ಕೊರೋನಾ ಸೋಂಕು ತಡೆಗೆ ಉಚಿತವಾಗಿ 3ನೇ ಡೋಸ್ ಕೋವಿಡ್ ಲಸಿಕೆ ನೀಡಿಕೆ ಅವಧಿ ಮುಗಿಯುಲು ಕೇವಲ 12 (ಸೆ.30) ದಿನ ಬಾಕಿ ಇದ್ದರೂ ರಾಜ್ಯದ ಬಹುತೇಕ ಜನರು ಲಸಿಕೆ ಪಡೆಯಲು ಉತ್ಸಾಹ ತೋರುತ್ತಿಲ್ಲ.
ರಾಕೇಶ್ ಎನ್.ಎಸ್.
ಬೆಂಗಳೂರು (ಸೆ.18): ಕೊರೋನಾ ಸೋಂಕು ತಡೆಗೆ ಉಚಿತವಾಗಿ 3ನೇ ಡೋಸ್ ಕೋವಿಡ್ ಲಸಿಕೆ ನೀಡಿಕೆ ಅವಧಿ ಮುಗಿಯುಲು ಕೇವಲ 12 (ಸೆ.30) ದಿನ ಬಾಕಿ ಇದ್ದರೂ ರಾಜ್ಯದ ಬಹುತೇಕ ಜನರು ಲಸಿಕೆ ಪಡೆಯಲು ಉತ್ಸಾಹ ತೋರುತ್ತಿಲ್ಲ. ಉಚಿತ ಅಭಿಯಾನ ಆರಂಭವಾಗಿ 2 ತಿಂಗಳು ಮೇಲಾದರೂ ಕೇವಲ 91.85 ಲಕ್ಷ ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ಇನ್ನೂ 3.76 ಕೋಟಿ ಜನರು ಲಸಿಕೆ ಪಡೆಯುವುದು ಬಾಕಿ ಇದೆ. ಕಳೆದ ಜ.10ರಿಂದ ಕೇಂದ್ರ ಸರ್ಕಾರವು ಹಿರಿಯ ನಾಗರಿಕರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆ ನೀಡಿತ್ತು. ಬಳಿಕ ಏ.11ರಿಂದ ವಯಸ್ಕ ನಾಗರಿಕರೆಲ್ಲರಿಗೆ 400 ರು.ಗಳ ಶುಲ್ಕ ನೀಡಿ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅವಕಾಶ ಕಲ್ಪಿಸಿತ್ತು.
undefined
ಆದರೆ ಹಣ ಕೊಟ್ಟು ಲಸಿಕೆ ಪಡೆಯಲು ಜನರು ಮುಂದೆ ಬಾರದ ಹಿನ್ನೆಲೆಯಲ್ಲಿ ‘ಸ್ವಾತಂತ್ರ್ಯ ಅಮೃತ ಮಹೋತ್ಸವ’ದ ಅಂಗವಾಗಿ ಜೂ.15 ರಿಂದ ಸೆ.30ರವರೆಗೆ 75 ದಿನಗಳ ಕಾಲ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಉಚಿತ ಲಸಿಕೆ ನೀಡುವ ಅವಧಿ ಮುಕ್ತಾಯಗೊಳ್ಳುತ್ತಾ ಬರುತ್ತಿದ್ದರೂ ಅರ್ಹ ಫಲಾನುಭವಿಗಳು ಲಸಿಕಾ ಕೇಂದ್ರದತ್ತ ತಲೆ ಹಾಕುತ್ತಿಲ್ಲ. ರಾಜ್ಯ ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಅನ್ವಯ 4.68 ಕೋಟಿ ಅರ್ಹರ ಪೈಕಿ ಸೆ.16ರವರೆಗೆ 91.85 ಲಕ್ಷ ಮಂದಿ ಮಾತ್ರ 3ನೇ ಡೋಸ್ ಲಸಿಕೆ ಪಡೆದಿದ್ದಾರೆ. ಅಂದರೆ 3.76 ಕೋಟಿ ಮಂದಿ 3ನೇ ಡೋಸ್ ಪಡೆದಿಲ್ಲ.
