ಇ-ಆಫೀಸ್‌ ಅಳ​ವ​ಡಿ​ಕೆ: ರಾಜ್ಯ​ದಲ್ಲೇ ಪ್ರಥಮ ಜಿಲ್ಲೆ​ಯಾಗಿ ಶಿವ​ಮೊಗ್ಗ ಹೆಗ್ಗುರುತು

By Kannadaprabha News  |  First Published Aug 14, 2023, 11:22 AM IST

ಸರ್ಕಾರಿ ಕಚೇರಿಗಳನ್ನು ಕಾಗದ ರಹಿತವಾಗಿಸಲು ಆರಂಭಿಕ ಹೆಜ್ಜೆಯಾಗಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಅದರ ವ್ಯಾಪ್ತಿಯ ಎಲ್ಲ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್‌ ವ್ಯವಸ್ಥೆಯನ್ನು ಆಗಸ್ಟ್‌ 1ರಿಂದ ಜಾರಿಗೊಳಿಸಲಾಗಿದೆ.


ಶಿವಮೊಗ್ಗ (ಆ.14) :  ಸರ್ಕಾರಿ ಕಚೇರಿಗಳನ್ನು ಕಾಗದ ರಹಿತವಾಗಿಸಲು ಆರಂಭಿಕ ಹೆಜ್ಜೆಯಾಗಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಅದರ ವ್ಯಾಪ್ತಿಯ ಎಲ್ಲ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್‌ ವ್ಯವಸ್ಥೆಯನ್ನು ಆಗಸ್ಟ್‌ 1ರಿಂದ ಜಾರಿಗೊಳಿಸಲಾಗಿದೆ.

ಪಾರದರ್ಶಕ ಆಡಳಿತ ಹಾಗೂ ತ್ವರಿತಗತಿಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಗಳು ಮುಂದಾಗಿವೆ. ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್‌ ತಂತ್ರಾಂಶ ಅಳವಡಿಸಿವೆ. ಈ ವ್ಯವಸ್ಥೆ ಒಳಗೊಂಡ ರಾಜ್ಯದ ಮೊದಲ ಜಿಲ್ಲೆ ಎಂಬ ಶ್ರೇಯಕ್ಕೂ ಶಿವಮೊಗ್ಗ ಪಾತ್ರವಾಗಿದೆ.

Tap to resize

Latest Videos

ಮಾಜಿ ಗೃಹ ಸಚಿವರ ತವರಲ್ಲೇ ಗಾಂಜಾ ಮಾಫಿಯಾ; ದಂಧೆಗೆ ಬ್ರೇಕ್ ಹಾಕುತ್ತಾ ಪೊಲೀಸ್ ಇಲಾಖೆ?

ಏನಿದು ಇ-ಕಚೇರಿ?:

ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಉದ್ದೇಶಗಳಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿದರೂ ಕಚೇರಿಯೊಳಗೆ ಅದು ಆನ್‌ಲೈ​ನ್‌ನಲ್ಲೇ ಹೋಗುತ್ತದೆ. ಅರ್ಜಿದಾರರಿಗೆ ಅದರ ಸಂಖ್ಯೆ ಸಹಿತ ಸ್ವೀಕೃತಿ ನೀಡಲಾಗುತ್ತದೆ. ಅರ್ಜಿ ಸ್ಕ್ಯಾ‌ನ್‌ ಮಾಡಿ ಆನ್‌ಲೈನ್‌ಗೆ ಅಪ್ಲೋಡ್‌ ಮಾಡಿ, ಸಂಬಂಧಿಸಿದ ಅಧಿಕಾರಿಗೆ ರವಾನಿಸಲಾಗುತ್ತದೆ. ಅಂತಿಮವಾಗಿ ಆನ್‌ಲೈನ್‌ ಮೂಲಕವೇ ವಿಲೇವಾರಿ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರು ಅರ್ಜಿ ಹಿಡಿದುಕೊಂಡು ಟೇಬಲ್‌ಗಳಿಗೆ ಅಲೆಯುವುದು ತಪ್ಪಿದೆ. ಇ-ಆಫೀಸ್‌ ವ್ಯವಸ್ಥೆಗೆ ಒಳಪಟ್ಟಎಲ್ಲ ಕಚೇರಿಗಳಿಗೆ ಕೆಎಸ್‌ಡಬ್ಲ್ಯೂಎಎನ್‌ ಸಂಪರ್ಕ ಪಡೆಯಲಾಗಿದೆ. ಅಲ್ಲದೇ, ಕಚೇರಿಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಸರ್ಕಾರದಿಂದ ನೀಡಲಾಗಿದೆ. ‘ಜಿಒವಿ’ಯಿಂದ ಆರಂಭವಾಗುವ ಇ-ಮೇಲ್‌ ನೀಡಲಾಗಿದೆ. ಅರ್ಜಿ ಯಾವಾಗ ಬಂತು, ಯಾರು ಕಳುಹಿಸಿದ್ದು, ನಿರ್ವಹಣೆಗೆ ತೆಗೆದುಕೊಂಡ ಸಮಯ, ನಿರ್ವಹಣೆ ಮಾಡಿದ್ದು ಯಾರು ಎಂಬುದರ ನಿಖರ ಮಾಹಿತಿಗಳೆ​ಲ್ಲ ಇರುತ್ತವೆ. ಇದರಿಂದ ಕಡತಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ತಪ್ಪಿಸಬಹುದು. ಅಲ್ಲದೇ, ಕಡತಗಳು ಯಾವ ಸ್ಥಿತಿಯಲ್ಲಿವೆ, ಕೆಲಸ ಪೂರ್ಣವಾಗಿದೆಯೇ? ಇಲ್ಲವೇ ಎಂದು ತಿಳಿದುಕೊಳ್ಳಲು ಸಂಬಂಧಿಸಿದ ಕೇಸ್‌ ವರ್ಕರ್‌ ಕರೆದು ಕೇಳಬೇಕೆಂದಿಲ್ಲ. ತಮಗೆ ನೀಡಲಾದ ಲಾಗಿನ್‌ ಐಡಿ ಮೂಲಕ ಕುಳಿತಲ್ಲೇ ಕಂಪ್ಯೂಟರ್‌ ಮೂಲಕ ಕಡತದ ಸ್ಥಿತಿಗತಿ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಬಹುದು.

