Chamarajanagar: ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆಯಿಂದ ಫೈರ್‌ಲೈನ್!

By Govindaraj S  |  First Published Jan 27, 2023, 11:36 PM IST

ಬಂಡಿಪುರ ರಾಷ್ಟ್ರೀಯ ಉದ್ಯಾನವನ ಹಲವು ವಿಚಾರಗಳಿಂದ ಸುದ್ದಿಯಾಗುತ್ತೆ. ಅದರಲ್ಲೂ ನಾಲ್ಕು ವರ್ಷಗಳ ಹಿಂದೆ ಬೆಂಕಿಯಿಂದ ನಲುಗಿ ಹೋಗಿದ್ದ ಹುಲಿಗಳ ತಾಣ. ಹಾಗಾಗಿ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಈ ವರ್ಷ ಈ ಬಾರಿ ಒಂದಲ್ಲ, ಎರಡಲ್ಲ, 2780 ಕಿಲೋಮೀಟರ್  ಬೆಂಕಿ ರೇಖೆ  ನಿರ್ಮಾಣ ಮಾಡಿದ್ದು, ಸದ್ಯ ಕಾಡ್ಗಿಚ್ಚಿನ ಭೀತಿ ದೂರವಾಗಿದೆ. 


ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಜ.27): ಬಂಡಿಪುರ ರಾಷ್ಟ್ರೀಯ ಉದ್ಯಾನವನ ಹಲವು ವಿಚಾರಗಳಿಂದ ಸುದ್ದಿಯಾಗುತ್ತೆ. ಅದರಲ್ಲೂ ನಾಲ್ಕು ವರ್ಷಗಳ ಹಿಂದೆ ಬೆಂಕಿಯಿಂದ ನಲುಗಿ ಹೋಗಿದ್ದ ಹುಲಿಗಳ ತಾಣ. ಹಾಗಾಗಿ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಈ ವರ್ಷ ಈ ಬಾರಿ ಒಂದಲ್ಲ, ಎರಡಲ್ಲ, 2780 ಕಿಲೋಮೀಟರ್  ಬೆಂಕಿ ರೇಖೆ  ನಿರ್ಮಾಣ ಮಾಡಿದ್ದು, ಸದ್ಯ ಕಾಡ್ಗಿಚ್ಚಿನ ಭೀತಿ ದೂರವಾಗಿದೆ. ಅಮೂಲ್ಯ ಅರಣ್ಯ ಸಂಪತ್ತನ್ನು ಬೆಂಕಿಯಿಂದ ರಕ್ಷಿಸಲು  ಬೆಂಕಿ ರೇಖೆ ಜೊತೆಗೆ ಏನೆಲ್ಲಾ ಕ್ರಮ ವಹಿಸಲಾಗಿದೆ ಅಂತಿರಾ ಈ ಸ್ಟೋರಿ ನೋಡಿ. ಕಾಡಿನ ಒಳಗೆ ಬೆಂಕಿ ಹೆಚ್ಚುತ್ತಿರುವ ಅರಣ್ಯ ಸಿಬ್ಬಂದಿ, ಮತ್ತೊಂದೆಡೆ ಬೆಂಕಿ ನಂದಿಸುತ್ತಿರುವ ಜನರು ಇವೆಲ್ಲ ನಮಗೆ ಕಾಣ ಸಿಕ್ಕಿದ್ದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ. 

Tap to resize

Latest Videos

undefined

ಈ ಪ್ರಕ್ರಿಯೆಗೆ ಫೈರ್ ಲೈನ್ (ಬೆಂಕಿ ರೇಖೆ) ನಿರ್ಮಾಣ ಎನ್ನುತ್ತಾರೆ. ಅರಣ್ಯದ ಒಳಗೆ ರಸ್ತೆಯ ಇಕ್ಕೆಲಗಳಲ್ಲಿ ಒಣಗಿರುವ ಹುಲ್ಲು, ಕುರುಚಲು ಗಿಡಗಳನ್ನು ಅರಣ್ಯ ಇಲಾಖೆ ಬೆಂಕಿ ಹಾಕಿ ಭಸ್ಮ ಮಾಡ್ತಿದೆ. ಒಂದು ವೇಳೆ ಕಾಡ್ಗಿಚ್ಚು ಸಂಭವಿಸಿದರೆ ಅದನ್ನ ನಿಯಂತ್ರಣ ಮಾಡಲು ಇದು ಸಹಕಾರಿಯಾಗಲಿದೆ. ಏಕೆಂದರೆ ಒಂದು ಬಾರಿ ಬೆಂಕಿ ಹಾಕಿದರೆ ಸುತ್ತ ಹುಲ್ಲಿಗೆ ಮತ್ತೆ ಬೆಂಕಿ ತಾಕುವುದಿಲ್ಲ. ಹೀಗಾಗಿ ಮೊದಲು ಬೆಂಕಿ ಹಾಕಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.  ಕಳೆದ ನಾಲ್ಕು ವರ್ಷಗಳ ಹಿಂದೆ 4 ಸಾವಿರ ಹೆಕ್ಟೇರ್‌ಗು ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಹಾಗಾಗಿ ಕಳೆದ ವರ್ಷದಿಂದ  ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಸಿ.ಟಿ.ರವಿಗೆ ಜೆಡಿಎಸ್ ಟಿಕೆಟ್ ಆಫರ್ ಕೊಟ್ಟ ಬಂಡೆಪ್ಪ ಖಾಶೆಂಪೂರ್