Covid-19: ಕೋವಿಶೀಲ್ಡ್ ಲಸಿಕೆಯಿಂದ ಪುರುಷತ್ವಕ್ಕೆ ಹಾನಿ ಇದೆಯಾ?
ಹಿರಿಯರ ಹಿಂದೇಟು: ಕೋವಿಡ್‌ನಿಂದ ಹೆಚ್ಚಿನ ಅಪಾಯಕ್ಕೆ ಸಿಲುಕುವ ಹಿರಿಯ ನಾಗರಿಕರೇ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಅರ್ಹ ಫಲಾನುಭವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಪಡೆದಿಲ್ಲ. 3.81 ಕೋಟಿ ಅರ್ಹ ವಯಸ್ಕರಲ್ಲಿ ಕೇವಲ 46 ಲಕ್ಷ ಮಂದಿ ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. ಹಾಗೆಯೇ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಲ್ಲಿಯೂ ಬಹಳಷ್ಟುಮಂದಿ ಲಸಿಕೆ ಪಡೆದುಕೊಂಡಿಲ್ಲ.
ಲಸಿಕೆಗೆ ನಿರಾಸಕ್ತಿ ಏಕೆ?: ಕೋವಿಡ್ ಕುರಿತು ಭಯ ಕಡಿಮೆ ಆಗಿರುವುದರಿಂದ ಜನರು ಲಸಿಕೆ ಪಡೆಯಲು ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ. ಆದರೆ ಸಹ ಅಸ್ವಸ್ಥತೆ ಹೊಂದಿರುವವರು, ಜೀವ ನಿರೋಧಕ ಶಕ್ತಿ ಕ್ಷೀಣಿಸಿರುವವರು, ಹಿರಿಯ ನಾಗರಿಕರು, ಆರೋಗ್ಯ ಕಾರ್ಯಕರ್ತರು ಮೂರನೇ ಡೋಸ್ ಪಡೆಯಬೇಕು. ಮೂರನೇ ಡೋಸ್ ಪಡೆದವರು ಕೋವಿಡ್‌ನಿಂದ ಮರಣವನ್ನಪ್ಪಿರುವ ಪ್ರಕರಣಗಳು ಕಡಿಮೆ ಇದೆ. ಜನಜೀವನ ಸಾಮಾನ್ಯ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಅನ್ನುಆದ್ಯತೆ ಮೇಲೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಈ ಮಧ್ಯೆ ಅ.1 ರಿಂದ ಉಚಿತ ಮುನ್ನೆಚ್ಚರಿಕೆ ಡೋಸ್ ಇರಲಿದೆಯೇ, ಇಲ್ಲವೇ ಎಂಬುದರ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಅಭಿಯಾನದ ಅವಧಿ ಪೂರ್ಣಗೊಂಡ ಬಳಿಕ ಲಸಿಕೆಗೆ ದರ ನಿಗದಿ ಪಡಿಸಬೇಕೇ ಅಥವಾ ಉಚಿತ ಲಸಿಕೆ ಅಭಿಯಾನ ಮುಂದುವರಿಸಬೇಕೇ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Covid-19: ಶೇ.75 ರಷ್ಟು ಮಕ್ಕಳಲ್ಲಿ ಕೊರೋನಾ ಪ್ರತಿಕಾಯ: ಲಸಿಕೆ ಪಡೆಯದಿದ್ದರೂ ರೋಗ ನಿರೋಧಕ ಶಕ್ತಿ
ವರ್ಗ ಫಲಾನುಭವಿಗಳು 3ನೇ ಡೋಸ್ ಪಡೆದವರು ಬಾಕಿ
ಆರೋಗ್ಯ ಕಾರ್ಯಕರ್ತರು 7,53,518 5,25,736 2,27,782
ಮುಂಚೂಣಿ ಕಾರ್ಯಕರ್ತರು 9,36,627 5,83,593 3,53,034
18 ರಿಂದ 59 ವರ್ಷದವರು 3,81,30,008 46,06,550 33,523,458
60 ವರ್ಷ ಮೇಲ್ಟಟ್ಟವರು 70,59,646 34,69,730 35,89,916