ಬೆಂಗಳೂರಲ್ಲಿ ಜಾರಿಯಾಗಲಿದೆ ಸಮುದಾಯಿಕ ಮಳೆನೀರು ಕೊಯ್ಲು ಯೋಜನೆ; ಕೆರೆಗಳ ಸುತ್ತಲಿನ ಮನೆಗಳಿಗೆ ಅಳವಡಿಕೆ

Published : Mar 26, 2024, 07:16 PM IST
ಬೆಂಗಳೂರಲ್ಲಿ ಜಾರಿಯಾಗಲಿದೆ ಸಮುದಾಯಿಕ ಮಳೆನೀರು ಕೊಯ್ಲು ಯೋಜನೆ; ಕೆರೆಗಳ ಸುತ್ತಲಿನ ಮನೆಗಳಿಗೆ ಅಳವಡಿಕೆ

ಸಾರಾಂಶ

ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳ ಸುತ್ತಲಿರುವ ಮನೆ ಹಾಗೂ ಕಟ್ಟಡಗಳಿಗೆ ಸಮುದಾಯ ಮಳೆ ನೀರು ಕೊಯ್ಲು ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ.

ಬೆಂಗಳೂರು (ಮಾ.26): ಅಂತರ್ಜಲ ಕುಸಿತದಿಂದ ನೀರಿನ ಅಭಾವಕ್ಕೆ ತುತ್ತಾಗಿರುವ ಬೆಂಗಳೂರು ನಗರದಲ್ಲಿ ಅಂತರ್ಜಲ ವೃದ್ಧಿಸುವ ಹಾಗೂ ಕೆರೆಗಳಿಗೆ ಮಳೆ ನೀರು ತುಂಬಿಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB)ಯಿಂದ ಸಮುದಾಯ ಮಳೆ ಕೊಯ್ಲು (Bengaluru Community rainwater harvesting) ಯೋಜನೆ ಜಾರಿಗೆ ತರುವುದಕ್ಕೆ ಚಿಂತನೆ ಮಾಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬೆಂಗಳೂರು ನಗರದಲ್ಲಿ ಕಟ್ಟಡಗಳಲ್ಲಿ ಮಳೆ ನೀರು ಕೋಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಕಟ್ಟಡಗಳಲ್ಲಿನ ಜಾಗದ ಕೊರತೆ ಹಾಗೂ ನಿರ್ಲಕ್ಷದಿಂದ ಇದರ ಸರಿಯಾದ ಅನುಷ್ಠಾನ ಸಾಧ್ಯವಾಗಿಲ್ಲ. ಬಹುತೇಕ ಕಡೆಗಳಲ್ಲಿ ಕೇವಲ ಅಗತ್ಯ ಅನುಮತಿ ಪಡೆದುಕೊಳ್ಳಲು ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿದ್ದು, ಮಳೆ ನೀರನ್ನ ಸಂಗ್ರಹಿಸಿ ಒಳಚರಂಡಿಗೆ ನೇರವಾಗಿ ಹರಿಯಬಿಡಲಾಗುತ್ತಿದೆ. ಇದರಿಂದ ಮಳೆಗಾಗಲದಲ್ಲಿ ಒಳಚರಂಡಿ ವ್ಯವಸ್ಥೆ ಒತ್ತಡಕ್ಕೆ ಒಳಗಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಅಲ್ಲದೇ, ಇದರಿಂದ ಅಮೂಲ್ಯ ನೀರು ವ್ಯರ್ಥವಾಗಿ ಹರಿದು ಚರಂಡಿಪಾಲಾಗುತ್ತಿದೆ. ನೀರು ವ್ಯರ್ಥವಾಗದಂತೆ ಅಮೂಲ್ಯ ಮಳೆ ನೀರನ್ನ ಸಂಗ್ರಹಿಸಿ ಅದನ್ನ ಅಂತರ್ಜಲ ವೃದ್ದಿಗೆ ಬಳಸಿಕೊಳ್ಳಲು ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌ ಯೋಜನೆಯನ್ನು ಜಲಮಂಡಳಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. 