ಇ-ಆಫೀಸ್‌ ವ್ಯವ​ಸ್ಥೆ​ಯಿಂದ ಆಡ​ಳಿತ ಯಂತ್ರಕ್ಕೆ ವೇಗ: ಡಿಸಿ

ಆಡಳಿತ ಯಂತ್ರಕ್ಕೆ ವೇಗ ದೊರೆಯಲಿದೆ. ನಗರ ಸ್ಥಳೀಯ ಸಂಸ್ಥೆಯಿಂದ ಕಡತ ಜಿಲ್ಲಾಧಿಕಾರಿ ಕಚೇರಿಗೆ ಔಟ್‌ವರ್ಡ್‌ ಆಗಿ ಟಪಾಲು ಮೂಲಕ ನನ್ನ ಕಚೇರಿಗೆ ಬರಲು 15 ದಿನ ಆಗುತ್ತದೆ. ಅದೇ ಇ-ಆಫೀಸ್‌ ಸೇವೆ​ಯಿಂದ ಈ ಹೆಚ್ಚಿನ ಸಮಯ ಉಳಿಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಹೇಳಿದರು.

 

ಶಿವಮೊಗ್ಗ ವಿಮಾನಕ್ಕೆ ಭರ್ಜರಿ ಡಿಮ್ಯಾಂಡ್‌, ಇಂಡಿಗೋ ಟಿಕೆಟ್‌ ದೋಸೆಯಂತೆ ಬಿಕರಿ, ದರ 4 ಪಟ್ಟು ಏರಿಕೆ!

ಕೆಲವೊಮ್ಮೆ ನಾವು ಕೇಳಿದರೆ ಡಿಸಿ ಕಚೇರಿಗೆ ಫೈಲ್‌ ಕಳುಹಿಸಿರುವೆ ಎಂದು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಹೇಳುತ್ತಾರೆ. ಇಲ್ಲಿ ಕೇಳಿದರೆ ಇನ್ನೂ ಫೈಲ್‌ ಬಂದಿಲ್ಲ ಎನ್ನುತ್ತಾರೆ. ಇ-ಆಫೀಸ್‌ ತಂತ್ರಾಂಶ ಅಳವಡಿಕೆಯಾದರೆ ಈ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿದೆ. ಯಾವ ಅಧಿ​ಕಾ​ರಿ-ಸಿಬ್ಬಂದಿ ಬಳಿ ಎಷ್ಟುದಿನ ಆ ಫೈಲ್‌ ಇತ್ತು ಎಂಬುದು ಇದರಿಂದ ಗೊತ್ತಾಗಲಿದೆ. ಉತ್ತರದಾಯಿತ್ವದ ಜೊತೆಗೆ ಸಮಯ ಪಾಲನೆ, ಫೈಲ್‌ಗಳು ಕಳವು ಆಗುವುದು ತಪ್ಪಲಿದೆ. ಸದ್ಯ ನಗರ ಸ್ಥಳೀಯ ಸಂಸ್ಥೆಗಳ ಕೆಲವು ಶಾಖೆಗಳಲ್ಲಿ ಇ-ಆಫೀಸ್‌ ತಂತ್ರಾಂಶ ಅಳವಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಡೀ ಕಚೇರಿಯಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿಸಿದರು.

click me!