1 ಟ್ರಿಲಿಯನ್‌ ಡಿಜಿಟಲ್‌ ಆರ್ಥಿಕತೆ ಭಾರತ ದೇಶದ ಗುರಿ: ಸಚಿವ ರಾಜೀವ್‌ ಚಂದ್ರಶೇಖರ್‌

By Kannadaprabha News  |  First Published Jul 7, 2023, 8:43 AM IST

ಐಟಿ ಹಾರ್ಡ್‌ವೇರ್‌ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದ ಪ್ರಮುಖ ಪಾಲುದಾರನಾಗಿ ಹೊರಹೊಮ್ಮುವಂತೆ ಮಾಡುವ ಜೊತೆಗೆ ಮುಂದಿನ 2026ರ ವೇಳೆಗೆ ದೇಶದಲ್ಲಿ 24,600 ಕೋಟಿ (300 ಬಿಲಿಯನ್‌ ಡಾಲರ್‌) ಮೌಲ್ಯದ ಎಲೆಕ್ಟ್ರಾನಿಕ್‌ ಇಂಡಸ್ಟ್ರಿ ಹಾಗೂ 1 ಟ್ರಿಲಿಯನ್‌ ಡಿಜಿಟಲ್‌ ಆರ್ಥಿಕತೆ ಸಾಧಿಸುವುದು ಸರ್ಕಾರದ ಮಹತ್ವಾಕಾಂಕ್ಷೆಯ ಗುರಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಐಟಿ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.


ಬೆಂಗಳೂರು (ಜು.07): ಐಟಿ ಹಾರ್ಡ್‌ವೇರ್‌ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದ ಪ್ರಮುಖ ಪಾಲುದಾರನಾಗಿ ಹೊರಹೊಮ್ಮುವಂತೆ ಮಾಡುವ ಜೊತೆಗೆ ಮುಂದಿನ 2026ರ ವೇಳೆಗೆ ದೇಶದಲ್ಲಿ 24,600 ಕೋಟಿ (300 ಬಿಲಿಯನ್‌ ಡಾಲರ್‌) ಮೌಲ್ಯದ ಎಲೆಕ್ಟ್ರಾನಿಕ್‌ ಇಂಡಸ್ಟ್ರಿ ಹಾಗೂ 1 ಟ್ರಿಲಿಯನ್‌ ಡಿಜಿಟಲ್‌ ಆರ್ಥಿಕತೆ ಸಾಧಿಸುವುದು ಸರ್ಕಾರದ ಮಹತ್ವಾಕಾಂಕ್ಷೆಯ ಗುರಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಐಟಿ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.

ಗುರುವಾರ ನಗರದಲ್ಲಿ ‘ಡಿಜಿಟಲ್‌ ಇಂಡಿಯಾ ಡಯಲಾಗ್ಸ್‌ ಆನ್‌ ಪಿಎಲ್‌ಐ (ಪ್ರೊಡಕ್ಷನ್‌ ಲಿಂಕ್ಡ್‌ ಇನ್ಸೆಂಟಿವ್‌) ಯೋಜನೆ 2.0 ಫಾರ್‌ ಐಟಿ ಹಾರ್ಡ್‌ವೇರ್‌’ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮದು ಕೇವಲ ಒಂದು ಯೋಜನೆ ರೂಪಿಸಿ, ಅದನ್ನು ಜಾರಿಗೊಳಿಸಿ ಸುಮ್ಮನಾಗುವ ಸರ್ಕಾರವಲ್ಲ. ಆ ಯೋಜನೆಯಿಂದ ಉತ್ತಮ ಫಲಿತಾಂಶ ಹೊರಹೊಮ್ಮುವಂತೆ ಮಾಡುತ್ತೇವೆ. ಇದಕ್ಕೆ ಪೂರಕವಾಗಿಯೇ ಪ್ರೊಡಕ್ಷನ್‌ ಲಿಂಕ್ಡ್‌ ಇನ್ಸೆಂಟಿವ್‌ 2.0 ಯೋಜನೆಯನ್ನು ಐಟಿ ಹಾರ್ಡ್‌ವೇರ್‌ ಉದ್ಯಮದ ಬೆಳವಣಿಗೆ ದೃಷ್ಟಿಯಿಂದ ವಿಶೇಷವಾಗಿ ರೂಪಿಸಲಾಗಿದೆ. ಡಿಜಿಟಲ್‌ ಆರ್ಥಿಕತೆಯಿಂದಾಗಿ ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ ಭಾರತ ಅತೀ ವೇಗವಾಗಿ ಬೆಳೆಯುತ್ತಿದೆ ಎಂದರು.

Tap to resize

Latest Videos

Karnataka Budget 2023 Live Updates | ಕರ್ನಾಟಕ ಬಜೆಟ್

ದೇಶದಲ್ಲಿ ಸರ್ವರ್‌ ಮತ್ತು ಐಟಿ ಹಾರ್ಡ್‌ವೇರ್‌ ಉತ್ಪಾದನೆಗೆ ಪೂರಕ ವಾತಾವರಣವನ್ನು ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ಟಾರ್ಟ್‌ಅಪ್‌, ಉದ್ಯಮ ಮತ್ತು ಅಕಾಡೆಮಿಗಳ ಜೊತೆಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಜೊತೆಗೆ ಭಾರತದಲ್ಲಿ ಕೇಂದ್ರಗಳನ್ನು ತೆರೆಯಲು ಅಂತಾರಾಷ್ಟ್ರೀಯ ಮಟ್ಟದ ಉತ್ಪಾದಕ ಕಂಪನಿಗಳನ್ನು ನಾವು ಸ್ವಾಗತಿಸುತ್ತಿದ್ದು, ಅವುಗಳಿಗೆ ಅಗತ್ಯ ಪ್ರೋತ್ಸಾಹ, ಅಗತ್ಯ ನೆರವು ನೀಡುವುದಾಗಿ ತಿಳಿಸಿದರು. ಕಳೆದ ಮೇ ತಿಂಗಳಲ್ಲಿ ಸರ್ಕಾರ ಐಟಿ ಹಾರ್ಡ್‌ವೇರ್‌ ಕ್ಷೇತ್ರದ ಬೆಳವಣಿಗೆಗಾಗಿ .17 ಸಾವಿರ ಕೋಟಿ ಮೊತ್ತದ ಪಿಎಲ್‌ಐ 2.0 ಯೋಜನೆಗೆ ಅನುಮೋದನೆ ನೀಡಿದೆ. 

