ಬರ, ಕರೆಂಟ್ ಕಣ್ಣಾಮುಚ್ಚಾಲೆ ನಡುವೆ ರೈತ ಸ್ನೇಹಿ ಯೋಜನೆ ಸ್ಥಗಿತ: ಅನ್ನದಾತರ ಆಕ್ರೋಶ!

By Govindaraj S  |  First Published Nov 11, 2023, 9:43 PM IST

ಮಳೆ ಕೊರೆತೆಯಿಂದ ಉತ್ತರ ಕರ್ನಾಟಕದಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿ ಮುಂಗಾರು ಫಸಲು ಕಳೆದುಕೊಂಡಿರುವ ನಾಡಿನ ಅನ್ನದಾತರಿಗೆ ವಿದ್ಯುತ್ ಕ್ಷಾಮದಿಂದ ನೀರಾವರಿ ಪಂಪಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಕೈ ಸೇರಬೇಕಿದ್ದ ಅಲ್ಪಸ್ವಲ್ಪ ಬೆಳೆಯನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. 


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ನ.11): ಮಳೆ ಕೊರೆತೆಯಿಂದ ಉತ್ತರ ಕರ್ನಾಟಕದಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿ ಮುಂಗಾರು ಫಸಲು ಕಳೆದುಕೊಂಡಿರುವ ನಾಡಿನ ಅನ್ನದಾತರಿಗೆ ವಿದ್ಯುತ್ ಕ್ಷಾಮದಿಂದ ನೀರಾವರಿ ಪಂಪಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಕೈ ಸೇರಬೇಕಿದ್ದ ಅಲ್ಪಸ್ವಲ್ಪ ಬೆಳೆಯನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ರೈತರ ನೀರಾವರಿ ಪಂಪಸೆಟ್ ಗಳಿಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸರ್ಕಾರಿದಂದ ಸಿಗುತ್ತಿದ್ದ ಉಚಿತ ವಿದ್ಯುತ್ ಮೂಲಸೌಕರ್ಯಗಳನ್ನು ಒದಗಿಸುವ ಯೋಜನೆಗಳನ್ನು ರಾಜ್ಯ ಸರ್ಕಾರ ದಿಢೀರ್ ನಿಲ್ಲಿಸಿದ್ದು, ರೈತರಿಗೆ ಗಾಯದ ಮೇಲೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಂತಾಗಿದೆ.  

Tap to resize

Latest Videos

ವಿದ್ಯುತ್ ಮೂಲಸೌಕರ್ಯ ಯೋಜನೆ ಬಂದ್ ; ರೈತರು ಕಂಗಾಲು: ರೈತರು ನೀರಾವರಿ ಪಂಪಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಈ ಹಿಂದೆ ರಾಜ್ಯ ಸರ್ಕಾರದಿಂದ 'ಅಕ್ರಮ ಸಕ್ರಮ' ಮತ್ತು 'ಶೀಘ್ರ ಸಂಪರ್ಕ' ಯೋಜನೆಗಳಡಿ ವಿದ್ಯುತ್ ಪರಿವರ್ತಕ ಸೇರಿ ಮೂಲಸೌಕರ್ಯಗಳನ್ನು ಭಾಗಶಃ ಸರ್ಕಾರವೇ ಉಚಿತವಾಗಿ ಒದಗಿಸುತ್ತಿತ್ತು. ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕಾಗಿ ಕೊಳವೆಬಾವಿ ರೈತರು 24 ಸಾವಿರ ರೂಪಾಯಿ ಭದ್ರತಾ ಶುಲ್ಕ ಪಾವತಿಸಬೇಕಿತ್ತು. ನಂತರ ಸರ್ಕಾರವೇ ವಿದ್ಯುತ್ ಪರಿರ್ತಕ, ಸುಮಾರು 500 ಮೀಟರ್ ವರೆಗೂ ವಿದ್ಯುತ್ ಕಂಬ ಎಳೆದು ಕೊಡುತ್ತಿತ್ತು. ಇನ್ನೂ ಶೀಘ್ರ ಸಂಪರ್ಕ ವಿದ್ಯುತ್ ಯೋಜನೆಯಡಿ ರೈತರ ಭದ್ರತಾ ಠೇವಣಿಗೆ ವಿದ್ಯುತ್ ಪರಿವರ್ತಕ ಮಾತ್ರ ಸರ್ಕಾರ ಉಚಿತವಾಗಿ ನೀಡಿ, ವಿದ್ಯುತ್ ಕಂಬ, ತಂತಿಯನ್ನು ರೈತರೆ ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳಬೇಕಿತ್ತು. ಈಗ ಸರ್ಕಾರ ಈ ವಿದ್ಯುತ್ ಯೋಜನೆಗಳನ್ನು ದಿಡೀರ್ ಸ್ಥಗಿತಗೊಳಿಸಿದ್ದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.  

