋಗಿ 50 ಸಾವಿರ ರು.ಹಣ ಪಡೆದು ಪರಾರಿಯಾಗಿದ್ದರು. ಈ ಮೂವರು ಜೇವರ್ಗಿಯ ಲಾಡ್ಜ್‌ನಲ್ಲಿ ತಂಗಿದ್ದಾಗ ಕಲಬುರಗಿ ವಿವಿ ಠಾಣೆ ಪೊಲೀಸರು ಬಂಧಿಸಿದ್ದರು. ಈರಣ್ಣಗೌಡ ಮತ್ತು ಅವರ ಸಹೋದರ ಸಂಬಂಧಿಗಳ ನಡುವೆ ಆಸ್ತಿ ವಿವಾದವಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ಕೇಸ್ ನಡೆದಿತ್ತು.

click me!