ಈ ಮೂಲಕ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಆಲ್‌ ಇನ್‌ ಒನ್‌ ಎಸಿ, ಸರ್ವರ್ಸ್‌ ಸೇರಿ ಸ್ಥಳೀಯ ಐಟಿ ಹಾರ್ಡ್‌ವೇರ್‌ ಬಿಡಿಭಾಗ ಉತ್ಪನ್ನ ಉದ್ಯಮಿಗಳ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಐಟಿ ಹಾರ್ಡ್‌ವೇರ್‌ ಕ್ಷೇತ್ರದಲ್ಲಿ ಭಾರತೀಯ ಮೂಲದ ಕಂಪನಿಗಳನ್ನು ಚಾಂಪಿಯನ್‌ ಆಗಿಸುವುದು ನಮ್ಮ ಉದ್ದೇಶ ಎಂದರು. ಮುಂದಿನ ಆರು ವರ್ಷ ಈ ಯೋಜನೆ ಮುಂದುವರಿಯಲಿದ್ದು, ಸುಮಾರು .2430 ಕೋಟಿ ಬಂಡವಾಳ ಹೂಡಿಕೆ ಮೂಲಕ ಅಂದಾಜು .3.35 ಲಕ್ಷ ಕೋಟಿ ಮೊತ್ತ ಮೌಲ್ಯದ ಐಟಿ ಹಾರ್ಡ್‌ವೇರ್‌ ಉತ್ಪಾದನೆ ಮಾಡುವ ಗುರಿಯಿದೆ. ಇದರಿಂದ ಸುಮಾರು ಹೊಸದಾಗಿ 75 ಸಾವಿರ ಹೊಸ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.

ಸ್ಮಾರ್ಟ್‌ಫೋನ್‌ ಉತ್ಪಾದನೆ ಹಾಗೂ ರಫ್ತಿನ ವಿಚಾರದಲ್ಲಿ ಭಾರತ ಸಾಧಿಸಿರುವ ಪ್ರಗತಿ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ, ಇದು ಆರಂಭ ಮಾತ್ರ. ಇದಕ್ಕಿಂತ ಅಗಾಧವಾದ ಸಾಧನೆ ಮುಂದಿನ ದಿನಗಳಲ್ಲಿ ಕಾಣಲಿದ್ದೇವೆ. ಮುಂದಿನ ದಶಕಗಳಲ್ಲಿ ಭಾರತ ಸ್ಮಾರ್ಟ್‌ಫೋನ್‌ ಉತ್ಪಾದನೆಯ ಪ್ರಮುಖ ಸೆಲೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್‌ಗಳು ಕೂಡ ದೇಶದಲ್ಲಿ ತಮ್ಮ ಕೇಂದ್ರವನ್ನು ತೆರೆದು ವಿಸ್ತಾರವಾಗಿ ವಹಿವಾಟು ನಡೆಸಲು ಆಸಕ್ತಿ ಹೊಂದಿವೆ ಎಂದರು. ಎಲೆಕ್ಟ್ರಾನಿಕ್‌ ಮತ್ತು ಐಟಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತೇಶ್‌ಕುಮಾರ್‌ ಸಿನ್ಹಾ, ಭಾರತೀಯ ಎಲೆಕ್ಟ್ರಾನಿಕ್‌ ಮತ್ತು ಸೆಮಿಕಂಡಕ್ಟರ್‌ ಅಸೋಸಿಯೇಶನ್‌ನ ಬೆಂಗಳೂರು ಸಿಇಒ ಕೆ.ಕೃಷ್ಣಮೂರ್ತಿ, ರಾಜೀವ್‌ ಖುಷು ಇದ್ದರು.

ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ: ಹುಂಡಿಯಲ್ಲಿ 2.47 ಕೋಟಿಗೂ ಹೆಚ್ಚು ನಗದು ಸಂಗ್ರಹ!

2014ರಿಂದ ಭಾರತದಲ್ಲಿ ಎಲೆಕ್ಟ್ರಾನಿಕ್‌ ಉತ್ಪಾದನಾ ಉದ್ಯಮವು ಸ್ಥಿರವಾಗಿ ವಾರ್ಷಿಕ ಸರಾಸರಿ (ಸಿಎಜಿಆರ್‌) ಶೇ.17ರಷ್ಟುಬೆಳವಣಿಗೆ ಸಾಧಿಸುತ್ತಿದೆ. ಸುಮಾರು 1 ಲಕ್ಷ ಕೋಟಿ ಉತ್ಪಾದನೆಯಿಂದ ಇದೀಗ .8,610 ಕೋಟಿ (105 ಬಿಲಿಯನ್‌ ಡಾಲರ್‌)ಯಷ್ಟುಉತ್ಪಾದನೆ ಸಾಧ್ಯವಾಗುತ್ತಿದೆ.
-ರಾಜೀವ್‌ ಚಂದ್ರಶೇಖರ್‌, ಕೇಂದ್ರ ಸಚಿವ

click me!