ಬೆಂಗಳೂರು ಜನರಿಗೆ ತಾಳಲಾಗುತ್ತಿಲ್ಲ, ಬಿಬಿಎಂಪಿ ಮಾರ್ಷಲ್‌ಗಳ ಕಿರುಕುಳ; ವೃದ್ಧನ ಕಣ್ಣೀರಿಗೂ ಕರಗದ ಕಟುಕರು

ಸಮುದಾಯ ಮಳೆ ನೀರು ಕೊಯ್ಲು ಎಂದರೇನು? 
ಕೆರೆಗಳ ಸುತ್ತಲಿನ ಮನೆಗಳ ಮೇಲೆ ಬೀಳುವ, ವಿಶಾಲ ಕಟ್ಟಡಗಳ ಮೇಲೆ ಬೀಳುವ ಹಾಗೂ ಬಯಲು ಪ್ರದೇಶಗಳ ಮೇಲೆ ಬೀಳುವ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಲು ಅಥವಾ ಮರುಬಳಕೆಗೆ ಉಪಯೋಗ ಮಾಡಿಕೊಳ್ಳುವುದಕ್ಕೆ ಸಮುದಾಯ ಮಳೆ ನೀರು ಕೊಯ್ಲು ಎಂದು ಕರೆಯುತ್ತಾರೆ. ಇದರಿಂದ ಮಳೆ ನೀರು ವ್ಯರ್ಥವಾಗಿ ರಾಜಕಾಲುವೆಗಳ ಮೂಲಕ ಹರಿದು ಹೋಗುವುದು ತಪ್ಪುತ್ತದೆ. ಜೊತೆಗೆ, ಜನವಸತಿ ಪ್ರದೇಶಗಳಲ್ಲಿ ಉಂಟಾಗುವ ಪ್ರವಾಹ ನಿಯಂತ್ರಣ ಹಾಗೂ ನೀರನ್ನು ಇಂಗಿಸುವುದಕ್ಕೆ ಅನುಕೂಲ ಆಗುವುದು.

ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೂ ಕಾಡುವುದೇ ಜಲಕಂಟಕ; ಬಿಬಿಎಂಪಿಯಿಂದ ಪೂರ್ವಭಾವಿ ಸಭೆ!

ಕೆರೆಗಳ 500 ಮೀ. ಸುತ್ತಲಿನ ಕಟ್ಟಡಗಳಿಗೆ ಅಳವಡಿಕೆ:  ನಗರದಲ್ಲಿ ಮಳೆ ಬಂದಾಗ ಅಪಾರ ಪ್ರಮಾಣದಲ್ಲಿ ಹರಿದು ಹೋಗುವ ಮಳೆ ನೀರನ್ನ ಸಮರ್ಪಕವಾದ ವ್ಯವಸ್ಥೆಯ ಮೂಲಕ ಕೆರೆಗಳಿಗೆ ಹರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದರಲ್ಲೂ ಕೆರೆಗಳಿಂದ 500 ಮೀಟರ್‌ ಸುತ್ತಳತೆಯಲ್ಲಿರುವಂತಹ ಅಪಾರ್ಟ್‌ಮೆಂಟ್‌ಗಳು, ಸಾರ್ವಜನಿಕ ಪ್ರದೇಶಗಳು ಹಾಗೂ ದೊಡ್ಡ ಕಟ್ಟಡಗಳಿಂದ ಪೈಪ್‌ಲೈನ್‌ ಮೂಲಕ ಕೆರೆಗಳಿಗೆ ನೇರವಾಗಿ ಮಳೆ ನೀರನ್ನ ತುಂಬಿಸುವ ಚಿಂತನೆ ನಮ್ಮದಾಗಿದೆ. ಇದರಿಂದ ಕೆರೆಗಳಿಗೆ ಅಮೂಲ್ಯ ಮಳೆ ನೀರು ತುಂಬುವ ವ್ಯವಸ್ಥೆ ಮಾಡುವುದು ಸಾಧ್ಯವಾಗಲಿದ್ದು, ಅಂತರ್ಜಲ ವೃದ್ದಿಗೂ ಸಹಕಾರಿಯಾಗಲಿದೆ. ಮೊದಲ ಹಂತದಲ್ಲಿ ವರ್ತೂರು, ಬೆಳ್ಳಂದೂರು ಭಾಗದಲ್ಲಿ ಈ ಯೋಜನೆಯನ್ನ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಂಡಳಿ ಚಿಂತನೆ ನಡೆಸಿದೆ ಎಂದು ಬಿಡಬ್ಲ್ಯೂಎಸ್ಎಸ್‌ಬಿ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!