ಗೋ ಹತ್ಯೆ ಮಾಡುವವರು ಗೋ ಮಾಂಸ ಸೇವನೆ ಮಾಡುವವರು ಪಾಪಿಗಳು, ರಾಕ್ಷಕರು ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ (ಆ.31): ಗೋಮಾಂಸ ಭಕ್ಷಕರು ರಾಕ್ಷಸರು, ಮಹಾಪಾಪಿಗಳೆಂದು ಟೀಕಿಸಿದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ದೇಶದಲ್ಲಿ ಗೋಮಾಂಸ ರಪ್ತು ಮೇಲೆ ನಿಷೇಧ ಹೇರುವ ಪ್ರಬಲ ಕಾನೂನು ಜಾರಿಗೆ ತರಬೇಕೆಂದು ಅಭಿಪ್ರಾಪಟ್ಟರು.
ನಗರದ ಹೊರ ವಲಯದ ಚಿತ್ರಾವತಿ ಸಮೀಪ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವೆಂಕಟೇಶ್ವರ ಗೋಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಗೋಹತ್ಯೆ ನಿಷೇದಕ್ಕೆ ಕಠಿಣ ಕಾನೂನು ಜಾರಿ ಅಗತ್ಯವಾಗಿದ್ದು ಕೇಂದ್ರ ಸರ್ಕಾರ ಸದ್ಯದಲೇ ಇತಂಹ ಕಾನೂನು ರೂಪಿಸುವ ವಿಶ್ವಾಸವಿದೆ ಎಂದರು.
ಜಾನುವಾರು ಮನೆಯ ಸದಸ್ಯನಿದ್ದಂತೆ
ದೇಶದ ಪರಂಪರೆ, ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನ ಇದೆ. ಆದರೆ ವಯಸ್ಸು ಆಯಿತು ಎನ್ನುವ ಕಾರಣಕ್ಕೆ ರಾಸುಗಳನ್ನು ಕಸಾಯಿಖಾನಗೆ ಮಾರಾಟ ಮಾಡುವುದು ಸರಿಯಲ್ಲ. ಜಾನುವಾರುಗಳು ಪ್ರತಿ ಮನೆಗೆ ಕುಟುಂಬದ ಸದಸ್ಯರು ಇದ್ದಂತೆ. ಹಸುಗಳು ಕಲ್ಪವೃಕ್ಷಕ್ಕೆ ಸಮಾನವವು. ಆದರೆ ಮನುಷ್ಯನ ತನ್ನ ನಾಲಿಗೆಯ ರುಚಿಗಾಗಿ ಗೋಸತಂತಿಯನ್ನು ನಾಶ ಮಾಡಲು ಹೊರಟಿರುವುದು ಸರಿಯಲ್ಲ. ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕಾದರೆ ಸಿರಿಧಾನ್ಯಗಳನ್ನು ಬೆಳೆಯಬೇಕು. ಸಾವಯುವ ಕೃಷಿಗೆ ಹೆಚ್ಚು ಒತ್ತು ಕೊಡಬೇಕು ಎಂದರು.
ಸಿದ್ದರಾಮಯ್ಯಗೆ ಸಚಿವ ಸುಧಾಕರ್ ತಿರುಗೇಟು...