ಈಗ 2 ಲಕ್ಷ ರೂ. ವರೆಗೂ ಅನ್ನದಾತನಿಗೆ ಹೊರೆ: ಕೃಷಿ ಪಂಪಸೆಟ್ ಗಳಿಗೆ ಹೊಸ ವಿದ್ಯುತ್ ಸಂಪರ್ಕಕ್ಕಾಗಿ 22-09-2023 ರ ನಂತರ ಬಂದ ಅರ್ಜಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಮೂಲಸೌಕರ್ಯಗಳು ಸೇರಿ ವಿದ್ಯುತ್ ಪರಿವರ್ತಕ (ಟ್ರಾನ್ಸಫಾರ್ಮರ್) ಸಹಿತ ರೈತರು ಸ್ವಂತ ಖರ್ಚಿನಲ್ಲೇ ಪಡೆಯಬೇಕಾಗಿದೆ. ಅಲ್ಲದೇ ಇದಕ್ಕಾಗಿ ಅಂದಾಜು ಪತ್ರಿಕೆಯ ದರದ 10 % ಎಸ್ಕಾಂಗಳಿಗೆ ಕೈಯಿಂದ ಕಟ್ಟಬೇಕು. ಈಗಿನ ಪರಸ್ಥಿತಿಯಲ್ಲಿ ಒಬ್ಬ ರೈತ ನೀರಾವರಿ ಪಂಪಸೆಟ್ ಗೆ ವಿದ್ಯುತ್ ಸಂಪರ್ಕ ಪಡೆಯಲು ಕನಿಷ್ಟ 2 ಲಕ್ಷ ಖರ್ಚು ಮಾಡುವ ಪರಿಸ್ಥಿತಿ ಬಂದೊದಗಿದೆ. 

ಅಧಿಕಾರಿಗಳು ಪ್ರಾಮಾಣಿಕ ಜನಸೇವೆ ಮಾಡಿ: ಎಚ್.ಡಿ.ಕುಮಾರಸ್ವಾಮಿ

ಸರ್ಕಾರದ ವಿರುದ್ಧ ರೈತರ ಆಕ್ರೋಶ ; ಇಂಡಿ ರೈತರು ಹೈರಾಣ್: ಸರ್ಕಾರದ ಈ ರೈತವಿರೋಧಿ ನಿರ್ಧಾರಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ವಿಶೇಷವಾಗಿ ಇಂಡಿ ತಾಲ್ಲೂಕು ಭಾಗದಲ್ಲಿ ಅತಿ ಹೆಚ್ಚು ಕೃಷಿ ಪಂಪಸೆಟ್ ಗಳ ಬಳಕೆ ಮಾಡಲಾಗುತ್ತದೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿಯೇ ಅತಿ ಹೆಚ್ಚು ಕೃಷಿ ಪಂಪಸೆಟ್ ಗಳಿರುವುದು ಇಂಡಿ ತಾಲ್ಲೂಕಿನಲ್ಲಿ ಎಂಬುದು ಗಮನಿಸಬೇಕಾದ ವಿಚಾರ.

click me!