ಬಂಡೀಪುರದ ನಡುವೆ ಹಾದು ಹೋಗುವ ರಸ್ತೆಗಳು ಅರಣ್ಯದಲ್ಲಿನ ಸಫಾರಿ ಮಾರ್ಗ, ಗೇಮ್ ರಸ್ತೆಗಳು ಸೇರಿದಂತೆ ಈ ಬಾರಿ ಬಂಡಿಪುರ ವ್ಯಾಪ್ತಿಯಲ್ಲಿ 2780 ಕಿ.ಮೀ. ಬೆಂಕಿ ರೇಖೆ ಗುರುತಿಸಿದ್ದು, ಶೇ. 90 ರಷ್ಟು ಕೆಲಸ ಮುಗಿದಿದೆ. ಹೊಸದಾಗಿ 125 ಫೈರ್ ಲೈನ್ ಗಳನ್ನ ಗುರುತಿಸಿದ್ದೇವೆ ಅಂತಾರೆ ಬಂಡಿಪುರ ಸಿಎಫ್. ಇನ್ನೂ ಫೈರ್ ಲೈನ್ ಕೆಲಸ ನಿರ್ವಹಣೆ ಕೇವಲ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ಜನವರಿಯಿಂದ ಮೇ ವರೆಗೆ ದಿನಗೂಲಿ ಆಧಾರದ ಮೇಲೆ ಕಾರ್ಮಿಕರನ್ನ ನೇಮಕ ಮಾಡಿಕೊಳ್ಳಲಾಗುತ್ತೆ. ಬಂಡಿಪುರ ವ್ಯಾಪ್ತಿಯಲ್ಲಿ 435 ಫೈರ್ ವಾಚರ್ ಗಳ ನೇಮಕ ಮಾಡಿಕೊಳ್ಳಲಾಗಿದೆ. ಅರಣ್ಯ ಇಲಾಖೆ ವಾಹನದಲ್ಲೇ ಬರುವ ಇವರು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕೆಲಸ ಮಾಡ್ತಾರೆ. 

ಸಣ್ಣಪುಟ್ಟ ಗಿಡಗಂಟಿಗಳನ್ನ ಮೊದಲು ಕಡಿದು ಬಳಿಕ ಬೆಂಕಿ ಹಾಕಲಾಗುತ್ತೆ. ಕಾಡಲ್ಲಿ ಸಿಗುವ ಸೊಪ್ಪು ತಗೊಂಡು ಬೆಂಕಿ ನಂದಿಸುವ ಕೆಲಸವನ್ನ ಒಟ್ಟಾಗಿ ಮಾಡ್ತಿದಾರೆ. ಬಂಡೀಪುರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 76ರ ಇಕ್ಕೆಲೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸಿಂಪಡಣೆ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ಪ್ರಯಾಣಿಕರು ಒಂದು ವೇಳೆ ಬೀಡಿ ಸಿಗರೇಟು ಸೇದಿ ಬೀಸಾಡಿದರೂ ಬೆಂಕಿ ಹೊತ್ತಿಕೊಳ್ಳುವ ಅಪಾಯ ಕಡಿಮೆಯೇ ಅಗಲಿದೆ ಹಾಗು ಇಕ್ಕೆಲಗಳಲ್ಲಿ ಹಸಿರು ಚಿಗುರಿ ಬೆಂಕಿ ಹರಡುವುದು ತಪ್ಪಲಿದೆ. 

ಬಾಬಾ ಕನಸಿನಲ್ಲಿ ಬಂದಿದ್ದಕ್ಕೆ ಭವ್ಯ ಸಾಯಿ ಮಂದಿರ ನಿರ್ಮಿಸಿದ ಉದ್ಯಮಿ ಮಹಾರಾಜ್ ದಿಗ್ಗಿ

ಅರಣ್ಯಕ್ಕೆ ಬೆಂಕಿ ಬಿದ್ದರೆ ಅಮೂಲ್ಯ ಅರಣ್ಯ ಸಂಪತ್ತು ನಾಶವಾಗಲಿದೆ. ಸಹಜವಾಗಿಯೇ ವನ್ಯಜೀವಿಗಳು ಕಾಡಂಚಿನ ಗ್ರಾಮ ಇಲ್ಲವೇ ಜಮೀನುಗಳಿಗೆ ಲಗ್ಗೆ ಇಟ್ಟು ಪ್ರಾಣಿ ಮಾನವ ಸಂಘರ್ಷ ಸಹಜವಾಗಿಯೇ ಉಂಟಾಗಲಿದೆ. ಹಾಗಾಗಿ ಅರಣ್ಯಕ್ಕೆ  ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸುವುದು ಸಾರ್ವಜನಿಕರ ಜವಬ್ದಾರಿಯೂ ಆಗಿದೆ. ಕಿಡಿಗೇಡಿಗಳ ಮೇಲೆ ಕಣ್ಣಿಡಲು ಹಾಗು ಬೆಂಕಿಕಾಣಿಸಿಕೊಂಡ ಸಂದರ್ಭದಲ್ಲಿ ತಕ್ಷಣ ಕ್ರಮವಹಿಸಲು ಬಂಡೀಪುರ  ಹುಲಿಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಹಾಗು ಅರಣ್ಯದ ರಸ್ತೆಗಳಲ್ಲಿ ಸಿಬ್ಬಂದಿಯ ಗಸ್ತು ಹೆಚ್ಚಿಸಲಾಗಿದೆ ಒಟ್ಟಾರೆ ಬೆಂಕಿ ಬಿದ್ದಾಗ ಕ್ರಮ ಕೈಗೊಳ್ಳುವ ಬದಲು ಮೊದಲೇ ಸಮರೋಪಾದಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊ ಕೈಗೊಳ್ಳಲಾಗುತ್ತಿದೆ.

click me!