ಭಾರತೀಯ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ನಂಬಿಕೆ ಇರುವ ಪ್ರತಿಯೊಬ್ಬರು ಗೋಹತ್ಯೆ ಹಾಗು ಗೋಮಾಂಸ ಸೇವನೆ ವಿರುದ್ಧ ಹೋರಾಡಬೇಕಿದೆ. ಆದ್ದರಿಂದ ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧ ಹಾಗೂ ಗೋಮಾಂಸ ರಪ್ತು ಮೇಲೆ ನಿಷೇಧ ಹೇರುವ ಕಾನೂನು ರೂಪಿಸುವ ಅಗತ್ಯವಿದೆ. ರಾಜ್ಯಾದ್ಯಂತ ಗೋಹತ್ಯೆ ನಿಷೇಧಿಸಲು ದೊಡ್ಡ ಆಂದೋಲನ ರೂಪಿಸುವ ಅಗತ್ಯವಿದೆ. ಗೋಹತ್ಯೆ ಅತ್ಯಂತ ಅಮಾನವೀಯ ಹಾಗೂ ರಾಕ್ಷಸಿ ಪ್ರವೃತ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಸಂರಕ್ಷಣೆ ಪುಣ್ಯದ ಕೆಲಸ
ಇತ್ತೀಚಿನ ದಿನಗಳಲ್ಲಿ ಒಕ್ಕಲುತನ ನಡೆಸುವರು ಗೋ ಸಂರಕ್ಷಣೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ, ಗೋಸಂರಕ್ಷಣೆ ಒಂದು ಪುಣ್ಯದ ಕೆಲಸವಾಗಿದ್ದು ಈ ದಿಸೆಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಗೋಶಾಲೆಗಳ ತೆರವಿಗೆ ಮುಂದಾಗಿರುವುದು ಸಂತಸ ತಂದಿದ್ದು ಜಿಲ್ಲೆಯಲ್ಲಿ ಗೋಮಾಂಸ ನಿಷೇಧಕ್ಕೆ ಎಲ್ಲ ರೀತಿಯ ಸಹಕಾರದ ಜೊತೆಗೆ ಗೋಶಾಲೆಗಳ ನಿರ್ಮಾಣಕ್ಕೆ ಅಗತ್ಯ ಜಮೀನು ಹಾಗು ಆರ್ಥಿಕ ನೆರವುನ್ನು ರಾಜ್ಯ ಸರ್ಕಾರದಿಂದ ಒದಗಿಸಿ ಕೊಡುವುದಾಗಿ ಸಚಿವ ಸುಧಾಕರ್ ಭರವಸೆ ನೀಡಿದರು.
ಸಚಿವ ಅಶೋಕ್ ಉಸ್ತುವಾರಿ ವಯಲಯದಲ್ಲಿ ಕೈಮೀರಿದ ಕೊರೋನಾ: ಸುಧಾಕರ್ ಕಳವಳ...
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಮಿಥುನ್ ಕುಮಾರ್, ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷ ಬಣಸವಾಡಿ ನಾಗಣ್ಣ, ರಾಜ್ಯ ಉಪಾಧ್ಯಕ್ಷ ಹೆಚ್.ವಿ.ವೆಂಕಟೇಶ್, ಜಿಲ್ಲಾಧ್ಯಕ್ಷ ಟಿ.ಆರ್.ಹರೀಶ್ ಕುಮಾರ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮುಖಂಡರಾದ ಅಗಲಗುರ್ಕಿ ರಾಜಣ್ಣ, ರಮೇಶ್, ಬಾಬು, ನಾರಾಯಣಸ್ವಾಮಿ ಹಾಜರಿದ್ದರು.
ಕೊರೊನಾ ವಾರಿಯರ್ಸ್ಗೆ ಸನ್ಮಾನ:
ಇದೇ ವೇಳೆ ವೆಂಕಟೇಶ್ವರ ಗೋಶಾಲೆ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ರಾಗಿ ದುಡಿಯುತ್ತಿರುವ ವಿವಿಧ ಸಂಘಟನೆಗಳ ಮುಖಂಡರನ್ನು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಪದಾಧಿಕಾರಿಗಳು ಸನ್ಮಾನಿಸಿದರು.
ಗೋಮಾಂಸ ಸೇವನೆ ಅತ್ಯಂತ ಪಾಪದ ಕೆಲಸ. ರಾಜ್ಯದಲ್ಲಿ ಗೋಹತ್ಯೆ ನಿಷೇದ ಕಾನೂನು ಜಾರಿಗೆ ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರಮ ವಹಿಸಬೇಕು. ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿರುವ ಗೋಮಾಂಸ ಸೇವನೆ ಹಾಗು ಗೋಹತ್ಯೆಯನ್ನು ದೇಶದಲ್ಲಿ ನಿಷೇಧಿಸುವ ಕಾನೂನು ಜಾರಿಗೊಳ್ಳಬೇಕಿದೆ.
ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ.